Homeಜಿಲ್ಲೆಕುವೆಂಪು ವಿವಿಯಲ್ಲಿ ಭ್ರಷ್ಟಚಾರ- ಸರ್ಕಾರ ಮಧ್ಯೆಪ್ರವೇಶಿಸಲಿ: ಡಿ ಎಸ್ ಅರುಣ್

ಕುವೆಂಪು ವಿವಿಯಲ್ಲಿ ಭ್ರಷ್ಟಚಾರ- ಸರ್ಕಾರ ಮಧ್ಯೆಪ್ರವೇಶಿಸಲಿ: ಡಿ ಎಸ್ ಅರುಣ್

Spread the love

ಶಿವಮೊಗ್ಗ. ಮಾ16:  ಕುವೆಂಪು ವಿಶ್ವವಿದ್ಯಾಲಯದ ಆಡಳಿತದಲ್ಲಿ ಉಂಟಾಗಿರುವ ಗೊಂದಲಗಳು ಹಾಗೂಕುಲಸಚಿವರ ವಿರುದ್ಧ ಕೇಳಿಬರುತ್ತಿರುವ ಭ್ರಷ್ಟಾಚಾರ ಆರೋಪಗಳ ಬಗ್ಗೆ ರಾಜ್ಯ ಸರ್ಕಾರ ತಕ್ಷಣಮಧ್ಯಪ್ರವೇಶಿಸಬೇಕು ಎಂದು ಎಂಎಲ್ ಸಿ ಡಿ.ಎಸ್ ಅರುಣ್ ಒತ್ತಾಯಿಸಿದರು.

ವಿಧಾನ ಪರಿಷತ್‌ನ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು,ಕುವೆಂಪು ವಿಶ್ವವಿದ್ಯಾಲದಕುಲಸಚಿವರ ವಿರುದ್ಧ ವಿವಿಧ ಹಗರಣಗಳು ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪದಂತಹ ಗಂಭೀರಆರೋಪಗಳು ಕೇಳಿಬಂದಿರುವುದು ಅತ್ಯಂತ ಚಿಂತಾಜನಕ ವಿಷಯವಾಗಿದೆ.

ಕುಲಸಚಿವರು ಹಾಗೂ ಕುಲಪತಿಗಳ ನಡುವೆ ಹೊಂದಾಣಿಕೆ ಕೊರತೆಯಿರುವುದು ವಿಶ್ವವಿದ್ಯಾಲಯದಆಡಳಿತ ವ್ಯವಸ್ಥೆ ಮತ್ತು ಶೈಕ್ಷಣಿಕ ವಾತಾವರಣದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆಎಂದರು.

ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಕುವೆಂಪು ವಿಶ್ವವಿದ್ಯಾಲಯದ ಘನತೆ ಮತ್ತು ವಿಶ್ವಾಸವನ್ನುಕಾಪಾಡುವುದು ಅತ್ಯಂತ ಅಗತ್ಯವಾಗಿದೆ. ಯಾವುದೇ ರೀತಿಯ ಗೊಂದಲಗಳು ಮತ್ತು ಆರೋಪಗಳುವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುವುದನ್ನು ತಪ್ಪಿಸಲುರಾಜ್ಯ ಸರ್ಕಾರ ತಕ್ಷಣ ಸ್ಪಷ್ಟ ಕ್ರಮ ಕೈಗೊಳ್ಳಬೇಕು.

ವಿಷಯದ ಕುರಿತು ರಾಜ್ಯದ ಉನ್ನತ ಶಿಕ್ಷಣ ಸಚಿವರು ತಕ್ಷಣ ಗಮನ ಹರಿಸಿ, ಆರೋಪಗಳ ಕುರಿತುಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜೊತೆಗೆ ವಿಶ್ವವಿದ್ಯಾಲಯದಆಡಳಿತದಲ್ಲಿ ಪಾರದರ್ಶಕತೆ ಹಾಗೂ ಶಿಸ್ತನ್ನು ಕಾಪಾಡಿ ಸಂಸ್ಥೆಯ ಗೌರವವನ್ನು ಉಳಿಸಬೇಕೆಂದು ಅವರುಒತ್ತಾಯಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments