ಪುತ್ತೂರು,ಜು.21: ದಕ್ಷಿಣಕನ್ನಡ ಜಿಲ್ಲೆಯ ಹೆಸರಾಂತ ಶಿವಕ್ಷೇತ್ರ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ನಿರ್ವಹಣೆಯ ಹಣ ಕೊರತೆ ಉಂಟಾಗಿ ಉಚಿತ ಅನ್ನಪ್ರಸಾದ ವ್ಯವಸ್ಥೆ ನಿಲ್ಲಿಸಲಾಗುತ್ತಿದೆ ಎಂದು
ಪುತ್ತೂರು ಶಾಸಕ ಅಶೋಕ್ ಕುಮಾರ್ ಸೂಚಿಸಿದರು.
ಈ ಹಿಂದೆ ಎಲ್ಲಾ ಧಾರ್ಮಿಕ ಸಭೆ-ಸಮಾರಂಭಗಳಿಗೆ ಕ್ಷೇತ್ರದಿಂದ ಉಚಿತವಾಗಿ ಅನ್ನಪ್ರಸಾದ ನೀಡಲಾಗುತ್ತಿತ್ತು. ಆಡಳಿತ ಮಂಡಳಿಗೆ ಮನವಿ ನೀಡಿ ಈ ವ್ಯವಸ್ಥೆಯನ್ನು ಪಡೆಯಬಹುದಾಗಿತ್ತು. ಆದರೆ ಇನ್ನು ಮುಂದೆ ಉಚಿತ ಅನ್ನಪ್ರಸಾದಕ್ಕಿಲ್ಲ ಕ್ಷೇತ್ರದಲ್ಲಿ ಅವಕಾಶವಿಲ್ಲ.
ಮುಂದಿನ ದಿನಗಳಲ್ಲಿ ಖಾಸಗಿ ಕಾರ್ಯಕ್ರಮಗಳಿಗೆ ಅನ್ನಪ್ರಸಾದ ಬೇಕಾದಲ್ಲಿ ಹಣ ಕೊಟ್ಟು ಪಡೆಯಬೇಕು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಿಂದ ಅನ್ನಪ್ರಸಾದಕ್ಕೆ ರೇಟ್ ಫಿಕ್ಸ್ ಮಾಡಿದೆ. ಒಂದು ಊಟಕ್ಕೆ 50 ರೂಪಾಯಿ ನಿಗದಿಪಡಿಸಿರುವ ವ್ಯವಸ್ಥಾಪನಾ ಸಮಿತಿ ನಿರ್ಧರಿಸಿದೆ.
ಕುಕ್ಕೆ ಸುಬ್ರಹ್ಮಣ್ಯ ದಲ್ಲೂ ಇದೇ ರೀತಿಯ ವ್ಯವಸ್ಥೆ ಕಳೆದ ಹಲವು ವರ್ಷಗಳಿಂದ ಈವರೆಗೂ ನಡೆದುಕೊಂಡು ಬರುತ್ತಿದ್ದು, ಶಾಲಾ-ಕಾಲೇಜು, ಭಜನಾ ಮಂದಿರ, ದೇವಸ್ಥಾನಗಳಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಕುಕ್ಕೆಯಿಂದ ಅನ್ನಪ್ರಸಾದ ನೀಡಲಾಗುತ್ತಿದೆ.
