Homeಜಿಲ್ಲೆಹೆಣ್ಣು ಗೌರವಯುತವಾಗಿ ಬದುಕುತ್ತಿರಲು ಸಂವಿಧಾನವೇ ಕಾರಣ: ಡಾ.ನಾಗಲಕ್ಷ್ಮಿ

ಹೆಣ್ಣು ಗೌರವಯುತವಾಗಿ ಬದುಕುತ್ತಿರಲು ಸಂವಿಧಾನವೇ ಕಾರಣ: ಡಾ.ನಾಗಲಕ್ಷ್ಮಿ

Spread the love

ಶಿವಮೊಗ್ಗ,25: ಹೆಣ್ಣು ಈ ಸಮಾಜದಲ್ಲಿ ಧೈರ್ಯದಿಂದ ಹಾಗೂ ಗೌರವಯುತವಾಗಿ ಬದುಕುತ್ತಿದ್ದಾಳೆ ಎಂದರೇ ಅದಕ್ಕೆ ಅಂಬೇಡ್ಕರ್ ಅವರ ಸಂವಿಧಾನವೇ ಕಾರಣ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ  ಡಾ. ನಾಗಲಕ್ಷ್ಮಿ ಚೌದರಿ ಹೇಳಿದರು

ಕರ್ನಾಟಕ ರಾಜ್ಯ ಮಹಿಳಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕೆಲಸದ ಸ್ಧಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ 2013 ರ ಕುರಿತು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು

ಹೆಣ್ಣಿನ ಮೇಲೆ ಏರಿದ್ದ ಮನು ಸಂಸ್ಕೃತಿಯನ್ನು ತೆಗೆದು ಹಾಕಿದ ಅಂಬೇಡ್ಕರ್, ಸಂವಿಧಾನ ರಚಿಸಿ ಕಾನೂನು ಮೂಲಕ  ಸ್ವಾತಂತ್ರ ನೀಡಿದರು ಎಂದು ತಿಳಿಸಿದರು.

ಹೆಣ್ಣು ಕನ್ನಡ ಮಾತೆ. ಅವಳೇ ಜನನಿಯ ತನುಜಾತೆ. ಅವಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಬೇಕು. ಆ ಉದ್ದೇಶದಿಂದ ಸ್ಧಳೀಯ ಮತ್ತು ಆತಂರಿಕ ದೂರು ನಿವಾರಣ ಸಮಿತಿಯನ್ನು ರಚಿಸಲಾಗಿದೆ.

2013 ರಲ್ಲಿ ಸುಪ್ರೀಂ ಕೋರ್ಟ್ ಮಹಿಳೆಯರಿಗಾಗಿ ದೂರು ಸಮಿತಿ ರಚಿಸಲು ಆದೇಶಿಸಿತ್ತು. ಆದರಿಂದ ಜಿಲ್ಲೆಯಲ್ಲಿ ಸ್ಥಳೀಯ ದೂರು ಸಮಿತಿಯನ್ನು ರಚಿಸಲಾಗಿದ್ದು, ಇದು ಜಿಲ್ಲಾಧಿಕಾರಿ ಕಚೇರಿಯಲ್ಲಿದೆ. 10 ಕ್ಕಿಂತ ಕಡಿಮೆ ಸಂಖ್ಯೆ ಹೊಂದಿರುವ ಅಸಂಘಟಿತ ಹಾಗೂ ಸರ್ಕಾರಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರು ದೂರು ನೀಡಬಹುದಾಗಿದೆ ಎಂದು ಮಾಹಿತಿ ನೀಡಿದರು.

ದೂರಿನ ವರದಿಯನ್ನು ಆಯೋಗಕ್ಕೆ ನೀಡಬೇಕು ಇದರ ಬಗ್ಗೆ ಆರಿವು ಮೂಡಿಸಿ ಅದರ ಉಪಯೋಗ ಮಹಿಳೆಯರು ಪಡೆದುಕೊಳ್ಳುವಂತಾಗಬೇಕು. ಹಾಗೂ ನೊಂದ ಹೆಣ್ಣು ಮಕ್ಕಳಿಗೆ ಧ್ವನಿಯಾಗಿ  181  ಸಹಾಯವಾಣಿ ಕೇಂದ್ರವನ್ನು ಕೂಡ ರಚಿಸಲಾಗಿದೆ ಎಂದು ತಿಳಿಸಿದರು .

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಕಾರ್ಯದರ್ಶಿ ರೂಪ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ.ಎಸ್ ಸಂತೋಷ್ ದೂರು ಸಮಿತಿ ಅಧ್ಯಕ್ಷ ರೇಖಾ, ಸದಸ್ಯರು ಸುಜಾತ, ಭಾರತಿ ಬಣಕಾರ್ , ಶಶಿರೇಖಾ,

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments