ಶಿವಮೊಗ್ಗ ಮಾ.27: ಕುವೆಂಪು ವಿವಿಯ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ನಡೆದ ಸಹ್ಯಾದ್ರಿ ಸಿರಿಕಾರ್ಯಕ್ರಮದ ಸಮಗ್ರ ಪ್ರಶಸ್ತಿಯನ್ನು ನಗರದ ಕುವೆಂಪು ಶತಮಾನೋತ್ಸವ ಶಿಕ್ಷಣ ಸಂಸ್ಥೆಯುಪಡೆದುಕೊಂಡಿದೆ.
ಇವರಿಗೆ ಕಾಲೇಜಿನಲ್ಲಿ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲಸಿರಾಜ್ ಅಹಮದ್ ಸೇರಿದಂತೆ ಉಪನ್ಯಾಸಕ ವರ್ಗದವರು ಪ್ರಶಸ್ತಿ ನೀಡಿ ಗೌರವಿಸಿದರು.
ಉಳಿದಂತೆ ಮೆರವಣಿಗೆ ಜಾಥಾದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕುವೆಂಪು ಶತಮಾನೋತ್ಸವ ಪ್ರಥಮ, ರಾಷ್ಟ್ರೀಯ ಮಹಾವಿದ್ಯಾಲಯ ದ್ವಿತೀಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಿಪ್ಪನ್‌ಪೇಟೆ ತೃತೀಯಬಹುಮಾನ ಪಡೆದರು. ಜಾನಪದ ನೃತ್ಯದಲ್ಲಿ ಎಟಿಎನ್‌ಸಿ ಕಾಲೇಜು ಪ್ರಥಮ, ಕುವೆಂಪು ಶತಮಾನೋತ್ಸವಶಿಕ್ಷಣ ಮಹಾವಿದ್ಯಾಲಯ ದ್ವಿತೀಯ, ಹೊಸನಗರದ ಕೊಡಚಾದ್ರಿ ಪ್ರಥಮದರ್ಜೆ ಕಾಲೇಜು ತೃತೀಯಬಹುಮಾನ ಪಡೆದವು. ಭರತನಾಟ್ಯ ವಿಭಾಗದಲ್ಲಿ ಸುಹಾನಿ, ಕಾವ್ಯ, ವಿಸ್ಮಿತ ಕ್ರಮವಾಗಿ ಮೂರುಬಹುಮಾನಗಳನ್ನು ಪಡೆದಿದ್ದಾರೆ. ಸಿನಿಮಾ ನೃತ್ಯದಲ್ಲಿ ಹೊಸನಗರ ಕೊಡಚಾದ್ರಿ ಕಾಲೇಜಿನ ತಂಡಪ್ರಥಮ, ವನಿತಾ ನೇತೃತ್ವದ ತಂಡ ದ್ವಿತೀಯ ಕೌಶಿಕ್ ನೇತೃತ್ವದ ತಂಡ ತೃತೀಯ ಬಹುಮಾನ ಪಡೆದಿದ್ದಾರೆ.
ಸಮೂಹ ಗಾಯನ ಸ್ಪರ್ಧೆಯಲ್ಲಿ ಪ್ರಜ್ವಲ್ ಪ್ರಥಮ, ಹಾಲೇಶ್ ದ್ವಿತೀಯ, ವಿಭಾ ತೃತೀಯ ಸ್ಥಾನ ಪಡೆದರೆ, ಏಕವ್ಯಕ್ತಿ ಗಾಯನ ಸ್ಪರ್ಧೆಯಲ್ಲಿ ನಂದನ್ ಪ್ರಥಮ, ನಯನ ಕೆ.ಪಿ., ದ್ವಿತೀಯ, ಅಮೂಲ್ಯ ತೃತೀಯಬಹುಮಾನ ಪಡೆದಿದ್ದಾರೆ. ಮೂಕಾಭಿನಯದಲ್ಲಿ ಭದ್ರಾವತಿ ಪ್ರಥಮದರ್ಜೆ ಕಾಲೇಜಿನ ರಾಮಲಿಂಗಪ್ಪತಂಡ ಪ್ರಥಮ, ಅಭಿ ತಂಡ ದ್ವಿತೀಯ, ಸುಬ್ರಹ್ಮಣ್ಯ ತಂಡ ತೃತೀಯ ಬಹುಮಾ ಪಡೆದಿದ್ದಾರೆ. ಹಾಗೆಯೇಚರ್ಚಾ ಸ್ಪರ್ಧೆಯಲ್ಲಿ ರಂಜಿತಾ ಪ್ರಥಮ, ಚಂದನಾ, ದ್ವಿತೀಯ, ಪ್ರತೀಕಾ ತೃತೀಯ ಬಹುಮಾನ ಪಡೆದರೆಆಶುಭಾಷಣ ಸ್ಪರ್ಧೆಯಲ್ಲಿ ರಂಜಿತಾ ಪ್ರಥಮ, ಗೌರಿ ದ್ವಿತೀಯ, ಪ್ರತೀಕ ತೃತೀಯ ಬಹುಮಾನ ಪಡೆದಿದ್ದಾರೆ. ಹಾಸ್ಯ ಪ್ರಸಂಗ ಸ್ಪರ್ಧೆಯಲ್ಲಿ ಅವರಿತ್ ಪ್ರಥಮ, ಆಯುಷ್ ದ್ವಿತೀಯ, ಮಿಥುನ್ ತೃತೀಯ ಬಹುಮಾನಪಡೆದಿದ್ದಾರೆ.
ಬಹುಮಾನ ವಿತರಣಾ ಸಂದರ್ಭದಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿ ಹೆಚ್.ಎನ್.ಮಂಜುನಾಥ್, ಮಹಾದೇವಸ್ವಾಮಿ, ಜಿ.ಕೆ.ಪ್ರೇಮ, ಶಫೀವುಲ್ಲಾ, ಚಂದ್ರಶೇಖರ್, ಶ್ರೀಸಿಂಚನ, ಡಾ.ಪ್ರಸನ್ನಕುಮಾರ್, ಶೃಂಗಶ್ರೀ, ಡಾ.ಕೃಪಾಲಿನಿ, ಸಂಗೀತ, ಪ್ರೊ. ಪ್ರಹ್ಲಾದ್, ಶಂಭುಲಿಂಗಮೂರ್ತಿ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.
