Homeಜಿಲ್ಲೆಜಾತಿ ನಿಂದನೆ- ಆರೋಪಿಗಳಿಗೆ ಕಾರಾವಾಸ: ನ್ಯಾಯಾಲಯ ಆದೇಶ

ಜಾತಿ ನಿಂದನೆ- ಆರೋಪಿಗಳಿಗೆ ಕಾರಾವಾಸ: ನ್ಯಾಯಾಲಯ ಆದೇಶ

Spread the love

ಶಿವಮೊಗ್ಗ, ಮಾ.20: ಜಾತಿ ನಿಂದನೆ ಮಾಡಿ, ಅವಾಚ್ಯ ಶಬ್ಧಗಳಿಂದ ಬೈದು, ಜೀವ ಬೆದರಿಕೆ ಹಾಕಿದ ಆರು ಜನರಿಗೆ .ಜಾತಿ ಹಾಗೂ .ಪಂಗಡ ದೌರ್ಜನ್ಯ ತಡೆ ಕಾಯ್ದೆ ಯಡಿ  2 ವರ್ಷ ಕಠಿಣ ಕಾರಾವಾಸ ಶಿಕ್ಷೆ ವಿಧಿಸಿ ಭದ್ರಾವತಿಯ ಘನ 4 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ಆದೇಶಿಸಿದೆ.

ದಿನಾಂಕ:- 28/07/2020 ರಂದು ಲಕ್ಷ್ಮೀಪುರ ಗ್ರಾಮದ ಜಮೀನಿನಲ್ಲಿ  ಪಿರ್ಯಾದಿಯು ಕೆಲಸಮಾಡುತ್ತಿದ್ದಾಗ ಆರೋಪಿಗಳಾದ ಗೌತಮಿ(30), ನಾಗರಾಜ(56), ರಾಘವೇಂದ್ರ(35), ನಾಗರತ್ನ (54), ಲಕ್ಷಮ್ಮಮ್ಮ(40 ) ಮತ್ತು ದೇವರಾಜ(28) ಇವರುಗಳು ಜಾತಿ ನಿಂದನೆ ಮಾಡಿ, ಅವಾಚ್ಯ ಶಬ್ಧಗಳಿಂದಬೈದು, ಜೀವ ಬೆದರಿಕೆ ಹಾಕಿದ್ದು, ಈ ಬಗ್ಗೆ ನ್ಯೂ ಟೌನ್ ಠಾಣೆ ಭದ್ರಾವತಿ ಗುನ್ನೆ ಸಂಖ್ಯೆ 108/2020 ರಲ್ಲಿ .ಜಾತಿ ಹಾಗೂ .ಪಂಗಡ ದೌರ್ಜನ್ಯ ತಡೆ ಕಾಯ್ದೆ ರಿತ್ಯಾ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಡಿವೈಎಸ್ ಪಿ ಸುಧಾಕರ್ ಎಸ್ ನಾಯ್ಕ್ ಪ್ರಕರಣದ ತನಿಖೆಪೂರೈಸಿ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.

ಸರ್ಕಾರಿ ಅಭಿಯೋಜಕರಾದ ರತ್ನಮ್ಮ ಪಿ. ವಾದ ಮಂಡಿಸಿದ್ದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟಹಿನ್ನೆಲೆಯಲ್ಲಿ ಭದ್ರಾವತಿಯ ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರಾದ  ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ರವರು ದಿನಾಂಕ:18-03-2026 ರಂದು ಆರೋಪಿತರಿಗಳಿಗೆ ತಲಾ 2 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು 1,74,000/- ರೂ ದಂಡವನ್ನು ವಿಧಿಸಿ ಆದೇಶಿಸಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments