Homeಜಿಲ್ಲೆಕಂನಾಡಿಗ ನಾರಾಯಣಗೆ ಸಾಹಿತ್ಯಶ್ರೀ ಪ್ರಶಸ್ತಿ

ಕಂನಾಡಿಗ ನಾರಾಯಣಗೆ ಸಾಹಿತ್ಯಶ್ರೀ ಪ್ರಶಸ್ತಿ

Spread the love

ಶಿವಮೊಗ್ಗ, ಮಾ.27 : ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ನೀಡುವ ಸಾಹಿತ್ಯಶ್ರೀ ಪ್ರಶಸ್ತಿಗೆ ಶಿವಮೊಗ್ಗಗಾಡಿಕೊಪ್ಪದ ಕಂನಾಡಿಗ ನಾರಾಯಣ ಅವರು ಭಾಜನರಾಗಿದ್ದಾರೆ.

ಕಂನಾಡಿಗ ನಾರಾಯಣ ಅವರು ಶಿವಮೊಗ್ಗದ ಗಾಡಿಕೊಪ್ಪದವರಾಗಿದ್ದು, ಇವರಿಗೆ ೨೦೨೫ನೇ ಸಾಲಿನಸಾಹಿತ್ಯಶ್ರೀ ಪ್ರಶಸ್ತಿ ದೊರಕಿದ್ದು, ಪ್ರಶಸ್ತಿಯು ೨೫ ಸಾವಿರ ರೂ. ನಗದು, ಪ್ರಶಸ್ತಿ ಫಲಕ ಹಾಗೂಪ್ರಮಾಣಪತ್ರವನ್ನು ಒಳಗೊಂಡಿದೆ. ನಾರಾಯಣ ಅವರು ಇತಿಹಾಸ ರಾಜ್ಯಶಾಸ್ತ್ರ ಸೇರಿದಂತೆ ನಾಲ್ಕುಸ್ನಾತಕೋತ್ತರ ಪದವಿ ಪಡೆದಿದ್ದಾರೆ. ದ್ವಾಪರ ಮಹಾವೃಕ್ಷ ಬುದ್ಧಯಾನ ಸೇರಿದಂತೆ 6 ಪ್ರಮುಖಕಾದಂಬರಿಗಳನ್ನು ಬರೆದಿರುವ ಇವರು ಜೀಗಾಂಧಿ, ಹಸಿರು ಕಣ್ಣಿನ ಹುಡುಗಿ ಸೇರಿದಂತೆ ೮ಕ್ಕೂ ಹೆಚ್ಚುಕಥಾ ಸಂಕಲನಗಳನ್ನು ಮಕ್ಕಳ ಸಾಹಿತ್ಯ, ಕಾವ್ಯ, ಆಯ್ದ ಕವನ ಸಂಕಲನಗಳು, ಸಾಂಧರ್ಬಿಕ ಕೃತಿಗಳುಸೇರಿದಂತೆ ಸುಮಾರು ೫೦ಕ್ಕೂ ಹೆಚ್ಚು ಕೃತಿಗಳನ್ನು ಬರೆದು ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದಾರೆ. ಇವರ ೧೬ಕ್ಕೂ ಹೆಚ್ಚು ಕೃತಿಗಳು ಇಂಗ್ಲಿಷ್‌ಗೆ ಅನುವಾದಗೊಂಡಿದೆ.

ದ್ವಾಪರ ಕಾದಂಬರಿ ಸಾಹಿತ್ಯ ಲೋಕದಲ್ಲಿ ಮಿಂಚಿನ ಸಂಚಾರ ಮಾಡಿದ್ದು, ವಿಮರ್ಶೆಗೂ ಒಳಗಾಗಿದೆ. ಕಂನಾಡಿಗ ನಾರಾಯಣ ಅವರ ಸಾಹಿತ್ಯವನ್ನು ಪ್ರಮುಖವಾಗಿಟ್ಟುಕೊಂಡು ಪ್ರಬಂಧ ಮಂಡಿಸಿದಉಪನ್ಯಾಸಕಿ ಪ್ರತಿಮಾ ಅವರಿಗೆ ಡಾಕ್ಟರೇಟ್ ಪದವಿ ಕೂಡಾ ದೊರಕಿದೆ.

ಈಗಾಗಲೇ ಹಲವು ಪ್ರಶಸ್ತಿಗಳನ್ನು ರಾಜ್ಯಮಟ್ಟದಲ್ಲಿ ಪಡೆದಿರುವ ಇವರಿಗೆ ಇದೀಗ ಸಾಹಿತ್ಯ ಪ್ರಶಸ್ತಿ ಕೂಡಾ ಇವರ ಬತ್ತಳಿಕೆಗೆ ಸೇರಿಕೊಂಡಿದೆ. ಇವರ ಗೆಳೆಯರ ಬಳಗ ಇವರನ್ನು ಅಭಿನಂದಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments