Homeಜಿಲ್ಲೆಕೆ.ಎಸ್.ಈಶ್ವರಪ್ಪರಿಗೆ ಮಾತಾಡುವ ಚಟ ಹೋಗಿಲ್ಲ: ಆರ್.ಪ್ರಸನ್ನಕುಮಾರ್

ಕೆ.ಎಸ್.ಈಶ್ವರಪ್ಪರಿಗೆ ಮಾತಾಡುವ ಚಟ ಹೋಗಿಲ್ಲ: ಆರ್.ಪ್ರಸನ್ನಕುಮಾರ್

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜೂ.18

ಕೆ.ಎಸ್.ಈಶ್ವರಪ್ಪ ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಅವಾಚ್ಯ ಶಬ್ದಗಳಿಂದ ಟೀಕೆ ಮಾಡಿದ್ದು, ಇದು ಅವರ ಹಿರಿತನಕ್ಕೆ ಒಳ್ಳೆಯದಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್ ಹೇಳಿದರು.

ಗುರುವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಶ್ವರಪ್ಪನವರಿಗೆ ಮಾಧ್ಯಮಗಳ ಮುಂದೆ ಬಾಯಿಗೆ ಬಂದAತೆ ಮಾತನಾಡುವ ಚಟ ಹೋಗಿಲ್ಲ. ಪ್ರಿಯಾಂಕ್ ಖರ್ಗೆ ಅವರಿಗೆ ಕೆಟ್ಟ ಪದಗಳನ್ನು ಬಳಸುವ ಮೂಲಕ ಟೀಕೆ ಮಾಡಿದ್ದಾರೆ. ಇದು ಅವರ ರಾಜಕೀಯ ಅನುಭವ ಹಾಗೂ ವಯಸ್ಸಿಗೆ ಶೋಭೆ ತರುವುದಿಲ್ಲ ಎಂದರು.

ಗಮನಿಸಿ: ದಲಿತರಿಗೆ ನವ ಬ್ರಾಹ್ಮಣರಿಂದಲೇ ಹೆಚ್ಚು ಶೋಷಣೆ: ಕಿಮ್ಮನೆ ರತ್ನಾಕರ್

ಈಶ್ವರಪ್ಪ ಅನುಭವಿ ರಾಜಕಾರಣಿ ಅವರ ಮೇಲೆ ಅಪಾರ ಗೌರವವಿದೆ. ಆದರೆ ರಾಜಕಾರಣಕ್ಕೆ ಏನೇನೋ ಮಾತನಾಡಬಾರದು. ಈಗ ಈಶ್ವರಪ್ಪನವರೆ ತಮ್ಮ ಮಗನ ರಾಜಕೀಯ ಭವಿಷ್ಯಕ್ಕೆ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾ ಮಗನನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಆದರೆ ನಾವಾಗಲಿ, ನಮ್ಮ ಪಕ್ಷವಾಗಲಿ ಯಾವತ್ತು ಅದರ ಬಗ್ಗೆ ಟೀಕೆ ಮಾಡಿಲ್ಲ. ಆದರೆ ಈಶ್ವರಪ್ಪ ಅಂತಹ ಸೌಜನ್ಯವನ್ನು ಕಾಪಾಡಿಕೊಳ್ಳಲು ಆಗುತ್ತಿಲ್ಲ. ಏನೇ ಇರಲಿ ಈಶ್ವರಪ್ಪ ಮಗನ ರಾಜಕೀಯ ಭವಿಷ್ಯಕ್ಕೆ ಹಾಗೂ ಅದಕ್ಕಾಗಿ ನಡೆಯುತ್ತಿರುವ ಪ್ರಯತ್ನಕ್ಕೆ ಶುಭಾವಾಗಲಿ ಎಂದು ಟೀಕಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments