Homeಜಿಲ್ಲೆವಿಷ ಕುಡಿದಿದ್ದ ಹಾಸ್ಟೆಲ್ ನೌಕರ ಸಾವು

ವಿಷ ಕುಡಿದಿದ್ದ ಹಾಸ್ಟೆಲ್ ನೌಕರ ಸಾವು

Spread the love

ವಿಷ ಕುಡಿದಿದ್ದ ನೌಕರನ ಸಾವು

ಶಿವಮೊಗ್ಗ: ಇಲಾಖೆಯ ನೋಟೀಸ್ ಗೆ ಹೆದರಿ ವಿಷ ಸೇವಿಸಿದ್ದ ಸಮಾಜಕಲ್ಯಾಣ ಇಲಾಖೆ ಹಾಸ್ಟೆಲ್ ಅಡಿಗೆ ನೌಕರ ಸುರೇಶ್ ಚಿಕಿತ್ಸೆ ಫಲಕಾರಿಯಾಗದೆ ಸಾವು ಕಂಡಿದ್ದಾನೆ.

ಅನಧಿಕೃತ 10 ದಿನಗಳ ರಜೆ ಮೇಲೆ ಹೋಗಿದ್ದ ಸುರೇಶ್ ಗೆ ನೋಟೀಸ್ ನೀಡುವ ಬಗ್ಗೆ ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದ ಸಂದರ್ಭದಲ್ಲೆ ವಿಷ ಸೇವಿಸಿ ಸಹಾಯಕ ನಿರ್ದೇಶಕರ ಕಚೇರಿಗೆ ಬಂದಿದ್ದ ಸುರೇಶ್ ಅಸ್ವಸ್ತನಾಗಿದ್ದು ತಕ್ಷಣವೇ ಆತನನ್ನು ಆಸ್ಪತ್ರೆ ಸೇರಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಸುರೇಶ್ ಇಂದು ಸಾವು ಕಂಡಿದ್ದಾನೆ. ಗಾಡಿಕೊಪ್ಪದ ಬಿಸಿಎಂ ಹಾಸ್ಟೇಲ್ ನ ಅಡುಗೆ ಕೆಲಸಗಾರನಾಗಿದ್ದು ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಗಳ ಮನೆಯಲ್ಲೂ ಅಡಿಗೆ ಕೆಲಸ ಮಾಡುತ್ತಿದ್ದನೆನ್ನಲಾಗಿದೆ.

ಸಮಾಜಕಲ್ಯಾಣ ಇಲಾಖೆಯಲ್ಲೂ ಪೊಲೀಸ್ ಇಲಾಖೆ ಮಾದರಿ ಆರ್ಡರ‍್ಲಿ ಪದ್ದತಿ ಅನಧಿಕೃತವಾಗಿ ಜಾರಿಯಾಗಿದ್ದು, ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ನೌಕರರನ್ನು ಅಧಿಕಾರಿಗಳ ಮನೆ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಗಳು ಕೇಳಿ ಬರುತ್ತಿವೆ.

“ಸುರೇಶ್ ಬಿಸಿಎಂ ಹಾಸ್ಟೆಲ್ ಅಡುಗೆ ನೌಕರನಾಗಿದ್ದು, 10 ದಿನಗಳ ರಜೆಯನ್ನು ಹಾಕದೆ ರಜೆ ಹೋಗಿದ್ದನು. ಅಲ್ಲದೆ ಮನೆಕಟ್ಟಲು ವಿಪರೀತ ಸಾಲ ಮಾಡಿಕೊಂಡಿದ್ದು ಶುಗರ್,ಬಿಪಿ , ಅಸ್ತಮಾಕಾಯಿಲೆಯಿಂದ ಬಳಲುತ್ತಿದ್ದನು. ಇದರಿಂದ ಬೇಸತ್ತು ವಿಷ ಕುಡಿದಿದ್ದಾನೆ ಎಂದು ಅವನ ಕುಟುಂಬದವರು ಹೇಳುತ್ತಾರೆ.”
– ಸುರೇಶ್ , ಸಹಾಯಕ ನಿರ್ದೇಶಕರು ಸಮಾಜಕಲ್ಯಾಣ ಇಲಾಖೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments