ಸುಳ್ಳು ಸಂಕಥನಗಳ ಮರುಸೃಷ್ಟಿಗೆ ಹುನ್ನಾರ
ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ” ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ” ವಿಚಾರ ಸಂಕಿರಣ ನಡೆಯುತ್ತಿರುವುದು ಸುಳ್ಳು ಸಂಕಥನಗಳ ಮರುಸೃಷ್ಟಿಯ ಕೃತ್ಯ ಎಂದು ನನಗನಿಸುತ್ತದೆ.
ಸಮಾಜವನ್ನು ಮುನ್ನಡೆಸಲು ನಿಜ ಚರಿತ್ರೆಯಿಂದ ಕಾರಣ, ಪರಿಣಾಮಗಳು ಮತ್ತು ನಮ್ಮ ಜನಪದರ, ಪೂರ್ವಿಕರ ತಾತ್ವಿಕತೆ, ವೈಚಾರಿಕತೆ ಯಿಂದ ಬಸಿದುಕೊಳ್ಳಬೇಕಾದದ್ದು ಬಹಳಷ್ಟಿದೆ. ಜಾತಿ,ವರ್ಗ ಶ್ರೇಷ್ಠತೆ ಯಿಂದ, ದೈವಿಕತೆಯ ಕಾಲ್ಪನಿಕ ಎಲಿಮೆಂಟ್ಸ್ಹೆ ಗಳಿಂದ ಹೆಣೆಯಲ್ಪಟ್ಟ ಪುರಾಣಗಳಿಂದಲ್ಲ ಎಂಬುದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು.
ಕುವೆಂಪು ಅವರು ನಮಗೆ ಬದುಕಿನ ಆದರ್ಶ ಮಾದರಿಯನ್ನು ಕೊಟ್ಟವರು. ವೈಚಾರಿಕ ಸ್ಪಷ್ಟತೆ ದರ್ಶನ ಕಾಣಿಸಿದವರು. ಇಂತಹ ಮಹಾನ್ ರಸಋಷಿಯ ಜಗುಲಿಯ ಮೇಲೆ ತದ್ವಿರುದ್ಧವಾದ ಅಜೆಂಡಾ ಉಳ್ಳವರು “ಸಾಂಸ್ಕೃತಿಕ ರಾಜಕಾರಣ” ಮಾಡಲು ಹೊರಟಿರುವುದು ಘೋರ “ಅಪರಾಧ” .
ಮೊದಲು ಈ ಅಪರಾಧಗಳಿಗೆ ಕಡಿವಾಣ ಹಾಕಬೇಕು.
ಸಂವಿಧಾನ, ಅದರಡಿಯಲ್ಲಿ ಅಳವಡಿಸಿಕೊಂಡ ಕಾನೂನುಗಳು ಇದ್ದಾಗಲೂ ಈ ಸಮಾಜದಲ್ಲಿ ಜಾತಿ,ಧರ್ಮ, ಲಿಂಗ ಬೇಧದಿಂದ ಅನಿಯಂತ್ರಿತ ಅಪರಾಧಗಳು ನಡೆಯುತ್ತಲೇ ಇವೆ. ಹೊಸ ಹೊಸ ರೂಪಗಳಲ್ಲಿ ಅಪರಾಧಿಗಳು ಸಮಾಜವನ್ನು ವಿಭಜಿಸುವ ಹುನ್ನಾರ ನಡೆಸುತ್ತಿದ್ದಾರೆ.
ಇವುಗಳನ್ನು ನಿಯಂತ್ರಿಸಲು ಭಗವದ್ಗೀತೆಯ ಪಠಣದಿಂದ ಸಾಧ್ಯವೇ? ಸಂವಿಧಾನ, ಕಾನೂನು ಪರಿಪಾಲನೆಯ ಅರಿವು ಬಿತ್ತುವುದು ಅವಶ್ಯಕವಲ್ಲವೇ?
ಕುವೆಂಪು ವಿವಿಗೆ ಬೌದ್ಧಿಕ ದಿವಾಳಿತನದ ಕೇಡು ವಕ್ಕರಿಸಿದ ಕಳವಳ ಕಾಡುತಿದೆ.
