Homeಜಿಲ್ಲೆಬಿಜೆಪಿ ಶಿಷ್ಟಾಚಾರ ಉಲ್ಲಂಘನೆ ಇದೇ ಮೊದಲಲ್ಲ: ಸಂತೋಷ್ ಲಾಡ್

ಬಿಜೆಪಿ ಶಿಷ್ಟಾಚಾರ ಉಲ್ಲಂಘನೆ ಇದೇ ಮೊದಲಲ್ಲ: ಸಂತೋಷ್ ಲಾಡ್

Spread the love

ಬೆಂಗಳೂರು,ಜು.15: ಸಿಂಗಧೂರು ಸೇತುವೆ ಉದ್ಘಾಟನೆಗೆ ಸಿಎಂಗೆ ಆಹ್ವಾನ ತಡವಾಗಿ ನೀಡಿದ್ದಾರೆ. ಆದರು ಸಿಎಂ ಕಾರ್ಯಕ್ರಮ ಭಾಗವಹಿಸುವ ಇಚ್ಛಿಯಿಂದ ಮುಂಡೂಡಿ ಎಂದು ಪತ್ರ ಬರೆದಿದ್ದರು ಅದನ್ನು ಪಲಿಗಣಿಸದೆ ಉದ್ಟಾಟನೆ ಮಾಡಿದ್ದಾರೆ.  ಇದು ಶಿಷ್ಟಾಚಾರದ ಉಲ್ಲಂಘನೆ ಎಂದು ತಿಳಿಸಿದರು.

ಮಂಗಳವಾರ ಮಾಧ್ಯಮಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಶಿಷ್ಟಾಚಾರ ಉಲ್ಲಂಘನೆ ಇದೇ  ಮೊದಲಲ್ಲ. ನೂತನ ಸಂಸತ್ ಉದ್ಘಾಟಿನೆಗೆ ಎಸ್ ಟಿ ಸಮುದಾಯಕ್ಕೆ ಸೇರಿದ ಹಾಗೂ ವಿಧವೆ ಎಂಬ  ಕಾರಣಕ್ಕೆ ರಾಷ್ಟ್ರಪತಿಯನ್ನು ಕರೆಯಲಿಲ್ಲ. ಜಮ್ಮು ಕಾಶ್ಮೀರದಲ್ಲಿ ಸೇತುವೆ ನಿರ್ಮಾಣ ಮಾಡಿದ್ದು ಯಾರೋ? ಆದ್ರೆ ಸೇತುವೆ ಮೇಲೆ ಧ್ವಜ ಹಿಡಿದು ಪೋಸ್ ಕೊಟ್ಟವರು ಇನ್ಯಾರೋ?  ಇದೆಲ್ಲಾ ನಿಮಗೆ ಗೊತ್ತಿದೆ ಎಂದರು.

ಬಿಜೆಪಿ ಸದಾ ಪ್ರಚಾರ ಗಿಟ್ಟಿಸಿಕೊಳ್ಳುವ ಆತುರದಲ್ಲಿದೆ. ಮಾಧ್ಯಮಗಳು ಕೂಡ ಮಂದಿಗೆ ಹೆಚ್ಚು ಪ್ರಚಾರ ಮಾಡುವ  ಕೆಲಸದಲ್ಲಿ ನಿರತರವಾಗಿದೆ.
ಮಾಧ್ಯಮಗಳ ಮುಂದೆ 70 ವರ್ಷಗಳಲ್ಲಿ ಎನೂ ಅಭಿವೃದ್ಧಿ ಮಾಡಿದ್ದೀರಾ ಅಂತ ನಮ್ಮನ್ನ ಪ್ರಶ್ನೆ ಮಾಡುತ್ತಾರೆ ಆದರೆ ಅವರದೇ  ಕ್ಷೇತ್ರಗಳಲ್ಲಿ ನಡೆದ  ಅಭಿವೃದ್ಧಿಯ ದುರಂತಗಳು ಕಣ್ಣು ಮುಂದೆ ಬರುತ್ತವೆ.

ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ನಿರ್ಮಾಣವಾದ ಸೇತುವೆಗಳೇ ಕುಸಿದಿವೆ.ಬ್ರೀಜ್ ಬಿದ್ದಾಗ ಇವರ ಪೋಟೋ ಇರಲ್ಲ. 30 ವರ್ಷದಿಂದ ಅವರದ್ದೇ  ಸರ್ಕಾರ ಇರುವ ಬಿಹಾರದಲ್ಲಿ 18 ಸೇತುವೆಗಳು ಕುಸಿದಿವೆ.ಮಹಾರಾಷ್ಟ್ರದಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಗೆ ಕುಸಿದು ಬಿತ್ತು. ಆದರೆ ಮಾಧ್ಯಮಗಳು ಇದ್ಯಾವುದನ್ನು ಹೇಳುವುದಿಲ್ಲ. ಆದೇ
ನಮ್ಮ ಅವಧಿಯಲ್ಲಿ ಒಂದು ಗೋಡೆಗಳು ಬಿದ್ರೆ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಗುತ್ತೆ ಎಂದು ಕೀಡಿಕಾರಿದರು.
  

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments