Homeಜಿಲ್ಲೆನೀರಾನೆ ದಾಳಿ : ಡಾ.ಸಮೀಕ್ಷಾ ರೆಡ್ಡಿ ಸಾವು

ನೀರಾನೆ ದಾಳಿ : ಡಾ.ಸಮೀಕ್ಷಾ ರೆಡ್ಡಿ ಸಾವು

Spread the love

ಶಿವಮೊಗ್ಗ, ಮಾ.20: ಶಿವಮೊಗ್ಗದ ತ್ಯಾವರೆಕೊಪ್ಪದ ಹುಲಿ–ಸಿಂಹಧಾಮದಲ್ಲಿ ಗರ್ಭಿಣಿ ನೀರಾನೆಯನ್ನು ಪರೀಕ್ಷಿಸಲು ತೆರಳಿದ್ದ ಪಶುವೈದ್ಯೆ ಡಾ.ಸಮೀಕ್ಷಾ ರೆಡ್ಡಿಯವರ ಮೇಲೆ ನೀರುಕುದುರೆ ಆಕಸ್ಮಿಕವಾಗಿ ದಾಳಿನಡೆಸಿದ್ದು, ಶಿವಮೊಗ್ಗದ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆಗೆಒಳಗಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮಾ.20 ರ ಬೆಳಿಗ್ಗೆ 6.30 ಕ್ಕೆ ಮೃತಪಟ್ಟಿರುತ್ತಾರೆ.

ಡಾ.ಸಮೀಕ್ಷಾ ರೆಡ್ಡಿ, 27 ವರ್ಷ, ಬೆಂಗಳೂರು ಇವರು ಪಶು ವೈದ್ಯಾಧಿಕಾರಿಯಾಗಿ ಆಯ್ಕೆಯಾಗಿಮೃಗಾಲಯದ ಪಶುವೈದ್ಯರಿಂದ ತರಬೇತಿ ಪಡೆಯುತ್ತಿದ್ದರು. ಅವರು ಮಾ.19 ರಂದು ರಾತ್ರಿ 10.30 ಕ್ಕೆಮೃಗಾಲಯದ ಆಸ್ಪತ್ರೆಗೆ ತೆರಳಿ ಸನ್ ಕೊನ್ಯೂರ್ ಪಕ್ಷಿಗೆ ಫಾಲೊ ಅಪ್ ಚಿಕಿತ್ಸೆ ನೀಡಿದ್ದರು. ನಂತರ ರಾತ್ರಿ11.45 ಕ್ಕೆ ಥರ್ಮಲ್ ಕ್ಯಾಮೆರಾ ಬಳಸಿ ಗರ್ಭಿಣಿ ನೀರು ಕುದರೆಯ(ಹಿಪ್ಪೊಪೊಟಮಸ್) ತಾಪಮಾನಪರೀಕ್ಷಿಸುವ ವೇಳೆ ನೀರುಕುದುರೆ ದಾಳಿ ನಡೆಸಿತ್ತು ಎಂದು ಹುಲಿ–ಸಿಂಹಧಾಮದ ಉಪ ಅರಣ್ಯಸಂರಕ್ಷಣಾಧಿಕಾರಿ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments