Homeಜಿಲ್ಲೆ“ಕಲಬೆರಕೆ ತಡೆಗೆ-ನಮ್ಮ ನಡಿಗೆ”- ಆಹಾರ ಸುರಕ್ಷತಾ ಅಭಿಯಾನ

“ಕಲಬೆರಕೆ ತಡೆಗೆ-ನಮ್ಮ ನಡಿಗೆ”- ಆಹಾರ ಸುರಕ್ಷತಾ ಅಭಿಯಾನ

Spread the love

ಶಿವಮೊಗ್ಗ, ಮಾ. 31:ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಸಾರ್ವಜನಿಕರ ಆರೋಗ್ಯ ರಕ್ಷಣೆಯು ಸಮಾಜದ ಪ್ರಮುಖ ಜವಾಬ್ದಾರಿಯಾಗಿದ್ದು. ಇತ್ತೀಚಿನ ದಿನಗಳಲ್ಲಿ ಆಹಾರದಲ್ಲಿ ಕಲಬೆರಕೆ ಹೆಚ್ಚುತ್ತಿರುವುದು ಜನರ ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟು ಮಾಡುತ್ತಿರುವ ಹಿನ್ನಲೆಯಲ್ಲಿ, ಸುರಕ್ಷಿತ, ಶುದ್ಧ ಹಾಗೂ ಗುಣಮಟ್ಟದ ಆಹಾರವನ್ನು ಜನರಿಗೆ ಒದಗಿಸುವ ಉದ್ದೇಶದಿಂದ “ಕಲಬೆರಕೆ ತಡೆಗೆ-ನಮ್ಮ ನಡಿಗೆ” ಆಹಾರ ಸುರಕ್ಷತಾ ಅಭಿಯಾನ -2026 ಅನ್ನು ಹಮ್ಮಿಕೊಳ್ಳಲಾಗಿದೆ.

ಅಭಿಯಾನದ ಮೂಲಕ ಆಹಾರ ಕಲಬೆರಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಆಹಾರ ಸುರಕ್ಷತಾ ಕಾಯ್ದೆ-2006 ಮಹತ್ವವನ್ನು ತಿಳಿಸುವುದರಜೊತೆಗೆ, ಸುರಕ್ಷಿತ ಆಹಾರದ ಬಳಕೆಯನ್ನು ಉತ್ತೇಜಿಸುವುದು ಮುಖ್ಯ ಗುರಿಯಾಗಿದೆ.

ಜನಸಾಮಾನ್ಯರ ಸಹಕಾರದೊಂದಿಗೆ ಶುದ್ಧ ಆಹಾರ ಸಂಸ್ಕೃತಿಯನ್ನು ಬೆಳೆಸಿ, ಉತ್ತಮ ಆರೋಗ್ಯಯುತ ಸಮಾಜ ನಿರ್ಮಿಸುವುದೇ ಅಭಿಯಾನದ ಆಶಯವಾಗಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಅನ್ವಯ ಆಹಾರ ವಸ್ತುಗಳ ಉತ್ಪಾದನೆ ಸಂಸ್ಕರಣೆಮತ್ತು ಮಾರಾಟ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಸಣ್ಣ ಮಧ್ಯಮ ಪರಮಾಣದ ಉತ್ಪಾದಕರು, ಬೀದಿ ಬದಿ ಆಹಾರ ವಸ್ತುಗಳ ವ್ಯಾಪಾರಿಗಳು, ಪಾಸ್ಟ್ ಫುಡ್ ಕೇಂದ್ರಗಳು, ಬೇಕರಿಗಳು, ಹೋಟೆಲ್ ಮತ್ತುರೆಸ್ಟೋರೆಂಟ್, ಜ್ಯೂಸ್ ಸೆಂಟರ್, ಐಸ್ ಕ್ರೀಮ್ ಹಾಗೂ ಕಾಂಡಿಮೆಂಟ್ಸ್ ಗಳ ಮಾಲೀಕರುಗಳು ಇಲ್ಲಿನೀಡಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.

ಆಹಾರ ತಯಾರಿಕೆ, ಸಂಗ್ರಹಣೆ, ಸಾಗಾಣಿಕೆ, ಮಾರಾಟ ಮಾಡುವವರು ಕಡ್ಡಾಯವಾಗಿ FSSAI  ನೊಂದಣಿ/ಪರವಾನಿಗೆಯನ್ನು ಹೊಂದಿರಬೇಕಾಗಿರುವುದು ಕಡ್ಡಾಯ. ನಿಷೇಧಿತ ಕೃತಕ ಬಣ್ಣಗಳು ಮತ್ತುಹಾನಿಕಾರಕ ರಸಾಯನಿಕ ವಸ್ತುಗಳನ್ನು ಆಹಾರ ತಯಾರಿಕೆಯಲ್ಲಿ ಬಳಸಬಾರದು. ಆಹಾರ ತಯಾರಿಕೆಯಲ್ಲಿ ಕೃತಕ ರುಚಿಕಾರಕಗಳನ್ನು (ಎಂಎಸ್‌ಜಿ/ಟೇಸ್ಟಿಂಗ್ ಪೌಂಡರ್) ಬಳಕೆ ಮಾಡಬಾರದು. ಕಳಪೆ ಗುಣಮಟ್ಟದ, ಕಲಬೆರಕೆಯಾಗಿರುವ, ಹಾನಿಕಾರಕ ಆಹಾರ ವಸ್ತುಗಳ ತಯಾರಿಕೆ ದಾಸ್ತಾನು ವಿತರಣೆಮತ್ತು ಮಾರಾಟ ಮಾಡುವಂತಿಲ್ಲ. ಅವಧಿ ಮೀರಿದ ಆಹಾರ ಪದಾರ್ಥಗಳು ಮತ್ತು ಅವಧಿ ಮುಗಿಯುವ ದಿನಾಂಕ ಹೊಂದಿರದ ಆಹಾರ ಪದಾರ್ಥಗಳನ್ನು ಮಾರಾಟ ಮಾಡಬಾರದು. ತಪ್ಪುದಾರಿಗೆ ಎಳೆಯುವ ಜಾಹೀರಾತು ನೀಡುವ ಮೂಲಕ ಆಹಾರ ವಸ್ತುಗಳ ಉತ್ಪಾದನೆ, ಸಂಸ್ಕರಣೆ ಮತ್ತುಮಾರಾಟ ಮಾಡಬಾರದು.

ಆಹಾರ ಪದಾರ್ಥಗಳನ್ನು ಅನಾರೋಗ್ಯಕರ ಮತ್ತು ಅನೈರ್ಮಲ್ಯಕರ ವಾತಾವರಣದಲ್ಲಿ ಸಂಸ್ಕರಿಸುವುದು ಮತ್ತು ತಯಾರಿಸುವುದು ನಿಷೇಧಿಸಲಾಗಿದೆ. ಆಹಾರ ತಯಾರಿಕೆ ಸಂಸ್ಕರಣೆಯಲ್ಲಿ ಶುದ್ದಿಕರಿಸಿದ ನೀರುನ್ನುಬಳಕೆ ಮಾಡಬೇಕು. ಕಲಬೆರಕೆ ಕಾರಕ ವಸ್ತುಗಳನ್ನು ಆಹಾರ ತಯಾರಿಕಾ ಸ್ಥಳದಲ್ಲಿ ಹೊಂದಿರಬಾರದು. ಆಹಾರ ತಯಾರಿಕೆ, ಸಂಸ್ಕರಣೆಯಲ್ಲಿ ಶುದ್ಧವಾದ ನೀರನ್ನು ಬಳಕೆ ಮಾಡಬೇಕು. ಮಹಾನಗರ ಪಾಲಿಕೆ/ನಗರಸಭೆ/ಪುರಸಭೆ/ಪಟ್ಟಣ ಅಥವಾ ಗ್ರಾಮ ಪಂಚಾಯಿತಿಯ ವ್ಯಾಪಾರೋಧ್ಯಮ ಪರವಾನಿಗೆ ಹೊಂದಿರಬೇಕಾಗಿರುವುದು ಕಡ್ಡಾಯ. ಗೃಹ ಬಳಕೆಯ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಕೆಮಾಡುವಂತಿಲ್ಲ.

ಇವೇ ಮೊದಲಾದ ಉಪಬಂಧಗಳಿಗೆ ಸಂಬಂಧಪಟ್ಟಂತೆ ಆಹಾರ ವಸ್ತಗಳ ಉತ್ಪಾದನೆ, ಸಂಸ್ಕರಣ ಮತ್ತು ಮಾರಾಟ ವ್ಯವಹಾರದಲ್ಲಿ ತೊಡಗಿರುವ ವ್ಯಕ್ತಿ ಮತ್ತು ಸಂಸ್ಥೆಗಳು ಮೇಲ್ಕಂಡ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಕಂಡುಬಂದಲ್ಲಿ ಅಂತಹ ಅಪರಾಧಗಳಿಗೆ ಗರಿಷ್ಟ 05 ಲಕ್ಷದವರೆಗೆ ದಂಡಮತ್ತು ಗರಿಷ್ಟ 03 ವರ್ಷಗಳವರೆಗೆ ಕಾರಗೃಹ ವಾಸ ಮತ್ತು ಎರಡು ದಂಡನೆಗಳಿಗೆ ಗುರಿಮಾಡಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರನ್ವಯ ಅವಕಾಶ ಕಲ್ಪಿಸಲಾಗಿದ್ದು, ಎಲ್ಲಾ ರೀತಿಯ ಆಹಾರ ವಸ್ತು ಪ್ರವರ್ತಕರುಗಳಿಗೆ ಮೂಲಕ ಸಾರ್ವಜನಿಕ ತಿಳುವಳಿಕೆ ನೀಡಲಾಗಿದೆ.

ಯಾವುದೇ ಉಲ್ಲಂಘನೆಗಳು ಕಂಡುಬದಲ್ಲಿ ಸಾರ್ವಜನಿಕರು, ಆಹಾರ ಸುರಕ್ಷತಾ ಗುಣಮಟ್ಟ ಪ್ರಾಧಿಕಾರದ ಕಛೇರಿ ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳನ್ನು ಹಾಗೂ ಟೋಲ್ ಫ್ರೀ ನಂ.080-22270035 ಅಥವಾ ಆರೋಗ್ಯ ನೀರಿಕ್ಷಕರು/ ಮಹಾನಗರ ಪಾಲಿಕೆ/ ಆಹಾರ ನೀರಿಕ್ಷಕರುಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಇವರನ್ನು ಸಂಪರ್ಕಿಸಲು ಕೋರಿದೆ.    

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments