ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಸೆ.22
ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿನ ದೌರ್ಜನ್ಯ ಎಸಗಿದ್ದ ವ್ಯಕ್ತಿಗೆ ಪೋಕ್ಸೋ ಕಾಯ್ದೆಯ ಅಡಿ 5 ವರ್ಷ ಕಾರಾಗೃಹವಾಸ ಮತ್ತು 15,000 ರೂ ದಂಡವನ್ನು ವಿಧಿಸಿ ಘನ ನ್ಯಾಯಾಲಯವು ಆದೇಶಿಸಿದೆ.
ಭದ್ರಾವತಿ ತಾಲ್ಲೂಕಿನಲ್ಲಿ 49 ವರ್ಷದ ವ್ಯಕ್ತಿಯೊಬ್ಬನು 11 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು, ಈ ಬಗ್ಗೆ 2024ನೇ ಸಾಲಿನಲ್ಲಿ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯ ಅಡಿ ಪ್ರಕರಣ ವರದಿಯಾಗಿತ್ತು.
ಗಮನಿಸಿ: ಕಸ್ತೂರಿ ರಂಗನ್ ವರದಿಯಲ್ಲಿ ಲೋಪದೋಷವಿದೆ: ಡಿ.ಎಸ್.ಅರುಣ್
ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಪಿಎಸ್‌ಐ ಕವಿತಾ ಪ್ರಕರಣದ ತನಿಖೆ ಪೂರೈಸಿ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು. ಇದಕ್ಕೆ ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಧರ್ ಸರ್ಕಾರಿ ಅಭಿಯೋಜಕರವರುವಾದ ಮಂಡಿಸಿದ್ದು, ಶಿವಮೊಗ್ಗದ ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಸಲಾಗಿದೆ. ಪ್ರಕರಣದಲ್ಲಿ ಆರೋಪಿತರ ವಿರುದ್ಧ ಆರೋಪ ದೃಢಪಟ್ಟಿದ್ದು, ನ್ಯಾಯಾಧೀಶರಾದ ನಿಂಗನಗೌಡ ಭ ಪಾಟೀಲ್ ರವರು ಆರೋಪಿಗೆ 5 ವರ್ಷ ಕಾರಾಗೃಹವಾಸ ಮತ್ತು 15,000 ರೂ ದಂಡವನ್ನು ವಿಧಿಸಿ ಹಾಗೂ ನೊಂದ ಬಾಲಕಿಗೆ 50,000 ರೂ ಪರಿಹಾರವನ್ನು ನೀಡಲು ಆದೇಶಿಸಿರುತ್ತಾರೆ.
