Homeಅಪರಾಧ65000 ಮೌಲ್ಯದ ಗಾಂಜಾ ವಶ- ಆರೋಪಿ ಬಂಧನ

65000 ಮೌಲ್ಯದ ಗಾಂಜಾ ವಶ- ಆರೋಪಿ ಬಂಧನ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜೂ. 26

ನಗರದಲ್ಲಿ ದೊಡ್ಡಪೇಟೆ ಪೊಲೀಸರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧಿಸಿ 65,000 ರೂ ಮೌಲ್ಯದ 01 ಕೆಜಿ 261 ಗ್ರಾಂ ತೂಕದ ಗಾಂಜಾ ವಶ ಪಡಿಸಿಕೊಂಡಿದ್ದಾರೆ.

ಗಮನಿಸಿ: ಅಯೋಧ್ಯೆ ಲೂಟಿ- ಸೂಕ್ತ ತನಿಖೆ ನಡೆಯಲಿ: ಕೆ.ಎಸ್.ಈಶ್ವರಪ್ಪ

ಜೂ.24 ರಂದು ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಲಕ್ ಶಾದಿ ಮಹಲ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಯಾರೋ ಇಬ್ಬರು ವ್ಯಕ್ತಿಗಳು ಕಾನೂನು ಬಾಹಿರವಾಗಿ ಗಾಂಜಾ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ದೊಡ್ಡಪೇಟೆ ಪೊಲೀಸ್ ಠಾಣೆರವರು ತಮ್ಮ ಸಿಬ್ಬಂದಿಗಳೊಂದಿಗೆ ದಾಳಿ ಮಾಡಿದ್ದು, ಆರೋಪಿ ಅಕ್ಕಲ್ ಖಾನ್ 23 ವರ್ಷ ಇವನನ್ನು ದಸ್ತಗಿರಿ ಮಾಡಿ ಸುಮಾರು 65,000/- ರೂ ಮೌಲ್ಯದ 01 ಕೆಜಿ 261 ಗ್ರಾಂ ತೂಕದ ಮಾದಕ ವಸ್ತುವಾದ ಗಾಂಜಾವನ್ನು ಅಮಾನತ್ತುಪಡಿಸಿಕೊಂಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ: 0225/2026 ಕಲಂ: NDPS Act ರೀತ್ಯಾ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments