Homeಜಿಲ್ಲೆಪರಿಸರವನ್ನು ಉಳಿಸಿಕೊಂಡೆ ಪಂಪ ಸ್ಟೋರೆಜ್ ಯೋಜನೆಯ ಜಾರಿಗೆ ಪ್ರಯತ್ನ: ಬಿವೈಆರ್

ಪರಿಸರವನ್ನು ಉಳಿಸಿಕೊಂಡೆ ಪಂಪ ಸ್ಟೋರೆಜ್ ಯೋಜನೆಯ ಜಾರಿಗೆ ಪ್ರಯತ್ನ: ಬಿವೈಆರ್

Spread the love

ಶಿವಮೊಗ್ಗ,ಮಾ.24: ಶರಾವತಿ ಪಂಪ್ ಸ್ಟೋರೆಜ್ ಯೋಜನೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕೇಂದ್ರಕ್ಕೆ ಪ್ರಪೊಸಲ್ ಕಳಿಸಿದ್ದು, ಕೇಂದ್ರ ಸರ್ಕಾರದ ಅದನ್ನು ಪರಿಶೀಲಿಸಿ ನಂತರ ನಿರ್ಧಾರವನ್ನುತಿಳಿಸುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಇಂದು ನಗರದಲ್ಲಿ ಮಾಧ್ಯಮಗಾರರೊಂದಿಗೆ ಮಾತನಾಡಿ, ಈಗಾಗಲೇ ಕೇಂದ್ರ ಮಂತ್ರಿಯೊಂದಿಗೆ ಮಾತುಕತೆ ನಡೆಸಲಾಗಿದೆ. ಪರಿಸರವನ್ನು ಉಳಿಸಿಕೊಂಡೆ ಯೋಜನೆಯನ್ನು ಜಾರಿ ಮಾಡಬೇಕೆಂಬ ಉದ್ದೇಶಹೊಂದಿದ್ದೇವೆ. ಯೋಜನೆಯನ್ನು 40;60 ರೆಷಿಯೋ ದಲ್ಲಿ ಮಾಡಬೇಕೆಂಬ ಯೋಚನೆಯೂ ಇದೆ. ಅದರಂತೆ ಅರಣ್ಯ ಇಲಾಖೆ, ಕಂದಾಯ ಇಲಾಖೆಗಳು ಸ್ಥಳ ಪರಿಶೀಲನೆ ಮಾಡುತ್ತಿವೆ ಎಂದರು.

ಉಪ ಚುನಾವಣೆ ಕುರಿತು ಪ್ರತಿಕ್ರಿಯೆಸಿ, ರಾಜ್ಯದ ಜನರಿಗೆ ಕಾಂಗ್ರೆಸ್ ಸಾಕು ಎನ್ನುವ ಮನಸ್ಥಿತಿಉಂಟಾಗಿದ್ದು, ಬಾರಿ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಎರಡು ಕ್ಷೇತ್ರವನ್ನು ಗೆಲ್ಲುವ ವಿಶ್ವಾಸವಿದೆ.

ದೇಶದ 5 ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಕೇಂದ್ರದಲ್ಲಿ ವಿರೋಧ ಪಕ್ಷದ ಕಾಂಗ್ರೆಸ್ ಈಗಾಗಲೇರಾಜ್ಯಸಭೆಯಲ್ಲಿ ಸೋತು ಮುಖಭಂಗ ಅನುಭವಿಸಿದೆ. ರಾಜ್ಯದ ಜನರಿಗೂ ಕೂಡ ಕಾಂಗ್ರೆಸ್ ಸರ್ಕಾರಸಾಕಾಗಾಗಿದೆ. ಕಾಂಗ್ರೆಸ್ ಬರೀ ಗ್ಯಾರಂಟಿ ಯೋಜನೆ ಘೋಷಿಸಿದೆ ಹೊರತಾಗಿ ಯಾವುದೇ ಅಭಿವೃದ್ದಿಮಾಡುತ್ತಿಲ್ಲ. ಹಾಗಾಗಿ ಬಾರಿ ರಾಜ್ಯದ ಎರಡು ಉಪ ಚುನಾವಣೆ ಕ್ಷೇತ್ರವನ್ನು ನಾವು ಗೆಲ್ಲುತ್ತೇವೆಎಂದರು.

ಕಾಂಗ್ರೆಸ್ ಇವಿಎಂ ಬೇಡ ಬ್ಯಾಲೆಟ್ ಬೇಕು ಎಂದು ಮಾತನಾಡುತ್ತದೆ ಆದರೆ ಅವರ ಪಕ್ಷದಲ್ಲಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ದೇಶದ ಅಭಿವೃದ್ದಿಗೆ ಟೆಕ್ನಾಲಜಿ ಬೇಕು ಎನ್ನುತ್ತಾರೆ ಇತ್ತ ಡಿ.ಕೆ.ಶಿವಕುಮಾರ್ ಗ್ರೇಟರ್ ಬೆಂಗಳೂರು ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ಗೊಂದಲ್ಲ ನಮಗೆ ಅರ್ಥವಾಗುತ್ತಿಲ್ಲ. ಕಾಂಗ್ರೆಸ್ ಸೋತರೆ ಬ್ಯಾಲೆಟ್ ಬೇಕು ಎನ್ನುತ್ತಾರೆ ಅಷ್ಟೆ, ಗೆದ್ದರೆ ಬಗ್ಗೆ ಚಕಾರು ಎತ್ತುವುದಿಲ್ಲ ಎಂದು ವ್ಯಂಗವಾಡಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments