Homeಜಿಲ್ಲೆಧರ್ಮಸ್ಥಳ ಪ್ರಕರಣ:ತನಿಖಾವರದಿ ಬರುವ ಮುಂಚೆಯೇ ಬಿಜೆಪಿ ಅಪಪ್ರಚಾರ, ಸೈದ್ದಾಂತಿಕವಾಗಿ ಕಾಂಗ್ರೆಸ್ ಸಂಘಟನೆ: ವಿನಯಕುಮಾರ್...

ಧರ್ಮಸ್ಥಳ ಪ್ರಕರಣ:ತನಿಖಾವರದಿ ಬರುವ ಮುಂಚೆಯೇ ಬಿಜೆಪಿ ಅಪಪ್ರಚಾರ, ಸೈದ್ದಾಂತಿಕವಾಗಿ ಕಾಂಗ್ರೆಸ್ ಸಂಘಟನೆ: ವಿನಯಕುಮಾರ್ ಸೊರಕೆ

Spread the love

ಧರ್ಮಸ್ಥಳ ಪ್ರಕರಣ:ತನಿಖಾವರದಿ ಬರುವ ಮುಂಚೆಯೇ ಬಿಜೆಪಿ ಅಪಪ್ರಚಾರ
ಸೈದ್ದಾಂತಿಕವಾಗಿ ಕಾಂಗ್ರೆಸ್ ಸಂಘಟನೆ: ವಿನಯಕುಮಾರ್ ಸೊರಕೆ

ಶಿವಮೊಗ್ಗ: ಧರ್ಮಸ್ಥಳ ತನಿಖೆ ವಿಷಯದಲ್ಲಿ ಎಸ್ ಐಟಿ ವರದಿ ಬರುವ ಮುಂಚೆಯೇ ಷಡ್ಯಂತ್ರ ನಡೆದಿದೆ ಎಂದು ಉಪಮುಖ್ಯಮಂತ್ರಿ ಹೇಳಿಕೆ ನೀಡಿರುವುದರಿಂದ ತನಿಖೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಚಾರಸಮಿತಿ ರಾಜ್ಯ ಅಧ್ಯಕ್ಷ ವಿನಯಕುಮಾರ್ ಸೊರಕೆ ಹೇಳಿದರು.
ಇಲ್ಲಿನ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಅವರು, ಧರ್ಮಸ್ಥಳ ಪ್ರಕರಣಗಳಲ್ಲಿ ಸತ್ಯ ಹೊರಬರಬೇಕೆಂದೆ ಸರ್ಕಾರ ಎಸ್ ಐ ಟಿ ರಚನೆ ಮಾಡಿದೆ. ತನಿಖೆ ನಡೆಯುತ್ತಿದ್ದು, ವರದಿ ಬರುವ ಮುಂಚೆಯೇ ಬಿಜೆಪಿಗರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸದನದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸರ್ವಜನೋ ಸುಖೀನೋ ಭವತು, ವಸುದೈವ ಕುಟುಂಬಕಂ ಎಂಬ ಅರ್ಥದಲ್ಲಿ ಆರ್ ಎಸ್ ಎಸ್ ಪ್ರಾರ್ಥನೆಯನ್ನು ಬಳಸಿದರಷ್ಟೆ.ಇದನ್ನು ತಪ್ಪಾಗಿ ಅರ್ಥೈಹಿಸಲಾಗಿದೆ. ಬಿಜೆಪಿಗೆ ಒಂದು ಸಿದ್ದಾಂತ ಇರುವಂತೆ ಕಾಂಗ್ರೆಸ್ ಪಕ್ಷಕ್ಕೂ ಒಂದು ಸಿದ್ದಾಂತವಿದೆ. ಅದರಂತೆ ಪಕ್ಷ ಕೆಲಸ ಮಾಡುತ್ತದೆ ಎಂದರು.
ಕಾಂಗ್ರೆಸ್ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಲು ಎಐಸಿಸಿಯಿಂದಲೇ ನೇಮಕವಾದ ಪ್ರಚಾರ ಸಮಿತಿ ಕೆಲಸ ಮಾಡುತ್ತಿದ್ದು, ಅನೇಕ ಯುವಕರು ಕಾಂಗ್ರೇಸ್ ಸಿದ್ದಾಂತದ ಪರವಾಗಿ ಮಾಧ್ಯಮಗಳ ಮೂಲಕ ಕೆಲಸ ಮಾಡುತ್ತಿದ್ದಾರೆ. ಅಂತಹ ಯುವಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಪಕ್ಷವನ್ನು ಸಿದ್ದಾಂತದ ಮೇಲೆ ಸಂಘಟಿಸುವ ಕೆಲಸ ಮಾಡಲಾಗುತ್ತಿದೆ. ಕೇವಲ ಚುನಾವಣೆ ಗೆ ಕಾರ್ಯಕರ್ತರು ಎಂಬ ಅಭಿಪ್ರಾಯವಿದೆ. ಅದನ್ನು ಹೋಗಲಾಡಿಸಲು ಕಾಂಗ್ರೆಸ್ ಸಿದ್ದಾಂತವನ್ನು ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಬೂತ್ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕಾರ್ಯಾಗಾರಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ರಾಹುಲ್ ಗಾಂಧಿ ಅವರು ನಡೆಸಿದ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ನಡೆಸಿದ ಪಾದಯಾತ್ರೆ, ಬಿಹಾರದಲ್ಲಿ ನಡೆಸಿದ ಮತಗಳ್ಳತನ ವಿರುದ್ದ ದ ಯಾತ್ರೆಗಳು ಪಕ್ಷಕ್ಕೆ ಶಕ್ತಿ ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಯೋಜನೆಗಳನ್ನು ಜಾರಿಗೆ ತಂದು ಲಕ್ಷಾಂತರ ಬಡಜನರಿಗೆ ಉಪಯೋಗವಾಗಿದ್ದರೂ ಅವುಗಳಿಗೆ ಸರಿಯಾದ ಪ್ರಚಾರ ಸಿಕ್ಕಿಲ್ಲ. ಸರ್ಕಾರ ಯೋಜನೆಗಳನ್ನು ಜನರಿಗೆ ತಲುಪಿಸಲು ಮತ್ತು ಪ್ರಚಾರ ಮಾಡಲು ಕಾರ್ಯಕರ್ತರನ್ನು ನಿಯೋಜಿಸಲಾಗುವುದು. ಬಿಜೆಪಿ ದೇಶದಲ್ಲಿ ಏನೂ ಕೆಲಸ ಮಾಡದಿದ್ದರೂ ಪ್ರಚಾರ ಪಡೆದುಕೊಳ್ಳುತ್ತಿದೆ ಎಂದರು.
ರಾಜ್ಯಾಧ್ಯಂತ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಲು ಪ್ರವಾಸ ಕೈಗೊಂಡಿದ್ದು, ಮೊದಲ ಹಂತದಲ್ಲಿ ೧೭ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಾಗಿದೆ. ಎರಡನೇ ಹಂತದಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಆರಂಭಿಸಿದ್ದು ಬೂತ್ ಮಟ್ಟದಿಂದ ಕಾರ್ಯಕರ್ತರನ್ನು ಸೈದ್ದಾಂತಿಕವಾಗಿ ತರಭೇತಿಗೊಳಿಸಲಾಗುವುದು. ಚುನಾವಣೆ ಎಂದರೆ ಅದು ಯುದ್ಧದಂತೆ ಅದನ್ನು ಎದುರಿಸಲು ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸಬೇಕಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಕಿಮ್ಮನೆ ರತ್ನಾಕರ್, ಜಿಲ್ಲಾಧ್ಯಕ್ಷ ಬಿ.ಎ ರಮೇಶ್ ಹೆಗಡೆ, ವೀಕ್ಷಕ ಅನಂತ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಪ್ರಧಾನಕಾರ್ಯದರ್ಶಿ ಎಸ್ ಟಿ ಹಾಲಪ್ಪ, ಹಿರಿಯಮುಖಂಡರಾದ ಇಸ್ಮಾಯಿಲ್‌ಖಾನ್, ಮುಡಬರಾಘವೇಂದ್ರ, ಶಿವಾನಂದ ಮತ್ತಿತರರು ಉಪಸ್ತಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments