ಕೆಪಿಎಸ್ಸಿ ಹಗರಣ ಸಂಬಂಧಪಟ್ಟಂತೆ ವಿರೋಧ ಪಕ್ಷ ನಾಯಕ ಆರ್.ಆಶೋಕ್ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆ ನೀಡಬೇಕೆಂದು ಬಿಗಿಪಟ್ಟು ಹಿಡಿದಿದ್ದಾರೆ.
ಇದಕ್ಕೆ ಪ್ರಿಯಾಂಕ್ ಖರ್ಗೆ ಅವರು ತಿರುಗೇಟು ನೀಡಿದ್ದು, ಸೋಮವಾರ ತಮ್ಮ ‘ಎಕ್ಸ್’ ಖಾತೆಯಲ್ಲಿ ಕೆಪಿಎಸ್ಸಿ ಹಗರಣದಲ್ಲಿ ಭಾಗಿಯಾಗಿರುವ ಆರೋಪಿಗಳು ಆರ್.ಆಶೋಕ್ ಜೊತೆಗೆ ಇರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಗಮನಿಸಿ: ಕಾಂಗ್ರೆಸ್ನ ಟೀಕೆ ಮಾಡಲು ಬಿಜೆಪಿ ಪಾದಯಾತ್ರೆ: ಮಧು ಬಂಗಾರಪ್ಪ ಕಿಡಿ
“ ಬಿಜೆಪಿ ನಾಯಕತ್ವವು ನನ್ನ ರಾಜೀನಾಮೆಯನ್ನು ತೀವ್ರವಾಗಿ ಒತ್ತಾಯಿಸುತ್ತಿದೆ. ಆದರೆ ರಾಜೀನಾಮೆಗೆ ಕಾರಣವೆನೆಂದು ಕೇಳಿದರೆ ಮಾತ್ರ ಅದಕ್ಕೆ ಅವರಲ್ಲಿ ಉತ್ತರವಿಲ್ಲ. ಆರ್.ಆಶೋಕ್ ನನ್ನ ರಾಜೀನಾಮೆಗೆ ಪಣತೊಟ್ಟಿದ್ದಾರೆ. ಆದರೆ ಗಟ್ಟಿಯಾಗಿ ಕೂಗಾಡಿದ ಮಾತ್ರಕ್ಕೆ ಸತ್ಯವನ್ನು ಮುಚ್ಚಿಹಾಕಲು ಸಾಧ್ಯವಿಲ್ಲ. ಆದ್ದರಿಂದ, ನನ್ನ ರಾಜೀನಾಮೆಯನ್ನು ಒತ್ತಾಯಿಸುವ ಬದಲು, ಬಿಜೆಪಿ ಈ ಕೆಳಗಿನ ಕೆಲವು ಸರಳ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.

ಕೆಪಿಎಸ್ಸಿ ಹಗರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಬಸವರಾಜ ಕನ್ನಾಳೆ ಅವರ ವಿಷಯದಲ್ಲಿ ಬಿಜೆಪಿ ನಾಯಕರು ಏಕೆ ಮೌನವಾಗಿದ್ದಾರೆ? ಯಾಕೆಂದರೆ ಅವರು ಬಿಜೆಪಿಯ ಅಧಿಕೃತ ಸಭೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರವಾಸಗಳಲ್ಲಿ ಬಿಜೆಪಿ ನಾಯಕರೊಂದಿಗೆ ಅವರು ಕಾಣಿಸಿಕೊಳ್ಳುತ್ತಾರೆ. ಅವರ “ಅಪ್ಪಾಜಿ”ಯವರ ಆಶೀರ್ವಾದ ಪಡೆಯುತ್ತಿರುವುದೂ ಕಂಡುಬರುತ್ತದೆ ಎಂದು ಟೀಕಿಸಿದ್ದಾರೆ.
ಬಿಜೆಪಿ ನಾಯಕರು ಅವರ ಹುಟ್ಟುಹಬ್ಬದ ಆಚರಣೆಗಳಲ್ಲಿ ಭಾಗವಹಿಸುವುದು, ಅವರ ವಾಣಿಜ್ಯ ಉದ್ಯಮಗಳಿಗೆ ಚಾಲನೆ ನೀಡುವುದನ್ನು ಹಾಗೂ ಅವರಿಗೆ ಅತ್ಯಂತ ಪ್ರೀತಿಯಿಂದ ತಿನಿಸುವುದನ್ನು ಕಾಣಬಹುದಾಗಿದೆ. ಇಷ್ಟೇಲ್ಲಾ ಇದ್ದರೂ ಹೇಗೋ ಏನೋ, ನನ್ನ ರಾಜೀನಾಮೆಯನ್ನೇ ಅವರು ಆಗ್ರಹಿಸುತ್ತಾರೆ.

ಬಸವರಾಜ ಕನ್ನಾಳೆ ಅವರು ದೇಶದಿಂದ ಪಲಾಯನ ಮಾಡಲು ಯತ್ನಿಸಿದ್ದಾರೆ ಎಂಬ ಆರೋಪದ ಬಗ್ಗೆ ಬಿಜೆಪಿ ನಾಯಕರು ಏಕೆ ಮೌನವಾಗಿದ್ದಾರೆ? ಶಿವಶಂಕರಪ್ಪ ಸಾಹುಕಾರ್ ವಿಷಯಕ್ಕೆ ಬಂದಾಗ ಅವರ ಬಾಯಿ ಏಕೆ ಮುಚ್ಚಿದೆ? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ, ಇನ್ನೂ ದೊಡ್ಡದಾದ ಒಂದು ಪ್ರಶ್ನೆಯಿದೆ ಇವರನ್ನು ಕೆಪಿಎಸ್ಸಿ ಸದಸ್ಯರು ಮತ್ತು ಅಧ್ಯಕ್ಷರನ್ನಾಗಿ ಮಾಡಲು ಬಿಜೆಪಿ ನಾಯಕರು ಎಷ್ಟು ಹಣ ಪಡೆದರು? ಕೆಪಿಎಸ್ಸಿ ಹಗರಣದ ಬಗ್ಗೆ ವಾಸ್ತವವಾಗಿ ಎಷ್ಟು ಮಂದಿ ಬಿಜೆಪಿ ನಾಯಕರು ಮಾತನಾಡಿದ್ದಾರೆ ಅಥವಾ ಹೊಣೆಗಾರಿಕೆಯನ್ನು ಆಗ್ರಹಿಸಿದ್ದಾರೆ? ಗುಡುಗಿದ್ದಾರೆ.”
