Homeಜಿಲ್ಲೆ139 ಕ್ಕೂ ಹೆಚ್ಚು ಮರಗಳ ಕಡೆತಲೆ- ಕಾನೂನು ಕ್ರಮಕೈಗೊಳ್ಳಿ

139 ಕ್ಕೂ ಹೆಚ್ಚು ಮರಗಳ ಕಡೆತಲೆ- ಕಾನೂನು ಕ್ರಮಕೈಗೊಳ್ಳಿ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.1

ಶಿವಮೊಗ್ಗ ತಾಲ್ಲೂಕಿನ ಕುಂಚೇನಹಳ್ಳಿ ಸಮೀಪ ಹೆದ್ದಾರಿ ಪಕ್ಕದಲ್ಲಿ ಸುತ್ತುಕೋಟೆ ಗ್ರಾಮದವರೆಗೆ ಹೆಬ್ಬೇವು ಸೇರಿದಂತೆ 139ಕ್ಕೂ ಹೆಚ್ಚು ಮರಗಳ ಕಡಿತಲೆ ಮಾಡಲಾಗಿದ್ದು, ಈ ಬಗ್ಗೆ ಸೂಕ್ತ ವಿಚಾರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ಸ್, ಪರಿಸರಕ್ಕಾಗಿ ನಾವು-ನೀವು ಸಂಘಟನೆ, ಸಿರಿಮಲ್ಲಿಗೆ ನಿವಾಸಿಗಳ ಸಂಘ ಬುಧವಾರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

ಜೂನ್ 28ರಂದು ಕುಂಚೇನಹಳ್ಳಿಯಿಂದ ಸವಳಂಗಕ್ಕೆ ಹೋಗುವ ದಾರಿಯಲ್ಲಿ ಕುಂಚೇನಹಳ್ಳಿಯ ಸಮೀಪ ಹೆದ್ದಾರಿ ಪಕ್ಕದಲ್ಲಿ ಕ್ರೇನ್‌ನ ಸಹಾಯದಿಂದ ಹತ್ತಾರು ಜನರು ಕಡಿತಲೆಯಾಗಿದ್ದ ಮರಗಳ ತುಂಡಗಳನ್ನು ಲಾರಿಗೆ ಲೋಡ್ ಮಾಡುತ್ತಿದ್ದರು ಮತ್ತು ಇನ್ನು ಕೆಲವರು ಮರಗಳನ್ನು ಕಡಿಯುತ್ತಿದ್ದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಹಾಗೂ ಮರ ಕಡಿತಲೆಗಳನ್ನು ಸಾಗಿಸುತ್ತಿದ್ದವರನ್ನು ಕೇಳಿದಾಗ ಇಲಾಖೆಯಿಂದ ಟೆಂಡರ್ ಮೂಲಕ ಮರ ಕಡಿಯಲಾಗಿದೆ ಎಂದು ತಿಳಿಸಿದರು.

ಗಮನಿಸಿ: ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ದ ಗುಡುಗಿದ ವಿದ್ಯಾರ್ಥಿಗಳು ರಾಜೀನಾಮೆಗೆ ಒತ್ತಾಯ, ಜಿಲ್ಲಾ ಕಾಂಗ್ರೆಸ್‌ನಿಂದ ಬೃಹತ್ ಪ್ರತಿಭಟನೆ

ಟೆಂಡರ್ ಪ್ರತಿ ತೋರಿಸಿ ಎಂದಾಗ ಅದು ನಮ್ಮ ಅಧಿಕಾರಿಗಳ ಬಳಿ ಇದೆ. ಅವರು ಬೇರೆ ಕಡೆ ಇದ್ದಾರೆ ಎಂದು ಕಾರಣ ನೀಡಿದರು. ಮರುದಿನ ಪತ್ರಿಕೆಯಲ್ಲಿ ವರದಿ ಬಂದಾಗ ಅರಣ್ಯ ಇಲಾಖೆಯ ಅನುಮತಿ ಪಡೆಯಲಾಗಿದೆ ಎಂದು ಶಿವಮೊಗ್ಗ ವಲಯ ಅರಣ್ಯಾಧಿಕಾರಿ ಹೇಳಿದ್ದಾರೆ ಎಂದರು.

ಕರ್ನಾಟಕ ಫಿಜರ್‌ವೇಷನ್ ಆಫ್ ಟ್ರೀಸ್ ಆ್ಯಕ್ಟ್ 1975ರ ಪ್ರಕಾರ ನಿಯಮಗಳನ್ನು ಪಾಲಿಸಲಾಗಿದೆಯೇ ಎಂದು ಸಮಗ್ರ ತನಿಖೆ ನಡೆಸಬೇಕು. ಒಂದು ವೇಳೆ ನಿಯಮ ಪಾಲಿಸದೆ ಮರಗಳನ್ನು ಕತ್ತರಿಸಿದ್ದರೆ ಅಂತಹವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ರಸ್ತೆಯ ಬದಿಗಳಲ್ಲಿ ಬೀಳುವ ಸ್ಥಿತಿಯಲ್ಲಿರುವ ಅಥವಾ ಒಣಗಿದ ಮರಗಳನ್ನು ಇಲಾಖೆಯ ನಿಯಮದ ಪ್ರಕಾರ ಸರ್ವೇಕಾರ್ಯ ನಡೆಸಿ, ಗುರುತಿಸಿ ಬದಲಿ ಗಿಡಗಳನ್ನು ನೆಟ್ಟು ಬೆಳೆಸಬೇಕು. ಸುಪ್ರೀಂಕೋರ್ಟ್ ನೀಡಿರುವ ಮಾರ್ಗಸೂಚಿ ಆದೇಶಗಳನ್ನು ಈ ಮರ ಕಡಿತಲೆ ಪ್ರಕರಣದಲ್ಲಿ ಪಾಲಿಸಲಾಗಿದೆಯೇ ಎಂದು ತಿಳಿಸಬೇಕು. ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿರುವ ಯಾವುದೇ ಮರಗಳನ್ನು ಕಡಿಯುವಾಗ ಇಲಾಖೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲಾ ಹಂತದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಜಿಲ್ಲೆಯ ರಸ್ತೆಯ ಅಕ್ಕಪಕ್ಕ ಇರುವ ಮರಗಳ ಬಗ್ಗೆ ಆರು ತಿಂಗಳೊಳಗೆ ಸೆನ್ಸಸ್ ಮಾಡಿ ವರದಿ ಬಹಿರಂಗ ಪಡಿಸಬೇಕು. ಮರ ಕಡಿಯುವುದನ್ನು ತಡೆಯಲು ತಕ್ಷಣ ಸಿಟಿಜನ್ ಹೆಲ್ಪ್ ಲೈನ್ ಪ್ರಾರಂಭಿಸಬೇಕು. ಜಿಲ್ಲೆಯಲ್ಲಿ ಹೆಚ್ಚು ಮರ-ಗಿಡಗಳನ್ನು ಬೆಳೆಸಲು, ಸಂರಕ್ಷಿಸಲು ಇಲಾಖೆ ಅಧಿಕಾರಿಗಳು ಮತ್ತು ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳನ್ನೊಳಗೊಂಡ ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಸಮಿತಿಗಳನ್ನು ರಚಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ಸ್ ಸಂಚಾಲಕರಾದ ಕೆ.ಸಿ.ಬಸವರಾಜಪ್ಪ, ಪ್ರೋ.ಶೇಖರ್‌ಗೌಳೇರ್, ವಕೀಲರಾದ ಮರುಳ ಸಿದ್ಧಾರಾಧ್ಯ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments