ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.11
ಮಲೆನಾಡಿನ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ರಾಜಧಾನಿಯಾದ ಶಿವಮೊಗ್ಗ ನಗರದ ಯುವಜನತೆಯ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ನಿಟ್ಟಿನಲ್ಲಿ ಅನವರತ ಫೌಂಡೇಶನ್ ನಿರಂತರವಾಗಿ ಶ್ರಮಿಸುತ್ತಿದ್ದು, ಅದರಂತೆ ಈ ಬಾರಿಯೂ ಹಿಂದುಳಿದ ಅರ್ಹ ವಿದ್ಯಾರ್ಥಿಗಳಿಗೆ ‘ವಿವೇಕ ವಿದ್ಯಾನಿಧಿ’ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಅಹ್ವಾನಿಸಲಾಗಿದೆ ಎಂದು ಫೌಂಡೇಶನ ಗೌರವಾಧ್ಯಕ್ಷ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅನವರತ ಫೌಂಡೇಶನ್ ಸಮಾಜಮುಖಿ ಕಳಕಳಿಯೊಂದಿಗೆ ಕಳೆದ ವರ್ಷದ ಯಶಸ್ವಿ ಯೋಜನೆಯ ಮುಂದುವರಿದ ಭಾಗವಾಗಿ ಈ ವರ್ಷವೂ ಸಹ ಸಮಾಜದ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳ ಅರ್ಹ 10 ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಉತ್ತೇಜನ ನೀಡುವ ಉದ್ದೇಶದಿಂದ ‘ವಿವೇಕ ವಿದ್ಯಾನಿಧಿ’ ಯೋಜನೆಯಡಿ ಪ್ರೋತ್ಸಾಹಕ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಗಮನಿಸಿ: ಕುವೆಂಪು ವಿವಿ: ಆ.13-14 ರಂದು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ
ಈ ಯೋಜನೆಯಡಿಯಲ್ಲಿ ಪಾರದರ್ಶಕವಾಗಿ ಆಯ್ಕೆಯಾಗುವ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ 5,000 ವಿದ್ಯಾರ್ಥಿವೇತನವನ್ನು ನೇರವಾಗಿ ಪ್ರೋತ್ಸಾಹಧನವಾಗಿ ನೀಡಲಾಗುವುದು.
ಅರ್ಜಿ ಸಲ್ಲಿಕೆಯ ಮಾರ್ಗದರ್ಶಿ ಸೂಚಿಗಳು ಹಾಗೂ ಮಾನದಂಡಗಳು:
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ.
ಅರ್ಜಿ ಸಲ್ಲಿಸಲು ಲಗತ್ತಿಸಬೇಕಾದ ಅಗತ್ಯ ದಾಖಲೆಗಳು:
1. ವಿದ್ಯಾರ್ಥಿಯ ಆಧಾರ್ ಕಾರ್ಡ್
2. ವಿದ್ಯಾರ್ಥಿಯ ಭಾವಚಿತ್ರ
3. ಶಾಲಾ ಅಥವಾ ಕಾಲೇಜಿನ ಮಾಹಿತಿಗಳು (ಕೆಳಗಿನಂತೆ ಒಳಗೊಂಡಿರಬೇಕು)
ಚಿ. ಪ್ರಸ್ತುತ ಓದುತ್ತಿರುವ ಶಾಲೆ/ಕಾಲೇಜಿನ ಅಡ್ಮಿಷನ್ ಪ್ರವೇಶ ಪತ್ರ/ಪ್ರಮಾಣಪತ್ರ. .
b. ವೈಯಕ್ತಿಕ ಬ್ಯಾಂಕ್ ಅಕೌಂಟ್ ಹೆಸರು ಮತ್ತು ಅಕೌಂಟ್ ನ ವಿವರಗಳು.
ಛಿ. ಶುಲ್ಕ ಕಟ್ಟಲಾಗಿರುವ ರಶೀದಿ ಪತ್ರ. (30 ಸಾವಿರ ರೂ ಮೀರಿರಬಾರದು)
4. ಹಿಂದಿನ ವರ್ಷದ ಮಾರ್ಕ್ಸ್ ಕಾರ್ಡ್ (ಶೇಕಡ 50% ರಿಂದ 75%ರ ಒಳಗೆ ಮಾರ್ಕ್ಸ್ ಹೊಂದಿರಬೇಕು)
5. ಪೋಷಕರ ಬಿಪಿಎಲ್ ಕಾರ್ಡ್ ಅಥವಾ ಆದಾಯ ಪ್ರಮಾಣ ಪತ್ರ ( 1,80,000 ರೂ ಗಿಂತ ಕಡಿಮೆ ಇರಬೇಕು)
6. ಪೋಷಕರ ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ (ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಮತದಾರರಾಗಿರಬೇಕು)
7. ಸ್ಕಾಲರ್ ಶಿಪ್ ಅರ್ಜಿಗಳನ್ನು ಶಾಸಕರ ಕಛೇರಿ ಕರ್ತವ್ಯ ಭವನದಲ್ಲಿ ಮಾತ್ರ ನೀಡಲಾಗುವುದು.
ಅರ್ಜಿ ಸಲ್ಲಿಕೆಯ ವೇಳಾಪಟ್ಟಿ ಹಾಗೂ ವಿಳಾಸ:
ಅರ್ಜಿ ವಿತರಣೆ ಹಾಗೂ ಸ್ವೀಕಾರ ಪ್ರಾರಂಭ: 11.06.2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05.09.2026
ಅರ್ಜಿ ಪಡೆಯುವ ಹಾಗೂ ಸಲ್ಲಿಸುವ ಸ್ಥಳ: ಕರ್ತವ್ಯ ಭವನ ( ಶಾಸಕರ ಕಚೇರಿ), ಮಹಾನಗರ ಪಾಲಿಕೆ ಕಟ್ಟಡ, ಶಿವಪ್ಪ ನಾಯಕ ಮಾರುಕಟ್ಟೆ ಪಕ್ಕ, ನೆಹರು ರಸ್ತೆ, ಶಿವಮೊಗ್ಗ.
“ಶಿಕ್ಷಣವು ಕೇವಲ ವ್ಯಕ್ತಿಯ ವಿಕಾಸವಲ್ಲ, ಇಡೀ ಶಿವಮೊಗ್ಗ ನಗರದ ಸರ್ವಾಂಗೀಣ ಅಭಿವೃದ್ಧಿಗೆ ದಾರಿದೀಪ. ಆರ್ಥಿಕ ಅಡಚಣೆಗಳಿಂದಾಗಿ ಯಾವುದೇ ಮಗುವಿನ ಶೈಕ್ಷಣಿಕ ಕನಸುಗಳು ಕಂದಿಹೋಗಬಾರದು ಎಂಬ ದೃಢ ಸಂಕಲ್ಪದೊAದಿಗೆ ‘ವಿವೇಕ ವಿದ್ಯಾನಿಧಿ’ಯನ್ನು ರೂಪಿಸಲಾಗಿದೆ. ಶಿವಮೊಗ್ಗದ ಸಾರ್ವಜನಿಕರು, ಪೋಷಕರು, ಶಿಕ್ಷಕ ವೃಂದ ಹಾಗೂ ಶಿಕ್ಷಣ ಪ್ರೇಮಿಗಳು ಈ ಮಾಹಿತಿಯನ್ನು ಅರ್ಹ ಹಾಗೂ ಅಗತ್ಯವಿರುವ ಬಡ ವಿದ್ಯಾರ್ಥಿಗಳಿಗೆ ತಲುಪಿಸಿ ಸದುಪಯೋಗವಾಗುವಂತೆ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
– ಎಸ್.ಎನ್.ಚನ್ನಬಸಪ್ಪ, ಶಾಸಕ/ಫೌಂಡೇಶನ ಗೌರವಾಧ್ಯಕ್ಷ
