HomeUncategorized🌸ವಿಶೇಷ ಲೇಖನ 🌸 ...

🌸ವಿಶೇಷ ಲೇಖನ 🌸 ಆಹಾರ ಭದ್ರತೆ, ಸಿಲಿಂಡರ್ ಗಿಲ್ಲ ಕೊರತೆ

Spread the love

ಸರ್ಕಾರಿ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಸಮರ್ಪಕವಾಗಿ ಪೊರೈಕೆ

 

ಶಿವಮೊಗ್ಗ, ಮಾ.18: ಇರಾನ್ ಮತ್ತು ಇಸ್ರೇಲ್ ಯುದ್ದಮಾನದಿಂದ ದೇಶದೆಲ್ಲೆಡೆ ಹಾಹಕಾರ ಶುರುವಾಗಿದ್ದು, ಭಾರತ ದೇಶಕ್ಕೆ ಈ ಯುದ್ದದಿಂದ ಅಡುಗೆ ಸಿಲಿಂಡರ್ ಕೊರತೆ ಉಂಟಾಗಿ ವಾಣೀಜ್ಯಕರಣಕ್ಕೆ ದೊಡ್ಡ ಪೆಟ್ಟ ಬಿದಿದ್ದೆ. ಅದರೆ ಜಿಲ್ಲೆಯ ವಿದ್ಯಾರ್ಥಿಗಳ ವಸತಿ ನಿಲಯಗಳು  ಇಂತಹದ್ಯಾವುದೆ ಸಂಕಷ್ಟಕ್ಕೆ ಒಳಗಾಗದೆ ಮುನ್ನಡೆಯುತ್ತಿದೆ.

ಜಿಲ್ಲೆಯಲ್ಲಿ ಹೋಟೆಲ್ , ಇಂದಿರಾ ಕ್ಯಾಂಟಿನ್, ಖಾಸಗಿ ಹಾಸ್ಟೆಲ್, ಪಿಜಿಗಳಿಗೆ ಎದುರಿಸುತ್ತಿರುವ ಗ್ಯಾಸ್ ಸಿಲಿಂಡರ್ ಮತ್ತು ಆಹಾರದ ಸಮಸ್ಯೆಗಳನ್ನು ಇಲ್ಲಿನ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಡಿಯಲ್ಲಿರುವ ವಸತಿ ವಿದ್ಯಾರ್ಥಿಗಳ ನಿಲಯಗಳು ಸಮರ್ಪಕವಾಗಿ ಎದುರಿಸುತ್ತ ಈ ಸಮಸ್ಯೆಯಿಂದ ದೂರ ಉಳಿದಿದೆ. ಮಕ್ಕಳಿಗೆ ಆಹಾರದಲ್ಲಿ ಯಾವುದೇ ಕೊರತೆ ಉಂಟಾಗದಂತೆ ನಡೆಸಲಾಗುತ್ತಿದೆ. 

ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ಒಟ್ಟು 79 ವಿದ್ಯಾರ್ಥಿ ನಿಲಯಗಳಿದ್ದು, 6500 ಮಕ್ಕಳಿದ್ದಾರೆ, ಇದರಲ್ಲಿ 49 ಪ್ರಿ ಮೆಟ್ರಿಕ್ ಹಾಸ್ಟೆಲ್ ಗಳಿದ್ದು, ಹುಡುಗರು-35 ಮತ್ತು ಹುಡುಗಿಯರು- 14 ವಸತಿ ನಿಲಯಗಳಿವೆ. 30 ಪೊಸ್ಟ್ ಮೆಟ್ರಿಲ್‌ ಹಾಸ್ಟೆಲ್ ಗಳಿದ್ದು, ಹುಡುಗರು-15 ಮತ್ತು ಹುಡುಗಿಯರು- 15 ವಸತಿ ನಿಲಯಗಳಿವೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಜಿಲ್ಲೆಯಲ್ಲಿ 139 ವಿದ್ಯಾರ್ಥಿ ವಸತಿ ನಿಲಯಗಳಿದ್ದು, ಹುಡುಗಿಯರು-80 ಮತ್ತು ಹುಡುಗರು-59 ವಸತಿ ನಿಲಯಗಳಿವೆ. ಒಟ್ಟು 14,216 ವಿದ್ಯಾರ್ಥಿಗಳು ಒಳಗೊಂಡಿದ್ದಾರೆ.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಡಿ ಒಟ್ಟು 4 ವಿದ್ಯಾರ್ಥಿಗಳ ವಸತಿ ನಿಲಯಗಳಿದ್ದು, ಹುಡುಗರು-3 ಮತ್ತು ಹುಡುಗಿಯರು-1 ವಸತಿ ನಿಲಯಗಳಿವೆ, ಇದರಲ್ಲಿ ಕಾಲೇಜ್ ಮಟ್ಟದ -2 ಮತ್ತು ಶಾಲಾ ಮಟ್ಟದಲ್ಲಿ- 2 ವಸತಿ ನಿಲಯಗಳಿವೆ. ಒಟ್ಟು 280 ವಿದ್ಯಾರ್ಥಿಗಳಿದ್ದಾರೆ.ಇದರಲ್ಲಿ ಪೊಸ್ಟ್ ಮೆಟ್ರಿಕ್ -180, ಪ್ರಿ ಮೆಟ್ರಿಕ್-100 ಮಕ್ಕಳು ಇದ್ದಾರೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲೆಯಲ್ಲಿ 14  ವಿದ್ಯಾರ್ಥಿ ವಸತಿ ನಿಲಯ ಹೊಂದಿದ್ದು, 850 ಪ್ರಿ ಮೆಟ್ರಿಕ್ ಮತ್ತು ಪೊಸ್ಟ ಮೆಟ್ರಿಕ್ ಸೇರಿ 850 ವಿದ್ಯಾರ್ಥಿ ಗಳಿದ್ದಾರೆ. ನಗರದಲ್ಲಿ 6 ವಸತಿ ನಿಲಯಗಳಿದ್ದು, ತಿಂಗಳಿಗೆ 51 ಸಿಲಿಂಡರ್ ಬಳಕೆ ಮಾಡಲಾಗುತ್ತಿದೆ.

ಡೊಮೆಸ್ಟಿಕ್ ಸಿಲಿಂಡರ್ :

ವಸತಿ ನಿಲಯಗಳಿಗೆ ಡೊಮೆಸ್ಟಿಕ್ ಸಿಲಿಂಡರ್ ಬಳಕೆ ಮಾಡಲಾಗಿದೆ ಮತ್ತು ಶೇಖರಣೆ ಮಾಡಲಾಗಿದೆ. ಇದರಿಂದ ವಸತಿಯಲ್ಲಿನ ವಿದ್ಯಾರ್ಥಿಗಳಿಗೆ ಆಹಾರ ಪೂರೈಕೆಗೆ ಯಾವುದೇ ತೊಂದರೆ ಇಲ್ಲ. ಈಗಾಗಲೇ 6  ರಿಂದ 9 ತರಗತಿ ಮಕ್ಕಳಿಗೆ ಪರೀಕ್ಷೆ ಮುಗಿದಿರುವುದರಿಂದ ಮನೆ ತೆರಳಿದ್ದಾರೆ, ಇನ್ನೂ ಒಂಬತ್ತೆ ತರಗತಿ  ವಿದ್ಯಾರ್ಥಿಗಳಿದ್ದಾರೆ. ಅವರಿಗೆ ದಿನ ನಿತ್ಯ ಆಹಾರ ಪಟ್ಟಿಯಂತೆ ಊಟ ನೀಡಲಾಗುತ್ತಿದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶ್ರೀನಿವಾಸ್ ತಿಳಿಸಿದರು.

ಆಹಾರದಲ್ಲಿ ಬದಲಾವಣೆ ಇಲ್ಲ:

ವಸತಿಗಳಲ್ಲಿರುವ ವಿದ್ಯಾರ್ಥಿಗಳಿಗೆ ಯಾವುದೇ ಆಹಾರ ಕೊರತೆಯಾಗದಂತೆ ನಡೆಸಲಾಗುತ್ತಿದೆ. ಸರ್ಕಾರ ನೀಡಿರುವ ಆಹಾರ ಪಟ್ಟಿಯನ್ನು ಯಥಾವತ್ತಾಗಿ ಪಾಲನೆ ಮಾಡಲಾಗುತ್ತಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆ ಇರುವುದರಿಂದ ಆನೇಕ ಮಕ್ಕಳು ವಸತಿ ನಿಲಯದಲ್ಲೆ ಉಳಿದುಕೊಳ್ಳುವುದರಿಂದ ಅವರಿಗೆ ಯಾವುದೆ ರೀತಿ ತೊಂದರೆಯಾಗದಂತೆ ನಿಭಾಯಿಸಲಾಗುತ್ತಿದೆ ಎಂದು ಒಬಿಸಿ ಇಲಾಖೆಯ ಅಧಿಕಾರಿ ಶೋಭಾ ತಿಳಿಸಿದರು.

ಆಹಾರ ಪಟ್ಟಿಯಲ್ಲಿ ಯಾವುದೆ ಬದಲಾವಣೆ ಮಾಡಿಲ್ಲ. ರಾಗಿ ಮುದ್ದೆ, ಚಪಾತಿ, ಅನ್ನ , ಸಾಂಬರ್,ಮೊಟ್ಟೆ ನೀಡಲಾಗುತ್ತಿದೆ. ಸಿಲಿಂಡರ್ ಕೊರತೆ ಉಂಟಾಗಿಲ್ಲ.
– ಪ್ರೀತಿ, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ
ಪೊಸ್ಟ್ ಮೆಟ್ರಿಕ್ ವಿದ್ಯಾರ್ಥಿ ನಿಲಯದಲ್ಲಿ 180 ವಿದ್ಯಾರ್ಥಿನಿಯರಿದ್ದು, ದಿನಕ್ಕೆ ಒಂದಂತೆ ತಿಂಗಳಿಗೆ ಮೂವತ್ತು ಸಿಲಿಂಡರ್ ಬಳಕೆ ಮಾಡಲಾಗುತ್ತಿದೆ. ಪ್ರಿ ಮೆಟ್ರಿಕ್ ವಿದ್ಯಾರ್ಥಿ ನಿಲಯದಲ್ಲಿ 30 ಮಕ್ಕಳಿದ್ದು, ಮೂರು ದಿನಕ್ಕೆ ಒಂದು ಸಿಲಿಂಡರ್ ಬಳಕೆ ಮಾಡಲಾಗುತ್ತಿದೆ.
– ಶ್ರೀನಿವಾಸ್ , ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ

ಜಿಲ್ಲೆಯಲ್ಲಿನ ಸರ್ಕಾರಿ ವಿದ್ಯಾರ್ಥಿ ವಸತಿ ನಿಲಯಗಳಿಗೆ ಸಿಲಿಂಡರ್ ಕೊರತೆ ಉಂಟಾಗಬಾರದು. ಸಮರ್ಪಕವಾಗಿ ಪೂರೈಸಬೇಕೆಂದು ಜಿಲ್ಲಾ ಪಂಚಾಯತ್ ಸಿಇಓ ಮತ್ತು ಜಿಲ್ಲಾಧಿಕಾರಿ ಆದೇಶಿಸಿದ್ದು, ಆದೇಶದ ಪೂರಕವಾಗಿ ಎಲ್ಲಾ ವಸತಿ ನಿಲಯಗಳಿಗೆ ಸಿಲಿಂಡರ್ ಪೂರೈಕೆ ಆಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments