ಪ್ರಜಾತಾಂತ್ರಿಕ ಜನಪರ ಚಳವಳಿಗಳಿಗೆ ಸಾವಿಲ್ಲ, ಎನ್ನುವುದಕ್ಕೆ ಇವತ್ತಿನ ದೇವನಹಳ್ಳಿ ಭೂಸ್ವಾಧೀನ ವಿರೋಧಿ ಚಳವಳಿಯ ಯಶಸ್ಸು ಒಂದು ಸಾಕ್ಷಿ.
ಏರೋಸ್ಪೇಸ್ ಗಾಗಿ 1777ಎಕರೆ ಭೂಸ್ವಾಧೀನ ಪಡಿಸಿಕೊಳ್ಳುವುದರ ವಿರುದ್ಧ ನಡೆಯುತ್ತಿದ್ದ ಜನಪರ ಚಳವಳಿಯನ್ನು ಸರ್ಕಾರ ಕೊನೆಗೂ ಸಕರಾತ್ಮಕವಾಗಿ ಎದುರುಗೊಂಡಿದೆ.
ಜಾಗತೀಕರಣ,ವ್ಯಾಪಾರೀಕರಣವನ್ನು ಹಿಡಿತದಲ್ಲಿಟ್ಟುಕೊಂಡಿರುವ ಬಂಡವಾಳಶಾಹಿಗಳು ಯಾವುದೇ ಸರ್ಕಾರಗಳನ್ನು ನಿಯಂತ್ರಿಸಬಲ್ಲವು. ಯಾಕೆಂದ್ರೆ ಎಲ್ಲ ಕಾಲಕ್ಕೂ ಜನರ ಹಿತಕ್ಕೆ ಮತ್ತು ಜನರಿಗೆ ಉತ್ತರದಾಯಿಗಳಾಗಬೇಕಾದ ಜಪ್ರತಿನಿಧಿಗಳು ಅಂತಹ ಹೊಣೆಗಾರಿಕೆಯಿಂದ ವಿಮುಖರಾಗಿದ್ದಾರೆ.
ಇಂತಹ ಸಂದರ್ಭದಲ್ಲಿ ಸರ್ಕಾರಗಳೇ
ಜನ ಹೋರಾಟಗಳ ಕತ್ತು ಹಿಸುಕುವ ನಿರ್ದಯತೆಗಿಳಿಯಬಲ್ಲವು.
ಆದರೆ….
ಸಿದ್ದರಾಮಯ್ಯ ಸರ್ಕಾರ ದೇವನಹಳ್ಳಿ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಡುವ ಮೂಲಕ ನೈಜ ನಾಗರೀಕ ಸರ್ಕಾರವಾಗಿ ಉತ್ತರದಾಯಿತ್ವವನ್ನು ಮೆರೆದಿದೆ.
ಸಂಘಟಿತ ಚಳವಳಿ ನಡೆದಿದ್ದೆ ಆದರೆ ಯಶಸ್ಸು ನಿಶ್ಚಿತ ಎನ್ನುವುದಕ್ಕೆ ಈ ದೇವನಹಳ್ಳಿ ಭೂ ಹೋರಾಟ ತಾಜಾ ಮಾದರಿ ಆಗಿ ಉಳಿದಿದೆ. ಈ ಚಳವಳಿ ಕೇವಲ ಸರ್ಕಾರದ ರೈತಪರ ಧೋರಣೆಯನ್ನೇ ಪ್ರಶ್ನಿಸುವಂತಿರಲಿಲ್ಲ. ಅದಕ್ಕೂ ಮುಖ್ಯವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ತಾತ್ವಿಕತೆಯ ಅಸ್ತಿತ್ವಕ್ಕೆ ಪ್ರಶ್ನೆಗಳನ್ನು ಸವಾಲಿನಂತೆ ಎಸೆಯಲಾಗಿತ್ತು.
ಕೊನೆಗೂ ಸಿದ್ದರಾಮಯ್ಯ ಚಳವಳಿಯ ದನಿಯನ್ನು ಹೃದಯದಿಂದ ಆಲಿಸಿದ್ದಾರೆ.
ಮುಖ್ಯಮಂತ್ರಿಗಳಿಗೆ ಮನದಟ್ಟು ಮಾಡುವಲ್ಲಿ ಪ್ರಜಾತಾಂತ್ರಿಕ ಹೋರಾಟ ಮೇಲುಗೈ ಸಾಧಿಸಿದೆ.
ಎಷ್ಟೇ ಆಗಲಿ ;
ಸಿದ್ಧರಾಮಯ್ಯ ನವರು ರೈತ ಚಳವಳಿಯ ಮೂಸೆಯಲ್ಲಿ ರೂಪುಗೊಂಡ ನಾಯಕ ಅನ್ನೋದು ಇವತ್ತಿನ ಅವರ ನಿರ್ಧಾರ ಪುಷ್ಟೀಕರಿಸಿದೆ. ಮುಖ್ಯಮಂತ್ರಿ ಕುರ್ಚಿಯಲ್ಲಿ ಸಿದ್ದರಾಮಯ್ಯ ಅವರಲ್ಲದೆ ಬೇರೆ ಯಾರಾದರೂ ಇದ್ದಿದ್ದರೆ ಇಂತಹದ್ದೊಂದು ದಿಟ್ಟ ಜನಪರ ನಿರ್ಧಾರ ಸಾಧ್ಯವಾಗುತ್ತಿರಲಿಲ್ಲ ಎನಿಸುತ್ತದೆ.
ದೇಶ, ರಾಜ್ಯ ಗಳೆಂದರೆ ಕೇವಲ ಮಣ್ಣಲ್ಲ,ಅಲ್ಲಿನ ಜನರು. ಅಂತಿಮವಾಗಿ ಜನರ ಒಳಿತನ್ನು ಬಯಸುವ ನಾಯಕ ಮಾತ್ರ ಜನರ ಹೃದಯದಲ್ಲಿ ಉಳಿಯಬಲ್ಲ.
ಅಂತಹ ನೈಜ ಚಳವಳಿಗಳು ಮಾತ್ರ ಪ್ರಭುತ್ವವನ್ನು ಮಣಿಸಬಲ್ಲವು.
ಈಗ ಸಿದ್ದರಾಮಯ್ಯ ರೈತರ ಪಾಲಿಗೆ
” ಹಸಿರು ರಾಮಯ್ಯ”
