Homeಜಿಲ್ಲೆನೀರಿನ ಕಂದಾಯ ಪಾವತಿಗೆ ವಿಶೇಷ ಕೌಂಟರ್

ನೀರಿನ ಕಂದಾಯ ಪಾವತಿಗೆ ವಿಶೇಷ ಕೌಂಟರ್

Spread the love

ಶಿವಮೊಗ್ಗ ಮಾ.17: ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತುಉಪವಿಭಾಗ ಶಿವಮೊಗ್ಗ ಇವರ ವತಿಯಿಂದ 2025-26 ನೇ ಸಾಲಿನ ಮಾರ್ಚ್ 22 ಭಾನುವಾರದಂದುನೀರಿನ ಕಂದಾಯ ಮತ್ತು ಬಾಕಿ ಕರ ವಸೂಲಾತಿ ಮಾಡಲು ವಿಶೇಷ ವಸೂಲಾತಿ ಕೌಂಟರ್‌ಗಳನ್ನುಕೆಳಕಂಡ ಸ್ಥಳಗಳಲ್ಲಿ ತೆರೆಯಲಾಗಿದೆ.

ರಾಗಿಗುಡ್ಡ ಕೊನೆ ಬಸ್‌ಸ್ಟಾಪ್ ಹತ್ತಿರ, ಗೋಪಾಳ ಕೊನೆ ಬಸ್‌ಸ್ಟಾಪ್ ಹತ್ತಿರ, ಗಾಂಧೀಬಜಾರ್ ಬಸವೇಶ್ವರದೇವಸ್ಥಾನದ ಆವರಣ, ಅಶೋಕನಗರ ನಂದಿನಿ ಬೂತ್, ಪೊಲೀಸ್ ಕ್ವಾಟ್ರಸ್ ಹತ್ತಿರ ಹಾಗೂ ಗಾಡಿಕೊಪ್ಪಸರ್ಕಾರಿ ಶಾಲೆ ಹತ್ತಿರ ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿದೆ. ನೀರಿನ ಖಾತೆದಾರರು ಬಾಕಿಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ಅಂತಹವರ ನೀರಿನ ಸಂಪರ್ಕವನ್ನುಕಡಿತಗೊಳಿಸಲಾಗುವುದು. ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸಬೇಕೆಂದು ಕನನೀಸ ಮತ್ತುಒಚ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments