Homeದೇಶಶಾ, ಮೋದಿ ಆಟ ನಡೆಯುವುದಿಲ್ಲ. ಯುವಕರು ಎಚ್ಚೆತ್ತುಕೊಂಡಿದ್ದಾರೆ: ಪ್ರಕಾಶ್ ರಾಜ್

ಶಾ, ಮೋದಿ ಆಟ ನಡೆಯುವುದಿಲ್ಲ. ಯುವಕರು ಎಚ್ಚೆತ್ತುಕೊಂಡಿದ್ದಾರೆ: ಪ್ರಕಾಶ್ ರಾಜ್

Spread the love

ಬೆಂಗಳೂರು,ಸೆ.8: ನಮ್ಮ ಹೋರಾಟ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಲು ಅಲ್ಲ. ಒಬ್ಬ ಜ್ಞಾನೇಶ್ ಕುಮಾರ್ ಹೋದರೆ ಮತ್ತೊಬ್ಬ ಜ್ಞಾನೇಶ್ ಬರುತ್ತಾನೆ. ಆದರೆ ನಮ್ಮ ಮುಖ್ಯ ಹೋರಾಟ ಇರುವುದು ಎಸ್‌ಐಆರ್ ವಿರುದ್ದ, ಅದು ರದ್ದಾಗಬೇಕು ಎಂದು ನಟ, ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಆಗ್ರಹಿಸಿದರು.

ಅವರು ಗುರುವಾರ ಎಸ್‌ಐಆರ್ ವಿರುದ್ದ ಬೆಂಗಳೂರು ಫ್ರೀಡಂ ಪಾರ್ಕ್ನಲ್ಲಿ ಆಯೋಜಿಸಿದ್ದ ಜನತಾ ನ್ಯಾಯಾಲಯ ಆಂದೋಲನದಲ್ಲಿ ಪಾಲ್ಗೊಂಡು ಮಾತನಾಡಿದರು.

ಇನ್ನು ಮುಂದೆ ಅಮಿತ್ ಶಾ, ನರೇಂದ್ರ ಮೋದಿ ಆಟ ನಡೆಯುವುದಿಲ್ಲ. ಈ ದೇಶದ ಯುವಕರು ಎಚ್ಚೆತ್ತುಕೊಂಡಿದ್ದಾರೆ. ರಾಜಕೀಯ ಪಕ್ಷಗಳು ಕೂಡ ಎಸ್‌ಐಆರ್ ವಿರುದ್ದ ಹೋರಾಟ ಮಾಡುತ್ತಿದ್ದಾರೆ. ಆದರೆ ಯುವಕರು ಯಾವುದೇ ಪಕ್ಷಕ್ಕೆ ಒಳಗೊಳ್ಳದೆ ಹೋರಾಟಕ್ಕೆ ಇಳಿದಿದ್ದಾರೆ. ನಾವೆಲ್ಲಾ ಗೆಲ್ಲಬೇಕು. ಅದು ಶಾಂತಿಯುತ ಹೋರಾಟದಿಂದ ಗೆಲ್ಲಬೇಕು. ಹೀಗೇ ನಾವು ಶಾಂತಿಯುತವಾಗಿಯೇ ಹೋರಾಟ ಮಾಡೋಣ, ಎಸ್‌ಐಆರ್ ಅನ್ನು ರದ್ದು ಪಡಿಸೋಣ ಎಂದರು.

ಎಸ್‌ಐಆರ್ ಮೂಲಕ ಬಡವರು, ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳು ಮತವನ್ನು ರದ್ದು ಮಾಡುತ್ತಿದ್ದಾರೆ. ಚುನಾವಣೆ ಆಯುಕ್ತರು ಈ ದೇಶದ ಪ್ರಜೆಗಳ ಮತವನ್ನು ಕಸಿದು ಕಣ್ಣೀರು ಹಾಕಿಸುತ್ತಿದ್ದಾರೆ. ನಮ್ಮ ಹಕ್ಕನ್ನು ವಾಪಸ್ ಕೊಡುವವರೆಗೂ ಹೋರಾಟ ನಡೆಯಬೇಕು. ಇಲ್ಲಿ ನಡೆಯುತ್ತಿರುವುದು ಇವೆಂಟ್ ಅಲ್ಲ. ಇಲ್ಲಿ ಬಂದಿರುವ ಸಂಘ ಸಂಸ್ಥೆಗಳು, ಯುವ ಸಂಘಟಿತರು ಎಸ್‌ಐಆರ್ ನೀತಿಯಿಂದ ನೊಂದ ಸಂತ್ರಸ್ತರ ಜೊತೆಗೆ ನಿಲ್ಲುವ ಮೂಲಕ ಸೂಪರ್ ಸ್ಟಾರ್‌ಗಳು ಆಗಿದ್ದಾರೆ. ಇವರೆಲ್ಲಾ ಪ್ರಜಾಪ್ರಭುತ್ವ, ಸಂವಿಧಾನ ಆಶಯವನ್ನು ಉಳಿಸಲು ಬಂದಿದ್ದಾರೆ. ಹಗಲು ರಾತ್ರಿ ಎನ್ನದೆ ಊರೂರು ಅಲೆದು ಅಂಕಿ ಅಂಶಗಳನ್ನು ಸಂಗ್ರಹಿಸಿದ್ದಾರೆ. ನಾವು ಅವರೊಟ್ಟಿಗೆ ನಿಂತು ಈ ಎಸ್‌ಐಆರ್ ಅನ್ನು ರದ್ದಾಗುವವರೆಗೂ ಹೋರಾಟ ನಡೆಸೋಣ ಎಂದು ಕರೆ ನೀಡಿದರು.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments