ಶಿವಮೊಗ್ಗ.ಸೆ.27 : ಬಿಜೆಪಿ ಬರೀ ಧರ್ಮ, ಪಾಕಿಸ್ತಾನ ಅನ್ನದೆ ಉದ್ಯೋಗ ಸೃಷ್ಟಿಸುವತ್ತ ಗಮನ ಹರಿಸಬೇಕು. ಈ ಕುರಿತು ರಾಜ್ಯದ ಸಂಸರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಶನಿವಾರ ನಗರದಲ್ಲಿ ಮಾಧ್ಯಮಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರದಲ್ಲಿ ಉದ್ಯೋಗ ಸರಿಯಾಗಿ ಸೃಷ್ಟಿ ಆಗಿಲ್ಲ. ಮೋದಿ ಅಧಿಕಾರಕ್ಕೆ ಬಂದರೆ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತಿನಿ ಅಂದಿದ್ದರು ಇದುವರೆಗೂ ಕೊಟ್ಟಿಲ್ಲ ಎಂದು ಟೀಕಿಸಿದರು.
ದೇಶ ವ್ಯಾಪ್ತಿ ನಿರುದ್ಯೋಗ ಹೆಚ್ಚಾಗುತ್ತಿದೆ. ಈ ಬಗ್ಗೆ ರಾಜ್ಯದ ಸಿ ಎಂ ಹಾಗೂ ಕೇಂದ್ರ ಸರ್ಕಾರವು ಗಮನ ಕೊಡಬೇಕು. ಉದ್ಯೋಗ ಸೃಷ್ಟಿಸಿ ಯುವಕರಿಗೆ ಸಹಕಾರಿಯಾಗಬೇಕು ಎಂದರು.
ಬಿಜೆಪಿ ಸಣ್ಣ ಸಣ್ಣ ವಿಷಯಕ್ಕೆ ಧರ್ಮ ತಳಕು ಹಾಕಿ ರಾಜಕೀಯ ಮಾಡಬಾರದು. ಮುಸ್ಲಿಂ ರಲ್ಲಿ ಮಾತ್ರವಲ್ಲ ಹಿಂದೂಗಳಲ್ಲಿ ಕಿಡಿಗೇಡಿಗಳಿದ್ದಾರೆ.
ಅವರನ್ನೆಲ್ಲಾ ಧರ್ಮ ಆಧಾರಿತವಾಗಿ ಅಳಿಯುವ ಪ್ರಶ್ನೆಯೇ ಇಲ್ಲ. ತಪ್ಪು ಮಾಡಿದವರು ಯಾರೇ ಆಗಲಿ ಶಿಕ್ಷೆ ಆಗಬೇಕು ಎಂದರು.
ಈಶ್ವರಪ್ಪ, ಅನಂತ ಕುಮಾರ್ ಹೆಗಡೆ, ಯತ್ನಾಳ, ಪ್ರತಾಪ್ ಸಿಂಹ ಇವರೆಲ್ಲರ ಹಿಂದುತ್ವ ಪರವಾಗಿ ಇದ್ದವರು ಅವರನ್ನೇ ಬಿಜೆಪಿ ಯಾಕೆ ಹೊರಹಾಕಿದೆ. ಯಡಿಯೂರಪ್ಪರನ್ನು ಕಣ್ಣೀರು ಹಾಕಿಸಿ ಆಚೆ ದಬ್ಬಿದ ಪಾಪಿ ಇವರು. ನಮ್ಮ ಪಕ್ಷಕ್ಕೆ, ಸಿ ಎಂ ಗೆ ಬಯ್ಯುವ ಯಾವ ಅಧಿಕಾರ ಈಶ್ವರಪ್ಪ ಇಲ್ಲ ಎಂದರು.
ಜಾತಿ ಗಣತಿ ಕುರಿತು ಪ್ರತಿಕ್ರಿಯಿಸಿ, ಜಾತಿಗಣತಿ ಮುಕ್ತವಾಗಿ ನಡೆಯುತ್ತಿದೆ. ಇದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಶಿಕ್ಷಕರ ಈಗಾಗಲೇ ಸಮೀಕ್ಷೆಯಲ್ಲಿ ತೊಡಗಿಕೊಂಡಿದ್ದು, ಅವರಿಗೆ ನಾವೆಲ್ಲಾ ಸಹಕಾರ ನೀಡಬೇಕು ಎಂದರು.
