ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜೂ.27
ಒಕ್ಕಲಿಗ ಸಮುದಾಯಕ್ಕೆ ಮತ್ತು ಈ ನೆಲಕ್ಕೆ ಅವಿನಾಭಾವ ಸಂಬಂಧ ಇದೆ. ಯಾರು ನೆಲೆದ ಮೇಲೆ ಅದಮ್ಯವಾದ ಪ್ರೀತಿ ಇಟ್ಟುಕೊಳ್ಳುತ್ತಾರೊ. ಅವರಿಗೆ ಎಂದಿಗೂ ಸಾವಿಲ್ಲ. ಹಾಗಾಗಿ ಈಗಲೂ ಕೆಂಪೇಗೌಡರು ನಮ್ಮ ನಡುವೆ ಜೀವಂತವಾಗಿದ್ದಾರೆ ಎಂದು ಪ್ರೊ.ಕೆ.ಶ್ರೀಪತಿ ಹಳಗುಂದ ಹೇಳಿದರು.
ಗಮನಿಸಿ: 6 ತಿಂಗಳಲ್ಲಿ 24.55 ಲಕ್ಷದ ಗಾಂಜಾ ಪತ್ತೆ-ನಾಶಕ್ಕೆ ಪೊಲೀಸ್ ಇಲಾಖೆ ಮುಂದು
ಅವರು ಶನಿವಾರ ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಒಕ್ಕಲಿಗರ ಸಂಘದಿಂದ ಆಯೋಜಿಸಿದ್ದ ಶ್ರೀನಾಡಪ್ರಭು ಕೆಂಪೇಗೌಡ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಕೆಂಪೇಗೌಡರು ತಮ್ಮ ದೂರು ದೃಷ್ಠಿಯಿಂದ ಎಲ್ಲರಿಗೂ ನೆಲೆ ನೀಡಿದ್ದಾರೆ. ವಿಜಯನಗರ ವೈಭವವನ್ನು ನೋಡಿ ನಾನು ಇಂತಹ ನಗರವನ್ನು ಕಟ್ಟಬೇಕೆಂದು ಆಲೋಚನೆಯಿಂದ ಯಲಹಂಕವನ್ನು ನಿರ್ಮಿಸಿದದರು. ಕೆಂಪೇಗೌಡರಂತಹ ಆಲೋಚನೆ, ಕನಸುನ್ನು ನಾವು ಕಟ್ಟಿಕೊಳ್ಳಬೇಕು ಎಂದರು.
ಕೆಂಪೇಗೌಡರು ಬೆಂಗಳೂರಿನ ನಿರ್ಮಾಣಕ್ಕೆ ನೀಲಿನಕ್ಷೆ ತಯಾರಿಸಿ ಅದರ ಅಭಿವೃದ್ದಿಗೆ ಟೊಂಕ ಕಟ್ಟಿ ನಿಂತಿದ್ದರು ಫಲವಾಗಿ ನಾವಿವತ್ತು ಅದನ್ನು ಅನುಭವಿಸುತ್ತಿದ್ದೇವೆ. ಈಗಲೂ ಕೂಡ ಕೆಂಪೇಗೌಡ 11 ನೇ ತಲೆಮಾರು ಬೆಂಗಳೂರಿನ ಕುದೂರಿನಲ್ಲಿ ಇದ್ದಾರೆ. ಜೀವಪರ ಆಡಳಿತ ನಡೆಸಿದ ವಂಶಸ್ಥರು ಯಾವುದೇ ಅಹಂ ಇಲ್ಲದೆ ಸರಳವಾಗಿ ಬದುಕನ್ನು ಸಾಗಿಸುತ್ತಿದ್ದಾರೆ ಎಂದರು.
ಕೆಂಪೇಗೌಡರಿಗೆ 500 ವರ್ಷಗಳ ಹಿಂದೆಯೇ ಅಭಿವೃದ್ದಿಯ ಆಲೋಚನೆ ಇತ್ತು. ಹಾಗಾಗಿ ಅರ್ಕಾವತಿ, ವೃಷಭಾ ನದಿಗೆ ಅನೇಕ ಕೆರೆಗಳನ್ನು ಕಟ್ಟಿದರು. ಕೆೆರೆ, ಕೋಟೆ ,ಪೇಟೆಯನ್ನು ಸ್ಥಾಪಿಸುವ ನೈತಿಕತೆ ಅಪಾರವಾಗಿತ್ತು. ಇನ್ನೂ ಅವರು ಅದಮ್ಯವಾಗಿ ನಂಬುತ್ತಿರುವ ಶಿವನ ಹೆಸರಿನಲ್ಲಿ ಭೈರವ ನಾಣ್ಯ ಮುದ್ರಿಸುತ್ತಾರೆ. ಆದರೆ ಇದರಿಂದ ಅವರು 5 ವರ್ಷಗಳ ಕಾಲ ಆನೆಗುಂದಿ ಜೈಲುವಾಸ ಅನುಭವಿಸುವಂತಾಗುತ್ತದೆ. ನಾಣ್ಯದ ಮೇಲೆ ಬೆಂಗಳೂರಿನ ನಕ್ಷೆಯೇ ಕೇಂದ್ರವಾಗಿತ್ತು ಎಂದು ತಿಳಿಸಿದರು.
