Homeರಾಜ್ಯಸಾಮಾಜಿಕ ಜವಾಬ್ದಾರಿ ಮರೆತ ಕಂಪನಿಗಳು, ಸಿಎಸ್ ಆರ್ ನಿಧಿ ಸದ್ಬಳಕೆಗೆ ಕಾನೂನು ಜಾರಿಯಾಗಲಿ: ಐಡಿಯಲ್...

ಸಾಮಾಜಿಕ ಜವಾಬ್ದಾರಿ ಮರೆತ ಕಂಪನಿಗಳು, ಸಿಎಸ್ ಆರ್ ನಿಧಿ ಸದ್ಬಳಕೆಗೆ ಕಾನೂನು ಜಾರಿಯಾಗಲಿ: ಐಡಿಯಲ್ ಗೋಪಿ

Spread the love

ಸಾಮಾಜಿಕ ಜವಾಬ್ದಾರಿ ಮರೆತ ಕಂಪನಿಗಳು,

ಸಿಎಸ್ ಆರ್ ನಿಧಿ ಸದ್ಬಳಕೆಗೆ ಕಾನೂನು ಜಾರಿಯಾಗಲಿ: ಐಡಿಯಲ್ ಗೋಪಿ

ಶಿವಮೊಗ್ಗ: ರಾಜ್ಯದಲ್ಲಿರುವ ಕಾರ್ಪೊರೇಟ್ ಸಂಸ್ಥೆಗಳು ಮತ್ತು ಕಂಪನಿಗಳು ತಮ್ಮ ಸಿಎಸ್‌ಆರ್ ನಿಧಿಯನ್ನು ನಮ್ಮ ರಾಜ್ಯದೊಳಗೆ ವಿನಿಯೋಗ ಮಾಡುವಂತೆ ಕಾನೂನು ರಚಿಸಬೇಕು ಎಂದು ಮಹಾನಗರಪಾಲಿಕೆ ಮಾಜಿ ಹಣಕಾಸು ಕಂದಾಯ ತೆರಿಗೆ ನಿರ್ವಹಣೆ ಸ್ಥಾಯಿ ಸಮಿತಿ ಅಧ್ಯಕ್ಷ ಐಡಿಯಲ್ ಗೋಪಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ವಿದೇಶಿ ಮತ್ತು ಹೊರರಾಜ್ಯದ ಕಂಪನಿ ಗಳು ತಮ್ಮ ವ್ಯಾಪಾರ ವಹಿವಾಟುಗಳನ್ನು ರಾಜ್ಯದಲ್ಲಿ ಮಾಡುತ್ತಿದ್ದಾರೆ ಅವರು ತಮಗೆ ಬರುವ ವಾರ್ಷಿಕ ನಿವ್ವಳ ಲಾಭಂಶದಲ್ಲಿ ೨% ಹಣವನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಮೂಲಕ ರಾಜ್ಯದ ಹಿತ ಕಾಪಾಡುವಲ್ಲಿ ವಿಫಲವಾಗಿದ್ದಾರೆ. ಕೆಲ ಕಂಪನಿಗಳು ತಮಗೆ ಇಷ್ಟ ಬಂದಂತೆ ಹೊರ ರಾಜ್ಯಕ್ಕೆ ತಮ್ಮ ಇಚ್ಛೆ ಅನುಸಾರ ಖರ್ಚು ಮಾಡುತ್ತಿರುವುದು ಸರ್ಕಾರ ಗಮನಿಸಿ ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.

ಸಿಎಸ್ ಆರ್ ನಿಧಿಯನ್ನು ರಾಜ್ಯದ ಶಿಕ್ಷಣ ಹಸಿವು ಬಡತನ ನಿರ್ಮೂಲನೆ ಕೊಳಗೇರಿಗಳ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಮಾಡಲು ಸಂಸ್ಥೆಗಳಿಗೆ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ಕಾನೂನನ್ನು ಜಾರಿಗೆತರಬೇಕು ಎಂದು ಐಡಿಯಲ್ ಗೋಪಿ ಪತ್ರಿಕ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments