ಶಿವಮೊಗ್ಗ.ಸೆ.10: ಶಿವಮೊಗ್ಗದಿಂದ ಗೋವಾಕ್ಕೆ ತೆರಳಬೇಕಿದ್ದ ಸ್ಟಾರ್ ಏರ್ ಲೈನ್ಸ್ ವಿಮಾನ ಇಂದು ಕೂಡ ರದ್ದಾಗಿದ್ದು, ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಪರದಾಡುವಂತಾಯಿತು.
ಮಧ್ಯಾಹ್ನ ಎರಡು ಘಂಟೆಗೆ ಗೋವಾಕ್ಕೆ ಹೋಗಬೇಕಿದ್ದ ವಿಮಾನ ತಾಂತ್ರಿಕ ಕಾರಣದಿಂದ ರದ್ದಾಗಿದ್ದು, ಮಧ್ಯಾಹ್ನದಿಂದ ಏರಪೋರ್ಟ್ ನಲ್ಲಿ ಪ್ರಯಾಣಿಕರ ಪರದಾಡಿದ್ದಾರೆ.
ಪ್ರಯಾಣಿಕರಿಗೆ ಊಟ, ನೀರು ಯಾವುದೇ ವ್ಯವಸ್ಥೆ ಮಾಡದ ಸ್ಟಾರ್ ಎರ್ ಲೆನ್ಸ್ ಇದರಿಂದ ಆಕ್ರೋಶಗೊಂಡಿದ್ದಾರೆ.
ನೆನ್ನೆ ಕೂಡ ಇದೇ ರೀತಿ ಪರದಾಡಿದ ಪ್ರಯಾಣಿಕರಿಗೆ ಇಂದು ಕೂಡ ತೊಂದರೆಯಾಗಿದೆ. ಯಾವುದೇ ಮೂನ್ಸೂಚನೆ ನೀಡಿದೇ ಗೋವಾ ವಿಮಾನ ರದ್ದು ಮಾಡಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
