ಧರ್ಮಸ್ಥಳ ಪ್ರಕರಣ: ಕಾನೂನಿಗಿಂತ ಯಾರೂ ದೊಡ್ಡವರಲ್ಲ: ಮಧುಬಂಗಾರಪ್ಪ
*ಧರ್ಮಸ್ಥಳ ಮತ್ತು ವಿರೇಂದ್ರ ಹೆಗಡೆ ಅವರ ಬಗ್ಗೆ ವೈಯುಕ್ತಿಕವಾಗಿ ಗೌರವವಿದೆ. ಧರ್ಮಸ್ಥಳದಲ್ಲಿ ನಡೆಯುತ್ತಿರುವ ವಿದ್ಯಮಾನಗಳಲ್ಲಿ ಷಡ್ಯಂತ್ರ ನಡೆದಿರಬಹುದು ಎಂಬ ಅಭಿಪ್ರಾಯವಿದೆ. ಆದರೆ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಸತ್ಯ ಏನು ಎಂಬುದನ್ನು ಬೆಳಕಿಗೆ ತರಲು ಸರ್ಕಾರ ತನಿಖೆ ನಡೆಸುತ್ತಿದೆ . ಸಾಮಾಜಿಕ ಜಾಲ ತಾಣಗಳಲ್ಲಿ ಎರಡೂ ಬಗೆಯ ಚರ್ಚೆಗಳು ನಡೆಯುತ್ತಿವೆ. ಅತಿಸೂಕ್ಷ್ಮ ವಿಷಯ ಇದಾಗಿದ್ದು, ಈ ಬಗ್ಗೆ ಮಾತಾಡದೆ ಇರುವುದೇ ಒಳ್ಳೆಯದು ಎಂದು ಸಚಿವ ಮಧುಬಂಗಾರಪ್ಪ ಹೇಳಿದರು.
ಶಿವಮೊಗ್ಗದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವರು. ಧರ್ಮಸ್ಥಳ ದ ವಿರುದ್ದ ಷಡ್ಯಂತ್ರ ನಡೆದಿದೆ ಎಂಬ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಹೇಳಿಕೆಗೆ ಬಗ್ಗೆ ಅವರ ಬಳಿಯೇ ಕೇಳಿ ಎಂದರು ಪತ್ರಕರ್ತರಿಗೆ ಹೇಳಿದರು.
