ಶಿವಮೊಗ್ಗ.ಜು.21: ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ಎರಡು ಎಕರೆ ರೈತರ ಕೃಷಿ ಭೂಮಿಯನ್ನು ಸೋಮವಾರ ಬೆಳಗ್ಗೆ ಅರಣ್ಯ ಇಲಾಖೆ ಒತ್ತುವರಿ ಸಂಬಂಧ ತೆರವುಗೊಳಿಸಲು ಮುಂದಾಗಿದ್ದು, ಅರಣ್ಯ ಇಲಾಖೆ ಮತ್ತು ರೈತರ ನಡುವಿನ ಸಂಘರ್ಷ ಉಂಟಾಗಿದೆ.

ಶೆಟ್ಟಿಹಳ್ಳಿಯ ನಿಡಗೋಡು ರಾಮಪ್ಪ ಮತ್ತು ಶಂಕ್ರಪ್ಪ ಎಂಬುವರು ಕೃಷಿ ಮಾಡುತ್ತಿದ್ದು, ಭೂಮಿ ತೆರವು ಸಂಬಂಧ ಅರಣ್ಯ ಇಲಾಖೆ ವಿರುದ್ಧ ನ್ಯಾಯಾಲಯದಲ್ಲಿ ರಾಮಪ್ಪ ಮತ್ತು ಶಂಕ್ರಪ್ಪ ದೂರು ದಾಖಲಿಸಿದ್ದರು.
ಈ ವಿಚಾರಣೆ ಕೋರ್ಟ್ ನಲ್ಲಿ ಬಾಕಿ ಇರುವಾಗಲೇ ಭೂ ತೆರವುಗೊಳಿಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದು, ಸಂಘರ್ಷಕ್ಕೆ ಕಾರಣವಾಗಿದೆ.

ಕೃಷಿಕರು ಕಂದಾಯ ಇಲಾಖೆಗೆ ಸೇರಿದ ಜಾಗದಲ್ಲಿ ಕೃಷಿ ಮಾಡುತ್ತಿರುವುದಾಗಿ ಕೋರ್ಟ್ ಗೆ ತಿಳಿಸಿದ್ದು, ಜಮೀನಿನಲ್ಲಿ ಅಡಕೆ, ಬಾಳೆ ಮತ್ತಿತರ ಬೆಳೆಯನ್ನು ಬೆಳೆಯುತ್ತಿದ್ದಾರೆ. ಈ ಬೆಳೆನ ನಾಶ ಮಾಡಿರುವ ಸಿಬ್ಬಂದಿ ಅರಣ್ಯ ಇಲಾಖೆಯ ಅಧಿಕಾರಿಗಳೇ ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
