ಬೀದರ್,ಆ.6: ಮೀಸಲು ಅರಣ್ಯ ಪ್ರದೇಶದಲ್ಲಿ ಅಸ್ಥಿಪಂಜರ ಪತ್ತೆಯಾಗಿದ್ದು, ಈ ವಿಚಾರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಎಲ್ಲಾದ್ರೂ ನಿರ್ಲಕ್ಷ್ಯತನ ತೋರಿಸಿದ್ದರೆ ಕಾನೂನು ಪ್ರಕಾರ ಶಿಸ್ತು ಕ್ರಮ ಜರುಗಿಸುತ್ತೇನೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಬುಧವಾರ ಬೀದರ್ ನಲ್ಲಿ ಮಾಧ್ಯಮಗಾರರಿಗೆ ಪ್ರತಿಕ್ರಿಯಿಸಿದ ಅವರು, ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ದೂರುದಾರ ಅರಣ್ಯ ಪ್ರದೇಶದಲ್ಲಿ ಸ್ಥಳ ಗುರುತಿಸಿದ್ದಾನೆ.
ಎಲ್ಲಿ ಅಕ್ರಮ ಆಗಿದೆ, ಯಾವ ಅರಣ್ಯ ಪ್ರದೇಶ, ಯಾವ ಸರ್ವೇ ನಂಬರ್, ಯಾರ ವ್ಯಾಪ್ತಿ ಬರುತ್ತೆ, ಯಾವತ್ತು ಆಗಿದೆ, ಯಾರ ಜವಾಬ್ದಾರರಿದ್ದಾರೆ ಅದೆಲ್ಲವೂ ತನಿಖೆಯಲ್ಲಿ ಹೊರ ಬರುತ್ತೆ. ಒಂದು ವೇಳೆ ಅರಣ್ಯ ಸ್ಥಳ ಅಕ್ರಮವಾಗಿ ಬಳಕೆ ಆಗಿದ್ದರೆ
ಮುಂದಿನ ಕ್ರಮ ಕೈಕೊಳ್ಳುತ್ತೇವೆ ಎಂದರು.
