Homeಜಿಲ್ಲೆಪೋಕ್ಸೋ-ಅಪರಾಧಿಗೆ 20 ವರ್ಷ ಜೈಲು: ಕೋರ್ಟ್ ತೀರ್ಪು

ಪೋಕ್ಸೋ-ಅಪರಾಧಿಗೆ 20 ವರ್ಷ ಜೈಲು: ಕೋರ್ಟ್ ತೀರ್ಪು

Spread the love

ಭದ್ರಾವತಿ.ಆ.1:  2024 ನೇ ಸಾಲಿನಲ್ಲಿ ಭದ್ರಾವತಿ ತಾಲ್ಲೂಕಿನ ವ್ಯಕ್ತಿಯೊಬ್ಬನು 15 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯವನ್ನ ಪ್ರಕರಣ ಸಾಬೀತಾಗಿದ್ದು, ಆರೋಪಿಗೆ 20 ವರ್ಷ ಕಾರವಾಸ ಗೃಹ ಶಿಕ್ಷೆ ವಿಧಿಸಿ ನ್ಯಾಯಾಧೀಶರಾದ ನಿಂಗನ ಗೌಡ ಪಾಟೀಲ್  ತೀರ್ಪು ನೀಡಿದ್ದಾರೆ.

ಭದ್ರಾವತಿ ತಾಲ್ಲೂಕಿನ ವ್ಯಕ್ತಿಯೊಬ್ಬನು 15 ವರ್ಷದ ಅಪ್ರಾಪ್ತ ವಯಸ್ಸಿನ  ಲೈಂಗಿಕ ದೌರ್ಜನ್ಯಕ್ಕೊಳಗಾದ ನೊಂದ ಬಾಲಕಿ ಹೇಳಿದ ದೂರಿನ ಮೇರೆಗೆ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಕಲಂ 448 376(2) (ಎನ್), 376 (2)(ಎಫ್) ಐಪಿಸಿ ಮತ್ತು ಕಲಂ 5 (ಜೆ)(2) 5(ಎಲ್), 6  ಪೋಕ್ಸೋ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದ ತನಿಖಾಧಿಕಾರಿಗಳಾದ ಭದ್ರಾವತಿ ನಗರ ವೃತ್ತ ಸಿಪಿಐ ಶ್ರೀಶೈಲ ಕುಮಾರ ರವರು ಪ್ರಕರಣದ ತನಿಖೆ ಪೂರೈಸಿ  ನ್ಯಾಯಾಲಯಕ್ಕೆ ಆರೋಪಿಯ ವಿರುದ್ಧ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.

 ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ  ಸರ್ಕಾರಿ ಅಭಿಯೋಜಕರವರು ಶ್ರೀಧರ್ ಹೆಚ್. ಆರ್, ವಾದ ಮಂಡಿಸಿದ್ದಾರೆ.  ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ FTSC-1 ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದು, ಆರೋಪಿಯ ವಿರುದ್ಧ ಆರೋಪ ದೃಢ ಪಟ್ಟ ಹಿನ್ನೆಲೆಯಲ್ಲಿ  ನ್ಯಾಯಾಧೀಶರಾದ  ನಿಂಗನ ಗೌಡ  ಪಾಟೀಲ್ ರವರು ಪ್ರಕರಣದ ಆರೋಪಿತನಿಗೆ 20 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ರೂ 1,61,000/- ದಂಡ, ದಂಡ ಕಟ್ಟಲು ವಿಫಲನಾದಲ್ಲಿ 02 ವರ್ಷ ಹೆಚ್ಚುವರಿ ಸಾದಾ ಕಾರಾವಾಸ ಶಿಕ್ಷೆ ನೀಡಲು ಆದೇಶಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments