ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು01:
ಭಾರತ ದೇಶದಲ್ಲಿ ಪತ್ರಕರ್ತರಿಗೆ ರಕ್ಷಣೆ ಇಲ್ಲ. ಅವರಿಗೆ ತಮ್ಮ ವೃತ್ತಿ ನಿರ್ವಹಣೆ ಮಾಡಲು ಸರಿಯಾದ ವ್ಯವಸ್ಥೆಯೂ ಇಲ್ಲ. ಇದರಿಂದಾಗಿ ಇವತ್ತು ವಿಶ್ವದಲ್ಲೆ ಭಾರತ ದೇಶದ ಪತ್ರಿಕಾ ಸ್ವಾತಂತ್ರ್ಯ ನೆಲಕಚ್ಚಿದೆ ಎಂದು ಶಾಸಕ ದಿನೇಶ್ ಗುಂಡೂರಾವ್ ಅಭಿಪ್ರಾಯಿಸಿದರು.
ಅವರು ಬುಧವಾರ ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಪ್ರತಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪತ್ರಿಕೋದ್ಯಮ ಮಹತ್ವ ಹೊಂದಿ ರುವ ರಂಗ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದಕ್ಕೆಂದೆ ಮುಖ್ಯ ಸ್ಥಾನ ಇದೆ. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಇವೆಲ್ಲದರ ಮೇಲೂ ನಿಗಾ ವಹಿಸಿ ಕಾರ್ಯ ಮಾಡುತ್ತದೆ. ದೇಶದ ಹಾಗು-ಹೋಗುಗಳ ಬಗ್ಗೆ ಎಚ್ಚರ ವಹಿಸುತ್ತದೆ. ಜನರ ಸಮಸ್ಯೆಗೆ ಹಾಗೂ ಅವರ ರಕ್ಷಣೆಯ ಕವಚ ಇದಾಗಿದೆ ಎಂದರು.
ಪತ್ರಿಕೋದ್ಯಮ ಚೆನ್ನಾಗಿದ್ದರೆ ಇಡೀ ದೇಶದ ವ್ಯವಸ್ಥೆ ಚೆನ್ನಾಗಿರುತ್ತದೆ. ಈ ಕ್ಷೇತ್ರ ಪಾರದರ್ಶ ಕವಾಗಿ ಯಾವುದೇ ಒತ್ತಡಕ್ಕೆ ಮಣಿಯದೆ ಕಾರ್ಯ ಮಾಡಿದರೆ ನಮ್ಮ ದೇಶದ ವ್ಯವಸ್ಥೆ ಉತ್ತಮವಾಗಲಿದ್ದು, ಭಾತರ ದೇಶದಲ್ಲಿ ಪ್ರಜಾಪ್ರಭುತ್ವ ಉಳಿದುಕೊಂಡಿರುವುದಕ್ಕೆ ಪತ್ರಿಕೋದ್ಯಮವೇ ಸಾಕ್ಷಿ ಎಂದರು.
ಕರ್ನಾಟಕ ಪತ್ರಿಕೋದ್ಯಮಕ್ಕೆ ದೀರ್ಘಕಾಲದ ಇತಿಹಾಸ ಇದೆ. ತಂತ್ರಜ್ಞಾನ ಬಂದರೂ ಪತ್ರಿಕೋ ದ್ಯಮದ ವೇಗ ಬದಲಾಗಿರಲಿಲ್ಲ. ಆದರೆ ಇತ್ತೀಚಿಗೆ ಡಿಜಿಟಲ್ ಮಾಧ್ಯಮದಿಂದ ಪತ್ರಿಕೋದ್ಯಮ ವೇಗದ ಸ್ವರೂಪ ಬದಲಾಯಿಸಿದೆ. ಸೋಷಿಯಲ್ ಮೀಡಿಯಾ ಬಂದ ಮೇಲೆ ವ್ಯವಸ್ಥೆ ಅನೇಕ ಸವಾಲು ಎದುರಿಸುತ್ತಿದೆ. ಯಾವುದು ನಿಜ, ಯಾವುದು ಸುಳ್ಳು ಎಂದು ತಿಳಿಯುವುದು ಕಷ್ಟ ಆಗಿದ್ದು, ಜವಾಬ್ದಾರಿ ಹೆಚ್ಚಾಗಿದೆ. ಮಾಹಿತಿ ಸುಲಭವಾಗಿ ಸಿಗುತ್ತಿದೆ. ಅಭಿಪ್ರಾಯ ವ್ಯಕ್ತ ಪಡಿಸಲು ಅವಕಾಶ ಇದೆ. ಆದರೆ ಓದುಗರಿಗೆ ಆಳವಾಗಿ ತಿಳಿದುಕೊಳ್ಳುವ ಆಸಕ್ತಿ ಇಲ್ಲ. ಸುದ್ದಿಯ ತಲೆ ಬರಹ ಓದಿ ಸುದ್ದಿಯನ್ನು ತಿಳಿದುಕೊ ಳ್ಳುತ್ತಿದ್ದಾರೆ ಹೊರತು ಆಳವಾಗಿ ಓದುತ್ತಿಲ್ಲ ಎಂದರು.
ಓದುಗರನ್ನು ಆಕರ್ಷಿಸುವುದೇ ಡಿಜಿಟಲ್ ಮಾಧ್ಯಮಗಳು ಪ್ರಯತ್ನವಾಗಿದೆ. ಪತ್ರಿಕೋದ್ಯಮ ವ್ಯಾಪಾರೀಕರಣ ವಾಗಿ ಬದಲಾಗಿದೆ. ಉದ್ಯಮಿ ಗಳು ಎಲ್ಲ ಮಾಧ್ಯಮಗಳನ್ನು ವಶಪಡಿ ಸಿಕೊಂಡಿದ್ದಾರೆ. ಎಲ್ಲೂ ಪಾರದರ್ಶಕತೆ ಕಾಣುತ್ತಿಲ್ಲ. ಈ ಸವಾಲನ್ನು ಎದುರಿಸುವುದು ಮುಖ್ಯವಾಗಿದೆ ಎಂದರು.
ವಾರ್ತಾ ಭಾರತಿ ಮಾಧ್ಯಮ ಸಮೂಹದ ಸಂಪಾದಕರಾದ ಅಬ್ದುಲ್ ಸಲಾಂ ಪುತ್ತಿಗೆ ಮಾತನಾಡಿ, ಕಾಲ ಬದಲಾದ ಹಾಗೆ ಜ್ಞಾನ ವೃದ್ದಿ ಆಗುತ್ತದೆ. ಇದರಿಂದ ಹೊಸ ವಿಜ್ಞಾನ, ಸಾಧನೆಯ ಅವಿಷ್ಕಾರ ನಡೆಯುತ್ತದೆ. ಇದು ಸ್ವಾಭಾವಿಕ ಹಾಗೂ ಅನಿವಾರ್ಯ. ಎಷ್ಟೊ ಮಂದಿ ಹೊಸತನಕ್ಕೆ ಎದುರಿ ಓಡಿ ಹೋಗುತ್ತಾರೆ. ಅವರಿಗೆ ಅಭದ್ರತೆ ಕಾಡುತ್ತದೆ. ಆದರೆ ಯಾರು ಹೊಸತನವನ್ನು ಸ್ವೀಕರಿಸುತ್ತಾರೊ ಅವರು ನಿಜವಾಗಿ ಈ ಜಗತ್ತನ್ನು ಆಳುತ್ತಾರೆ ಎಂದರು.
ಮುದ್ರಣ ಮಾಧ್ಯಮಗಳು ಹೊಸ ತನವನ್ನು ಸ್ವೀಕರಿಸುವ ಮಾನಸಿಕತೆಯನ್ನು ಬೆಳಸಿಕೊಳ್ಳಬೇಕು. ಡಿಜಿಟಲ್ ಯುಗದ ಮೂಲಕ ಮುದ್ರಣ ಮಾಧ್ಯಮಕ್ಕೆ ಬಹಳ ಅನುಕೂಲವಾಗಿದೆ. ಇದರಿಂದ ತಮ್ಮ ಮಾರುಕಟ್ಟೆಯನ್ನು ವೇಗವಾಗಿ ತಲುಪುವಂತವಾಗಿದ್ದು, ಈ ಕ್ರಾಂತಿ ಡಿಜಿಟಲ್ ಮಾಧ್ಯಮದಿಂದಾಗಿದೆ. ಮುದ್ರಣ ಮಾಧ್ಯಮ ಡಿಜಿಟಲ್ ಮಾಧ್ಯಮದ ಫಲಾನುಭವಿಯೇ ಹೊರತು ಬಲಿಪಾಶು ಅಲ್ಲ. ಪತ್ರಿಕೋದ್ಯಮಕ್ಕೆ ಡಿಜಿಟಲ್ ವರದಾನವಾಗಿದೆ. ಎರಡು ಕೈಯಲ್ಲಿ ಪತ್ರಿಕೆ ಓದುತ್ತಿದ್ದವರು ಈಗ ಅಂಗೈಯಲ್ಲಿ ಸುದ್ದಿಯನ್ನು ಓದುವಂತಾಗಿದೆ. ಹೊಸ ತಂತ್ರಜ್ಞಾನ ಮೂಲಕ ಕೋಟಿಗಟ್ಟಲೆ ಜನರಿಗೆ ಸುದ್ದಿ ತಲುಪುತ್ತಿದೆ ಎಂದರು.
ಹೊಸ ತಂತ್ರಜ್ಞಾನವನ್ನು ಪ್ರೀತಿಯಿಂದ, ಆದಾರದಿಂದ ಸ್ವಾಗತಿಸಬೇಕು. ನಮ್ಮ ಉಳಿವು ಅದರಲ್ಲೆ ಇರುವುದು. ಯಾರು ಬದಲಾವಣೆ ಯನ್ನು ಸ್ವೀಕರಿಸುತ್ತಾರೆ ಅವರು ಗೆಲ್ಲುತ್ತಾರೆ. ಮುದ್ರಿತ ಪತ್ರಿಕೆ ಜೀವಂತಾಗಿದೆ. ಜಪಾನ್ ದೇಶ ನಮ್ಮಗಿಂತ ತಂತ್ರಜ್ಞಾನದಲ್ಲಿ ಮುಂದೆ ಇದ್ದರು ಈಗಲೂ ಗಣ್ಯ ಪ್ರಮಾಣದಲ್ಲಿ ಜನರು ಪತ್ರಿಕೆಯನ್ನು ಓದುತ್ತಾರೆ. ಮುದ್ರಣ ಮಾಧ್ಯಮ ಶತಾಯುಷ ಯಾರೇ ಬಂದರು ಅದು ತನ್ನ ಸ್ಥಾನದಲ್ಲಿ ಉಳಿಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ತೆಲಂಗಾಣದ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಶಿವಾನಂದ ತಡಗೂಡು, ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯುಷ ಖಾನಂ, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಇತರು ಇದ್ದರು.
