Homeಅಪರಾಧ6 ತಿಂಗಳಲ್ಲಿ 24.55 ಲಕ್ಷದ ಗಾಂಜಾ ಪತ್ತೆ-ನಾಶಕ್ಕೆ ಪೊಲೀಸ್ ಇಲಾಖೆ ಮುಂದು

6 ತಿಂಗಳಲ್ಲಿ 24.55 ಲಕ್ಷದ ಗಾಂಜಾ ಪತ್ತೆ-ನಾಶಕ್ಕೆ ಪೊಲೀಸ್ ಇಲಾಖೆ ಮುಂದು

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜೂ.27

ಶಿವಮೊಗ್ಗ ನಗರದಲ್ಲಿ ದಿನೇ ದಿನೇ ಗಾಂಜಾದ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಪೊಲೀಸರು ಮಾಹಿತಿ ಮೇರೆಗೆ ಗಾಂಜಾ ಅಡ್ಡೆಯ ಮೇಲೆ ದಾಳಿ ಮಾಡಿ ವಶ ಪಡಿಸಿಕೊಳ್ಳಿಸುತ್ತಿದ್ದಾರೆ. ಅದರಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಅಮಾನತ್ತುಪಡಿಸಿಕೊಂಡಿರುವ ಒಟ್ಟು 24,55,640/- ರೂ ಮೌಲ್ಯದ 59 ಕೆಜಿ 119 ಗ್ರಾಂ ಗಾಂಜಾವನ್ನು ನ್ಯಾಯಾಲಯ ಅನುಮತಿಯಿಂದ ನಾಶಕ್ಕೆ ಮುಂದಾಗಿದೆ.

2026 ಜ.1 ರಿಂದ ಜೂನ್ 26 ರವೆಗೂ ನಗರದಲ್ಲಿ ಸುಮಾರು 24.55 ಲಕ್ಷ ಮೌಲ್ಯವುಳ್ಳ ಗಾಂಜಾ ಪತ್ತೆಯಾಗಿದ್ದು, M/s Shushruta Bio-Medical Waste Management Society AiÀÄ Common Bio-Medical Waste Treatment and Disposal Facility ನಲ್ಲಿ ನಾಶ ಮಾಡಲು ಸಿದ್ದವಾಗಿದ್ದು, ಇನ್ನೂ 16 ಕೆಜಿ ಗಾಂಜಾ ನ್ಯಾಯಾಲಯದ ಅನುಮತಿಗಾಗಿ ಬಾಕಿ ಇದೆ.

ದಾಖಲಾದ ಪ್ರಕರಣಗಳು:

2026 ಜ.1 ರಿಂದ ಜೂನ್ 26 ರವರೆಗೆ 27 ಪ್ರಕರಣಗಳು ದಾಖಲಾಗಿದ್ದು, ಪೊಲೀಸ್ ಇಲಾಖೆಯು 04 ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಅಮಾನತ್ತು ಪ್ರಕರಣಗಳ ಆರೋಪಿಗಳು-58, ವಿಶೇಷ ಕಾಯಾಚರಣೆ-6, ಗಾಂಜಾ ಸೇವನೆ ಪರೀಕ್ಷೆಗೆ ಒಳಪಟ್ಟ ಅನಾಮಿಗರ ಸಂಖ್ಯೆ -1222 ಪ್ರಕರಣ ಜನವರಿಯಿಂದ ಜೂನ್ ವರೆಗೆ ನಡೆದಿದ್ದು, ಒಟ್ಟು 204 ಪ್ರಕರಣ ದಾಖಲಾಗಿದೆ.

ಜನವರಿಯಿಂದ ಜೂನ್ ವರೆಗೆ ಗಾಂಜಾ ಸೇವನೆ ದೃಢಪಟ್ಟವರ ಸಂಖ್ಯೆ -374 ಹಾಗೂ 11 ವಿಶೇಷ ಕಾರ್ಯಾಚರಣೆ, ವಾಹನಗಳ ಮೂಲಕ ಗಾಂಜಾ ಸಾಗಣೆ ಪ್ರಕರಣಗಳು-341 ಹಾಗೂ 8 ವಿಶೇಷ ಕಾರ್ಯಾಚರಣೆ, ಆಪ್ತ ಸಮಾಲೋಚನೆಗೆ ಕಳುಹಿಸಿದ ಸಂಖ್ಯೆ- 141 ಹಾಗೂ 11 ವಿಶೇಷ ಕಾರ್ಯಾಚರಣೆ, ಕೈಗೊಂಡ ಏರಿಯಾ ಡಾಮಿನೇಷನ್ ಕಾರ್ಯಾಚರಣೆ ಪ್ರಕರಣಗಳ- 660 ಹಾಗೂ ಇದುವರೆಗು 116 ಪಕ್ರರಣಗಳು ದಾಖಲಾಗಿವೆ. ಕಾರ್ಯಾಚರಣೆಯಲ್ಲಿ ಪತ್ತೆಯಾದ ಗಾಂಜಾ ಸೇವನೆ ಆರೋಪಿತ ಪಕ್ರರಣಗಳು- 103 ಹಾಗೂ 13 ಜನರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ.

ಅರಿವು ಕಾರ್ಯಾಕ್ರಮಗಳು:

ಗಾಂಜಾ 17 ರಿಂದ 25 ವರ್ಷದ ಯುವಕರು ಹೆಚ್ಚಾಗಿ ಸೇವಿಸುತ್ತಿದ್ದು, ಇದರಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದಾರೆ. ಕೋಟೆ ಸ್ಟೇಷನ್ ನಲ್ಲಿ 100 ಎಂ ಎ ಡಿಎಂಎ ದೂರಾಗಿದೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಬಿ.ನಿಖಿಲ್ ತಿಳಿಸಿದ್ದು, ಈ ಬಗ್ಗೆ ಯುವಕರಿಗೆ ಜಾಗೃತಿ ಮೂಡಿಸಲು ಅನೇಕ ಕಾರ್ಯಕ್ರಮವನ್ನು ರೂಪಿಸಲಾಗಿದ್ದು, ಅದನ್ನು ಚಾಚು ತಪ್ಪದೆ ಪಾಲನೆ ಮಾಡಲಾಗಿದೆ.

ಶೈಕ್ಷಣಿಕ ಸಂಸ್ಥೆಗಳಲ್ಲಿ 310 ಕಾರ್ಯಕ್ರಮಗಳು, 86 ವಿಶೇಷ ಕಾರ್ಯಾಚರಣೆ ಮಾಡಲಾಗಿದ್ದು, ಇದರಲ್ಲಿ 18940 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. 6887 ಜನರು ವಿಶೇಷ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಕಾರ್ಯಗತಗೊಂಡ ಎನ್.ಡಿ.ಪಿ.ಎಸ್ ವಾರಂಟ್ ಗಳ ಸಂಖ್ಯೆ 85 ಆಗಿವೆ. 17 ವಿಶೇಷ ಕಾರ್ಯಾಚರಣೆ ನಡೆಸಲಾಗಿದ್ದು, ಇತರ ಸಾರ್ವಜನಿಕ ಅರಿವು ಕಾರ್ಯಕ್ರಮಗಳಲ್ಲಿ 207 ಜನರು ಹಾಗೂ ವಿಶೇಷ ಕಾರ್ಯಾಚರಣೆಯಲ್ಲಿ 61 ಜನರು ಭಾಗಿಯಾಗಿದ್ದರು. ಮಾದಕದ್ರವ್ಯ ವಿರೋಧಿ ಪ್ರತಿಜ್ಞಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾರ್ವಜನಿಕರ ಸಂಖ್ಯೆ 2765 ಜನ ಭಾಗಿಯಾಗಿದ್ದರು. 1465 ವಿಶೇಷ ಮ್ಯಾರಥಾನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments