ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಸೆ.17
ಪ್ರಧಾನಿ ನರೇಂದ್ರ ಮೋದಿಯವರು ಜನ್ಮ ದಿನವಾದ ಸೆ.17 ನ್ನು ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಗುರುವಾರ ನಗರದ ಖಾಸಗಿ ಬಸ್ ನಿಲ್ದಾಣ ಮುಂಭಾಗ ಪ್ರತಿಭಟನೆ ನಡೆಸಿತು.
ಉದ್ಯೋಗ ಸೃಷ್ಟಿಸುವ ಬದಲು ಕೇಂದ್ರ ಸರ್ಕಾರ ನಿರುದ್ಯೋಗಿಗಳನ್ನು ಸೃಷ್ಟಿಸುತ್ತಿದ್ದು, 2014 ರಲ್ಲಿ ಬಿಜೆಪಿ ಅಧಿಕಾರ ಗದ್ದುಗೆ ಏರುವ ಸಂದರ್ಭದಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಭರವಸೆ ನೀಡಿತ್ತು. ಆದರೆ ಅಂದಿನಿಂದ ಇಲ್ಲಿಯವರೆಗೂ ಒಂದೇ ಒಂದು ಉದ್ಯೋಗ ನೀಡದ ಬಿಜೆಪಿ ಪ್ರತಿ ವರ್ಷ ಕೋಟ್ಯಾಂತರ ನಿರುದ್ಯೋಗಿಗಳನ್ನು ಸೃಷ್ಟಿಸುತ್ತಿದೆ. ಕೇಂದ್ರದ ವಿವಿಧ ಇಲಾಖೆಗಳಲ್ಲಿ ಸುಮಾರು 8.23 ಲಕ್ಷ ಹುದ್ದೆಗಳು ಖಾಲಿ ಇದ್ದು, ಭರ್ತಿಗೆ ಕ್ರಮ ಕೈಗೊಂಡಿಲ್ಲ ಬದಲಾಗಿ ಖಾಯಂ ಹುದ್ದೆಗಳನ್ನು ಹೊರಗುತ್ತಿಗೆ ಹುದ್ದೆಗಳನ್ನಾಗಿ ಪರಿವರ್ತನೆ ಮಾಡುತ್ತಿದೆ. ಇವೆಲ್ಲವೂ ಯುವ ಜನತೆಯನ್ನು ಭ್ರಮನಿರಸಗೊಳಿಸಿದೆ.
ಗಮನಿಸಿ: “ಟಾಸ್” ಪ್ರೀಮಿಯರ್ ಶೋ ಕಲಾಭಿಮಾಗಳಿಂದ ಅಪಾರ ಮೆಚ್ಚುಗೆ !
ಕೇಂದ್ರ ಸರ್ಕಾರಿ ಸ್ವಾಮ್ಯದ ಹಲವಾರು ಉದ್ಯಮಗಳನ್ನು ಈಗಾಗಲೇ ಖಾಸಗೀಕರಣಗೊಳಿಸಿದ್ದು, ಹಲವಾರು ಕಾರ್ಖಾನೆಗಳನ್ನು ಮುಚ್ಚುವ ಮೂಲಕ ಲಕ್ಷಾಂತರ ಕಾರ್ಮಿಕರನ್ನು ಬೀದಿ ಪಾಲು ಮಾಡಿದೆ. ಎಲ್ಲಾ ರಂಗಗಳಲ್ಲಿಯೂ ಮೋದಿ ಆಪ್ತ ಕಾರ್ಪೋರೇಟ್ ಕಂಪನಿಗಳಿಗೆ ಪ್ರವೇಶ ಕೊಡುತ್ತಿದ್ದು, ರೈಲ್ವೆ ಹಾಗೂ ವಿಮಾನ ನಿಲ್ದಾಣಗಳನ್ನು ಕೂಡ ಈ ಕಂಪನಿಗಳಿಗೆ ಧಾರೆ ಎರೆಯಲಾಗುತ್ತಿದೆ. ದೇಶದ ರಕ್ಷಣಾ ವ್ಯವಸ್ಥೆಯನ್ನು ಕೂಡ ಆಳು ಮಾಡಿದ್ದು, ಖಾಯಂ ಸೈನಿಕದ ಬದಲು ಅಗ್ನಿವೀರ್ ಯೋಜನೆಯಡಿ ಸೈನಿಕರನ್ನು ಗುತ್ತಿಗೆ ನೌಕರರನ್ನಾಗಿ ಮಾಡಲಾಗುತ್ತಿದೆ.
ದೇಶದ ಅಭೀವೃದ್ದಿಯ ಬದಲು ದಿವಾಳಿ ಹಂತ ತಲುಪಿದ್ದು, ನಿರುದ್ಯೋಗ ಸಮಸ್ಯೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಡಾಲರ್ ಬೆಲೆ ಎದುರು ಪಾತಾಳಕ್ಕೆ ಇಳಿದ ರೂಪಾಯಿ ಇಷ್ಟಾದರೂ ಕೇಂದ್ರ ಸರ್ಕಾರ ಎಚ್ಛೆತ್ತುಕೊಳ್ಳದೆ ಮೋದಿ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದು, ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಆಚರಿಸುವಂತೆ ಯುವ ಕಾಂಗ್ರೆಸ್ ಪ್ರತಿಭಟನೆಯ ಮೂಲಕ ಒತ್ತಾಯಿಸುತ್ತಿದ್ದು, ಯುವ ಜನರಿಗೆ ಉದ್ಯೋಗ ಸೃಷ್ಟಿಸದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸದ ಬಿಜೆಪಿ ಕೇಂದ್ರ ಸರ್ಕಾರವನ್ನು ರಾಷ್ಟ್ರಪತಿಯನ್ನು ವಜಾಗೊಳಿಸಬೇಕೆಂದು ಯುವ ಕಾಂಗ್ರೆಸ್ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಅನೇಕ ಕಾಂಗ್ರೆಸ್ ಕಾರ್ಯಕರ್ತರು, ಪದವಿಯ ಪೋಷಾಕಿನೊಂದಿಗೆ ಅಣಕು ಪ್ರತಿಭಟನೆ ನಡೆಸಿದರು, ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಷ ಹೆಚ್.ಸಿ.ಯೋಗೇಶ್, ಕಲೀಂ ಪಾಷ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷಿತ್ ಗೌಡ, ಗ್ರಾಮಾಂತರ ಅಧ್ಯಕ್ಷ ಪ್ರವೀಣ್ ಕುಮಾರ್, ನಗರ ಯುವ ಅಧ್ಯಕ್ಷ ಚರಣ್ ಜೆ ಶೆಟ್ಟಿ, ಪ್ರಮುಖರಾದ ಎನ್.ರಮೇಶ್, ವಿಜಯ್ ಕುಮಾರ್, ದೇವೇಂದ್ರಪ್ಪ, ಮಧು ಸೂಧನ್, ಗಿರೀಶ್, ಬಾಲಾಜಿ, ಇರ್ಫಾನ್, ಅಬ್ದುಲ್ ಸತ್ತಾರ್, ಬಾಬು, ರೇಷ್ಮಾ ಇದ್ದರು,.
