Homeಸರ್ಕಾರಿ ಶಾಲೆಯ ಮೂಲಭೂತ ಸೌಕರ್ಯಕ್ಕೆ “ಮಲೆನಾಡು ರೌಂಡ್ ಟೇಬಲ್” ಸಹಕಾರಿ

ಸರ್ಕಾರಿ ಶಾಲೆಯ ಮೂಲಭೂತ ಸೌಕರ್ಯಕ್ಕೆ “ಮಲೆನಾಡು ರೌಂಡ್ ಟೇಬಲ್” ಸಹಕಾರಿ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜೂ.26

ಸರ್ಕಾರಿ ಶಾಲೆಯನ್ನು ಸರ್ಕಾರವೇ ಉಳಿಸಬೇಕು. ಸರ್ಕಾರಿ ಶಾಲೆಯ ಎಲ್ಲೂ ಜವಾಬ್ದಾರಿಯೂ ಸರ್ಕಾರದ್ದೇ ಆಗಿದೆ ಎಂಬ ಧೋರಣೆಯ ಸಮಾಜದ ನಡುವೆ ಇಲ್ಲೊಂದು ಸಮೂಹ ಅವೆಲ್ಲವನ್ನೂ ಮೀರಿ ಮುಂದೆ ಸಾಗುತ್ತಿದೆ.

ಗಮನಿಸಿ: 65000 ಮೌಲ್ಯದ ಗಾಂಜಾ ವಶ- ಆರೋಪಿ ಬಂಧನ

ಮಕ್ಕಳ ಬದುಕಿಗೆ ಶಿಕ್ಷಣ ಬಹು ಮುಖ್ಯವೋ, ಮೂಲಭೂತ ಸೌಕರ್ಯವೂ ಅಷ್ಟೇ ಮುಖ್ಯ. ಇಂತಹ ಸಮಸ್ಯೆಗಳ ಬೆನ್ನತ್ತಿ ನಗರದ “ಶಿವಮೊಗ್ಗ ಮಲೆನಾಡು ರೌಂಡ್ ಟೇಬಲ್ 266” ನಿರ್ವಹಣೆಗೆ ಮುಂದಾಗಿದೆ. ಸರ್ಕಾರದ ಆಶ್ವಾಸನೆ ಹಾಗೂ ಬಜೆಟ್‌ಗಳ ನಂಬಿಕೆಯಲ್ಲಿ ನಶಿಸುತ್ತಿರುವ ಸರ್ಕಾರಿ ಶಾಲೆಗಳಿಗೆ ಕಳೆ ತರುತ್ತಿದ್ದಾರೆ.

ನಗರದ ಗುತ್ಯಪ್ಪ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯದ ಕೊರತೆ ಕಂಡುಬಂದಿದ್ದು, ಅದನ್ನು ಮನಗಂಡ ಈ ಸಮೂಹವು ಹೊಸದಾಗಿ ಶೌಚಾಲಯವನ್ನು ಕಟ್ಟಿಸಿಕೊಡುವ ಮೂಲಕ ಮಕ್ಕಳ ಮೂಲಭೂತ ಸೌಕರ್ಯಕ್ಕೆ ಸಹಕಾರಿಯಾಗಿದ್ದಾರೆ. ಇದಲ್ಲದೇ ಜೂ. 25 ರಂದು ಆ ಶಾಲೆಯ ಶಿಕ್ಷಕರ ವೃಂದ, ಮಕ್ಕಳೊಡನೆ ಸೇರಿ ಉದ್ಘಾಟನೆಯನ್ನು ಮಾಡಿದ್ದಾರೆ.

2012 ರಿಂದ ಸರ್ಕಾರಿ ಶಾಲೆ ನಂಟು:

2012 ರಿಂದ ಈ ಸಮೂಹವು ಸರ್ಕಾರಿ ಶಾಲೆಯೊಂದಿಗೆ ನಂಟನ್ನು ಹೊಂದಿದ್ದು, ಪ್ರತಿ ವರ್ಷ ಶಾಲೆಯ ಎಲ್ಲಾ ಶೌಚಾಲಯ ಯೂನಿಟ್‌ಗಳ ನಿರ್ಮಾಣ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ಪೀಠೋಪಕರಣ, ಜಾರು ಬಂಡಿ, ಜೋಕಾಲಿ, ಸ್ಮಾರ್ಟ್ ಕ್ಲಾಸ್ ಸೇರಿದಂತೆ ಹತ್ತು ಹಲವು ಪ್ರೋತ್ಸಾಹದಾಯಕ ಕಾರ್ಯಕ್ರಮಗಳನ್ನು ಮಾಡುತ್ತಾ ಶಾಲೆಯನ್ನು ಅಭಿವೃದ್ದಿ ಪಥದಲ್ಲಿ ಕೊಂಡ್ಯೂತ್ತಿದ್ದಾರೆ.

ಇದಲ್ಲದೇ ಮಕ್ಕಳನ್ನು ಸಾಂಸ್ಕೃತಿ ಕಾರ್ಯಕ್ರಮಕ್ಕೂ ಸೆಳೆಯಲು ಈ ಪ್ರತಿ ವರ್ಷ ನವೆಂಬರ್ 14 ಮಕ್ಕಳ ದಿನಾಚರಣೆಯಂದು ಚಿತ್ರಕಲಾ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸುವುದು, ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ಆರ್ಥಿಕ ಸಹಾಯ ನೀಡುವುದು, ಮಕ್ಕಳಿಗೆ ಆಟೋಟ ಸ್ಪರ್ಧೆಗಳ ಮೂಲಕ ಸ್ಪರ್ಧಾತ್ಮಕ ಮನೋಭಾವ ಬೆಳೆಸುವುದು, ಬಡತನ ರೇಖೆಗಿಂತ ಕೆಳಗಿರುವ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣ, ಆರೋಗ್ಯ, ಮಾನಸಿಕ ಹಾಗೂ ದೈಹಿಕ ವಿಕಸನಕ್ಕೆ ಸಹಾಯ ಹಸ್ತ ಚಾಚುವಂತ ಕೆಲಸ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments