ಸೊರಬ,ಮಾ.24: ಸಂಚಾರಿ ನಿಯಮಗಳನ್ನು ಪಾಲಿಸುವುದರಿಂದ ಅಪಘಾತಗಳನ್ನು ತಗ್ಗಿಸಲು ಮತ್ತುಜೀವ ರಕ್ಷಿಸಲು ಅತ್ಯಗತ್ಯವಾಗಿದೆ ಎಂದು ಪಿಎಸ್ಐ ಎಂ.ಎಚ್. ನವೀನ್ ಹೇಳಿದರು.
ಮಂಗಳವಾರ ಪಟ್ಟಣದ ಪುರಸಭೆ ಮುಂಭಾಗದ ವೃತ್ತದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಪೊಲೀಸ್ಇಲಾಖೆಯ ಸಹಯೋಗದೊಂದಿಗೆ ಸಂಚಾರಿ ನಿಯಮ ಪಾಲನೆ ಕುರಿತು ಹಮ್ಮಿಕೊಂಡ ಜಾಗೃತಿಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಅಪಘಾತಗಳು ಸಂಭವಿಸಿದಾಗ ತಲೆಗೆಪೆಟ್ಟು ಬಿದ್ದು ಜೀವ ಹಾನಿಯಾದ ಪ್ರಕರಣಗಳೇ ಹೆಚ್ಚಾಗಿವೆ. ಆದ್ದರಿಂದ ಹೆಲ್ಮೆಟ್ ಧರಿಸುವುದರಿಂದ ಜೀವಸುರಕ್ಷತೆಯನ್ನು ಒದಗಿಸುತ್ತದೆ. ವಾಹನಗಳ ಚಾಲನೆ ವೇಳೆ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವಜೊತೆಗೆ ಚಾಲನಾ ಪರವಾನಗಿ, ವಾಹನ ನೋಂದಣಿ ದಾಖಲೆ, ವಿಮೆ ಸೇರಿದಂತೆ ಅಗತ್ಯ ದಾಖಲೆಗಳನ್ನುಹೊಂದಿರಬೇಕು. ಪಟ್ಟಣದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದವರ ವಾಹನದಫೋಟೋ ತಗೆದು ದಂಡ ವಿಧಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ತಿಳಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷೆ ಭಾರತಿ ಹನುಮಂತಪ್ಪ ಮಾತನಾಡಿ, ಕಾನೂನಿನ ಪಾಲನೆಗೆ ಮಾತ್ರವಲ್ಲದೇ ನಿಮ್ಮಬದುಕು ಮತ್ತು ನಿಮ್ಮ ಮೇಲೆ ಅವಲಂಬನೆಯಾಗಿರುವ ಕುಟುಂಬ ಸದಸ್ಯರ ಹಿತದೃಷ್ಟಿಯಿಂದ ದ್ವಿಚಕ್ರವಾಹನ ಸವಾರರು ಹೆಲ್ಮೆಟ್ ಧರಿಸುವುದು ಒಳಿತು.
ಹೆಲ್ಮೆಟ್ ಧರಿಸದೆ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುವುದರಿಂದ ಪ್ರಾಣ ಹಾನಿ ಸಂಭವಿಸುವಸಾಧ್ಯತೆ ಹೆಚ್ಚು. ಯುವಕರು ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸಬೇಕು ಎಂದ ಅವರು, ಲಯನ್ಸ್ಸಂಸ್ಥೆ ಅನೇಕ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿದ್ದು, ಇದರ ಭಾಗವಾಗಿ ಸಾರ್ವಜನಿಕರಿಗೆ ಸಂಚಾರಿನಿಯಮಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ಸುಬ್ರಹ್ಮಣ್ಯ ಗುಡಿಗಾರ್, ಖಜಾಂಚಿ ಸವಿತಾ ಎಂ.ಕೆ. ಭಟ್, ಅಶೋಕ್ಟೇಮ್ಕರ್, ಕೆ. ಮೋಹನ್ದಾಸ್, ವಿ.ವಿ. ಜಾವುರ್, ಪೊಲೀಸ್ ಇಲಾಖೆಯ ಎಎಸ್ಐ ಅಶೋಕ್, ಸಿಬ್ಬಂದಿಸಿ.ಬಿ. ರವೀಂದ್ರ, ಎಚ್.ಕೆ. ಮಾರುತಿ, ಕೆ.ಎಚ್. ಗಿರೀಶ್, ಪ್ರಮುಖರಾದ ಡಿ.ಎಸ್. ಪ್ರವೀಣ್ ಕುಮಾರ್ದೊಡ್ಮನೆ, ಲಿಂಗರಾಜ ಹಳೇಸೊರಬ, ಚಂದ್ರಪ್ಪ ಮಾಸ್ತರ್ ಸೇರಿದಂತೆ ಇತರರಿದ್ದರು.
