Homeಜಿಲ್ಲೆಜಾತಿ ಪ್ರಮಾಣ ಪತ್ರ ಸಮಸ್ಯೆ ಪರಿಹರಿಸಿ: ಜಿಲ್ಲಾಧಿಕಾರಿಗಳಿಗೆ ಮನವಿ

ಜಾತಿ ಪ್ರಮಾಣ ಪತ್ರ ಸಮಸ್ಯೆ ಪರಿಹರಿಸಿ: ಜಿಲ್ಲಾಧಿಕಾರಿಗಳಿಗೆ ಮನವಿ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜೂ.18

ಆದಿ ದ್ರಾವಿಡ ತಮಿಳು ಸಮಾಜದ ಸದಸ್ಯರಿಗೆ ಜಾತಿ ಪ್ರಮಾಣ ಪತ್ರ ಪಡೆಯಲು ಇರುವ ತೊಡಕುಗಳನ್ನು ನಿವಾರಿಸಿ, ಸುಗಮವಾಗಿ ಪ್ರಮಾಣ ಪತ್ರ ವಿತರಿಸುವಂತೆ ಒತ್ತಾಯಿಸಿ ಜಿಲ್ಲಾ ಆದಿ ದ್ರಾವಿಡ ತಮಿಳು ಹಿತರಕ್ಷಣಾ ಸಮಿತಿ ವತಿಯಿಂದ ಗುರುವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಗಮನಿಸಿ: ಕೆ.ಎಸ್.ಈಶ್ವರಪ್ಪರಿಗೆ ಮಾತಾಡುವ ಚಟ ಹೋಗಿಲ್ಲ: ಆರ್.ಪ್ರಸನ್ನಕುಮಾರ್

ಈ ಹಿಂದೆ ತಾಲೂಕು ಕಚೇರಿಯಲ್ಲಿ ವಿತರಿಸುತ್ತಿದ್ದ ಜಾತಿ ಪ್ರಮಾಣ ಪತ್ರದ ದಾಖಲಾತಿ ಆಧಾರದ ಮೇಲೆ ಹಾಗೂ ಹೊಸದಾಗಿ ಜಾತಿ ಪ್ರಮಾಣ ಪತ್ರ ಕೋರಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ, ಅವರ ಬಳಿ ಇರುವ ದಾಖಲಾತಿಗಳು ಮತ್ತು ಸರ್ಕಾರದ ಜಾತಿ ಸಮೀಕ್ಷೆಯಲ್ಲಿ ನೋಂದಾಯಿಸಿರುವ ವರದಿಗಳ ಆಧಾರದ ಮೇರೆಗೆ ಪರಿಗಣಿಸಿ, ಜಿಲ್ಲೆಯಾದ್ಯಂತ ಹಾಗೂ ರಾಜ್ಯಾದ್ಯಂತ ಸುಗಮವಾಗಿ ಜಾತಿ ಪ್ರಮಾಣ ಪತ್ರ ನೀಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ನಿತ್ಯಾನಂದನ್, ಮಾಜಿ ಮಹಾ ಪೌರರಾದ ಏಳುಮಲೈ, ಜಯಪಾಲ್, ಎಸ್. ರಾಜು, ನಾರಾಯಣಸ್ವಾಮಿ, ರಮೇಶ್, ಅರುಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments