Homeಜಿಲ್ಲೆಎಲ್ಲಾ ನ್ಯೂನತೆ ತೆರೆದಿಡುತ್ತೇನೆ, ಸಚಿವರು ಹೇಳಿದ್ದು ಯಾರಿಗೆ???

ಎಲ್ಲಾ ನ್ಯೂನತೆ ತೆರೆದಿಡುತ್ತೇನೆ, ಸಚಿವರು ಹೇಳಿದ್ದು ಯಾರಿಗೆ???

Spread the love

ಶಿವಮೊಗ್ಗ.ಜು.21: ಸಿಂಗದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮದ ಕ್ರೆಡಿಟ್ ತೆಗೆದುಕೊಳ್ಳಲು ಸಂಸದರು ಇನ್ವಿಟೇಶನ್ ಹಿಡಿದು, ಅವರೇ ಪೋಸ್ಟ್ ಮನ್ ರೀತಿ ಕೆಲಸ ಮಾಡಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಟೀಕಿಸಿದರು. 
ಸೋಮವಾರ  ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, 
ಸಿಗಂದೂರು ಸೇತುವೆಯ ವಿಚಾರದಲ್ಲಿ  ಕ್ರೆಡಿಟ್ ತೆಗೆದುಕೊಳ್ಳಲು ಸಂಸದರು ದುಂಬಾಲು ಬಿದ್ದಿದ್ದಾರೆ.
ನಮ್ಮೆಲ್ಲಾ ತೆರಿಗೆ ಹಣದಿಂದ ಈ ಸೇತುವೆ ನಿರ್ಮಾಣವಾಗಿದೆ. ಕೇಂದ್ರದಿಂದ  ಕೊಟ್ಟಿರೋ ಹಣವನ್ನ ಅವರಪ್ಪನ್ ಮನೆ ಹಣಯಿಂದ ತಂದಂತೆ ಆಡುತ್ತಿದ್ದಾರೆ. ಇದನ್ನ ಹೇಳೋಕೆ ನನಗೆ ಹೇಸಿಗೆ ಆಗುತ್ತೆ ಎಂದರು.

ಸಿಗಂದೂರು ಸೇತುವೆ ಮೇಲೆ ಭಕ್ತರು ಸಂಚರಿಸಬಹುದು. ಜೊತೆಗೆ ಆ ಭಾಗದ ಜನ ಓಡಾಡ್ತಾರೆ. ಯಾರಿಗೂ ಆಗೌರವ ತೋರಬಾರದು.
ಅದು ಅವರಿಗೆ ವಾಪಸ್ ಹೊಡೆಯುತ್ತೆ. ಒಂದು ದಿನವಾದ್ರೂ ತೆರಿಗೆ ಬಗ್ಗೆ ಇವರು ಮಾತನಾಡಿದ್ದಾರಾ.?
ದುಡ್ಡು ತಂದ ಕೂಡಲೇ ಇವರೇ ತಂದಂತೆ ಆಡ್ತಿದ್ದಾರೆ.
ಇದರ ನ್ಯೂನತೆ ಬಗ್ಗೆ ಎಲ್ಲಾ ಮುಂದಿನ ದಿನಗಳಲ್ಲಿ ಬಿಚ್ಚಿಡ್ತೇನೆ ಎಂದರು 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments