Homeಜಿಲ್ಲೆಗಣೇಶ ಹಬ್ಬಕ್ಕೆ ಮುನ್ನವೆ ಜಿಲ್ಲೆಯಲ್ಲಿ ಮುಂಜಾಗ್ರತೆ ಕ್ರಮ??!,

ಗಣೇಶ ಹಬ್ಬಕ್ಕೆ ಮುನ್ನವೆ ಜಿಲ್ಲೆಯಲ್ಲಿ ಮುಂಜಾಗ್ರತೆ ಕ್ರಮ??!,

Spread the love

ಶಿವಮೊಗ್ಗ,ಆ.6: ಹೊರ ರಾಜ್ಯದ ಗ್ರಾಹಕರಗಳು ಜಿಲ್ಲೆಯಲ್ಲಿ ತಂಗಲು ಬಂದಲ್ಲಿ ಕಡ್ಡಾಯವಾಗಿ ಅವರುಗಳ ಸಮರ್ಪಕ ದಾಖಲೆಗಳನ್ನು ಜೆರಾಕ್ಸ್ ಕಾಪಿಯನ್ನು ಪಡೆಯಬೇಕು ಎಂದು ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಎ.ಜಿ.ಕಾರ್ಯಪ್ಪ ಸೂಚಿಸಿದರು.

ಮುಂಬರುವ ಗೌರಿ ಹಾಗೂ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ  ಮುಂಜಾಗ್ರತಾ ಕ್ರಮವಾಗಿ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ  ಬುಧವಾರ ಆಯೋಜಿಸಿದ್ದ ಲಾಡ್ಜ್  ಹಾಗೂ ಕಲ್ಯಾಣ ಮಂಟಪಗಳ ಮಾಲೀಕರುಗಳ ಸಭೆಯಯಲ್ಲಿ ಅವರು ಮಾತನಾಡಿದರು.
ಲಾಡ್ಜ್ ಹಾಗೂ ಕಲ್ಯಾಣ ಮಂಟಪಗಳಲ್ಲಿ ಕಡ್ಡಾಯವಾಗಿ ಸಿ. ಸಿ. ಕ್ಯಾಮೆರಾಗಳನ್ನ ಅಳವಡಿಸ ಬೇಕು.ಎಂಟ್ರಿ ಮತ್ತು ಎಕ್ಸಿಟ್ ಗೇಟ್ ಬೇರೆ ಬೇರೆ ಇರದೇ ಒಂದೇ ಗೇಟ್ ಇರಬೇಕು. ತಂಗುವ ಗ್ರಾಹಕರ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಪಡೆದಿರಬೇಕು. ಸಂಶವಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ತಿಳಿಸಬೇಕು ಎಂದರು.

ಯಾವುದೇ ತುರ್ತು ಸಂದರ್ಭಗಳಲ್ಲಿ   ಕೂಡಲೇ 112 ಸಹಾಯವಾಣಿಗೆ ಕರೆ ಮಾಡಿ ಸಹಾಯ ಪಡೆಯಬಹುದು. ಕಡ್ಡಾಯವಾಗಿ  ಎಲ್ಲಾ ಅಗತ್ಯವಾದ  ದಾಖಲೆಗಳನ್ನು ನಿರ್ವಹಣೆ  ಮಾಡಬೇಕು. ಸಿಸಿಟಿವಿ ಕ್ಯಾಮೆರಾ ಗಳ ಸಂಗ್ರಹಣೆಯು ಕನಿಷ್ಠಪಕ್ಷ ಒಂದು ತಿಂಗಳ ಅವಧಿಗೆ ಇರುವ ಹಾಗೆ ನಿರ್ವಹಿಸಬೇಕು.
ಉತ್ತಮ ರೀತಿಯ ಸ್ವಚ್ಛತೆಯನ್ನು ಕಾಪಾಡುವ ವ್ಯವಸ್ಥೆಯನ್ನು ಹೊಂದಿರಬೇಕು. ಗ್ರಾಹಕರುಗಳ  ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪ್ರತಿ ವಾರ ವ್ಯಾಪ್ತಿಯ ಪೊಲೀಸ್  ಠಾಣೆಗೆ ಒದಗಿಸಬೇಕು.ನೀರಿನ ಟ್ಯಾಂಕ್ ಅನ್ನು ಪ್ರತಿದಿನ ಪರಿಶೀಲಿಸಬೇಕು ಹಾಗೂ ಶುಚಿತ್ವವನ್ನು ಕಾಪಾಡಿಕೊಳ್ಳಬೇಕೆಂದು ಸೂಚನೆ ನೀಡಿದರು.
ಸಭೆಯಲ್ಲಿ ಪೊಲೀಸ್ ಉಪಾಧೀಕ್ಷಕರುಗಳಾದ ಬಾಬು ಆಂಜನಪ್ಪ,ಸಂಜೀವ್  ಕುಮಾರ್,  ನಗರದ ಲಾಡ್ಜ್  ಹಾಗೂ ಕಲ್ಯಾಣ ಮಂಟಪಗಳ ಮಾಲೀಕರುಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments