ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಸೆ.22
ಹೊಸನಗರ ತಾಲ್ಲೂಕಿನ ಒಗ್ಗಟ್ಟು ಮತ್ತು ಸ್ಥಳೀಯ ಮುಳುಗಡೆ ಸಂತ್ರಸ್ತರ ಜ್ವಲಂತ ಸಮಸ್ಯೆಗಳ ಪರಿಹಾರ ದೃಷ್ಠಿಯಿಂದ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಪುನಃ ಪ್ರತಿಷ್ಠಾಪಿಸಬೇಕೆಂದು ಸರ್ವೋದಯ ಮಂಡಳ ಹೊಸನಗರ ತಾಲೂಕು ಅಧ್ಯಕ್ಷ ಎಸ್.ಆರ್. ವಿಶ್ವೇಶ್ವರಯ್ಯ ಆಗ್ರಹಿಸಿದರು.
ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹೊಸನಗರಕ್ಕೆ ಪ್ರತ್ಯೇಕ ಶಾಸಕರಿಲ್ಲದ ಕಾರಣ ಸ್ಥಳಿಯ ಜನರ ದನಿ ವಿಧಾನಸಭೆಯಲ್ಲಿ ನೇರವಾಗಿ ಮತ್ತು ಪ್ರಬಲವಾಗಿ ಮೊಳಗುತ್ತಿಲ್ಲ. ಹೊಸನಗರ ತಾಲ್ಲೂಕು ಎರಡು ಬೇರೆ ತಾಲ್ಲೂಕುಗಳಿಗೆ ಹರಿದು ಹಂಚಿ ಹೋಗಿರುವುದರಿಂದ ತಾಲ್ಲೂಕಿನ ಸಮಗ್ರ ಅಭಿವೃದ್ದಿ ಯೋಜನೆಗಳನ್ನು ರೂಪಿಸುವುದು ಆಡಳಿತಾತ್ಮಕವಾಗಿ ಜಟಿಲವಾಗಿದೆ ಎಂದರು.
ಹೊಸನಗರ ವಿಧಾನಸಭಾ ಕ್ಷೇತ್ರವು 1952 ರ ಸಾರ್ವತ್ರಿಕ ಚುನಾವಣೆಯಿಂದಲೂ ಸಹ ಸ್ವತಂತ್ರ ವಿಧಾನಸಭೆ ಕ್ಷೇತ್ರವಾಗಿ ಅಸ್ತಿತ್ವದಲ್ಲಿ ಇತ್ತು. ಆದರೆ ಭಾರತೀಯ ಚುನಾವಣಾ ಆಯೋಗವು 2008 ರಲ್ಲಿ ಜಾರಿ ತಂದು ಕ್ಷೇತ್ರ ಪುನರ್ ವಿಂಗಡಣಾ ಪ್ರಕ್ರಿಯೆಯಲ್ಲಿ ಹೊಸನಗರ ವಿಧಾನಸಭಾ ಕ್ಷೇತ್ರವು ರದ್ದಾಗಿ 2004ರ ವಿಧಾನಸಭಾ ಚುನಾವಣೆಯೇ ಈ ಕ್ಷೇತ್ರಕ್ಕೆ ನಡೆದ ಕೊನೆಯ ಚುನಾವಣೆ ಆಗಿದೆ ಎಂದರು.
ಗಮನಿಸಿ: ಲೈಂಗಿಕ ದೌರ್ಜನ್ಯ, ಆರೋಪಿಗೆ ಪೋಕ್ಸೋ ಕಾಯ್ದೆಯಡಿ ಕಾರಾಗೃಹವಾಸ
2008 ರ ಪುನರ್ ವಿಂಗಡಣೆಯ ನಂತರ ಹೊಸನಗರ ಕ್ಷೇತ್ರದ ಭಾಗಗಳು ಪ್ರಮುಖವಾಗಿ ಎರಡು ನೆರೆಯ ಕ್ಷೇತ್ರಗಳಲ್ಲಿ ಹಂಚಿ ಹೋಗಿವೆ. ಸಾಗರ ಮತ್ತು ತೀರ್ಥಹಳ್ಳಿ ಕ್ಷೇತ್ರಕ್ಕೆ ಸೇರ್ಪಡೆಗೊಂಡಿದೆ. ಹೀಗೆ ಹಂಚಿ ಹೋಗಿರುವುದು ಸ್ಥಳೀಯ ಅಭಿವೃದ್ದಿಯ ಮೇಲೆ ಪರಿಣಾಮ ಬೀರಿದೆ ಹಾಗೂ ಹಿನ್ನಡೆಯನ್ನು ಕಂಡು ಬಂದಿದೆ ಎಂದರು.
ಶಾಸಕರ ಪ್ರಮುಖ ಕೇಂದ್ರಗಳಾದ ಸಾಗರ ಮತ್ತು ತೀರ್ಥಹಳ್ಳಿಗೆ ಹೆಚ್ಚಿನ ಅನುದಾನ ಮತ್ತು ಗಮನ ಕಂಡು ಬರುತ್ತಿದೆ. ತಾಲ್ಲೂಕಿನ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ರಾಜಕೀಯ ಒತ್ತಡ ತರುವುದನ್ನು ದುರ್ಬಲ ತಂದಿದೆ. ಹಾಗೂ ಮೂಲಭೂತ ಸೌಲಭ್ಯಗಳ ಸುಧಾರಣೆಗೆ ಸುಗಬೇಕಾದ ವೇಗ ಸಿಗುತ್ತಿಲ್ಲ. ಆದರಿಂದ ಹೊಸನಗರ ತಾಲ್ಲೂಕಿಗೆ ಪ್ರತ್ಯೇಕ ವಿಧಾನಸಭಾವಾಗಬೇಕಾಗಿರುವುದು ಕ್ಷೇತ್ರದ ಜನರ ಹಕ್ಕೊತ್ತಾಯವಾಗಿದೆ ಎಂದರು.
ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ಗಮನ ಸೆಳೆಯಲು ಸೆ. 24 ರಿಂದ ಅಂಚೆ ಕಾರ್ಡ್ ಚಳವಳಿಯನ್ನು ಆರಂಭಿಸಲು ನಿರ್ಧರಿಸಲಾಗಿದ್ದು, ಸುಮಾರು 10 ಸಾವಿರ ಕಾರ್ಡ್ಗಳು ಕಳುಹಿಸಲಾಗುವುದು ಎಂದರು.
ಮಂಡಳದ ಸಲಹಾ ಸಮಿತಿ ಮುಖ್ಯಸ್ಥ ಎಂ.ಎನ್.ಸುAದರ್ರಾಜ್ ಮಾತನಾಡಿ, ಮಂಡಳಿ ಸ್ಥಾಪನೆಯಾಗಿ 15 ವರ್ಷಗಳಾಯಿತು. ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಶಾಖೆಗಳಿದ್ದು, ರಾಜ್ಯ ಮಟ್ಟದಲ್ಲೂ ಸಹ ಶಾಖೆ ಇದೆ. ಹೊಸನಗರ ತಾಲ್ಲೂಕು ರಾಜ್ಯದಲ್ಲಿ ಬಹುದೊಡ್ಡ ವಿಸ್ತರಣೆಯ ತಾಲ್ಲೂಕು ಆಗಿದ್ದು, ಕ್ಷೇತ್ರ ವಿಂಗಡಣೆಯಿಂದಾಗಿ ಕ್ಷೇತ್ರ ರದ್ದಾಗಿರುವುದರಿಂದ ಕ್ಷೇತ್ರಕ್ಕೆ ಸಂಬಂಧಿಪಟ್ಟಿರುವ ಶಾಸಕರು ಹೆಚ್ಚಿನ ಗಮನ ನೀಡದೆ ತಾಲ್ಲೂಕಿನ ಅಭಿವೃದ್ದಿ ಕಾರ್ಯಕ್ರಮಗಳು ಕುಂಟಿತಗೊAಡಿದೆ. ಆದರಿಂದ ಕ್ಷೇತ್ರದ ಜನರಿಗೆ ನ್ಯಾಯ ಒದಗಿಸಲು ಮಂಡಳಿಯು ಹೋರಾಟಕ್ಕೆ ಧಮುಕಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಂಡಳಿಯ ಜಿಲ್ಲಾಧ್ಯಕ್ಷ ಆರ್.ಮನೋಹರ್, ಕಾರ್ಯದರ್ಶಿ ಜಿ.ವಿಜಯ್ಕುಮಾರ್, ಗೌರವಾಧ್ಯಕ್ಷ ಬಸವರಾಜಪ್ಪ ಪರಪ್ಪ ಕಂದಗಲ್ ಉಪಸ್ಥಿತರಿದ್ದರು.
