Homeಜಿಲ್ಲೆಜಿಲ್ಲೆಯ ಶರತ್, ಮಹೇಶ್ ಗೆ ಪತ್ರಕರ್ತರ ವಾರ್ಷಿಕ ಪ್ರಶಸ್ತಿ ಗರಿ

ಜಿಲ್ಲೆಯ ಶರತ್, ಮಹೇಶ್ ಗೆ ಪತ್ರಕರ್ತರ ವಾರ್ಷಿಕ ಪ್ರಶಸ್ತಿ ಗರಿ

Spread the love

ಶಿವಮೊಗ್ಗ,ಮಾ.31: ಜಿಲ್ಲೆಯ ಪತ್ರಕರ್ತರಾದ  ಶರತ್‌ಕುಮಾರ್ ಎಸ್ ಮತ್ತು ಸಾಗರದ ಮಹೇಶ್ ಹೆಗಡೆ ಅವರುಗಳಿಗೆ  ಪ್ರತಿಷ್ಠಿತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ( ಕೆಯುಡಬ್ಲ್ಯೂಜೆ 2024 ನೇಸಾಲಿನ ವಾರ್ಷಿಕ ಪ್ರಶಸ್ತಿ ಸಂದಿದ್ದು, ಜಿಲ್ಲೆಯ ಪತ್ರಿಕೋದ್ಯಮಕ್ಕೆ ಇನ್ನಷ್ಟು ಮರೆಗು ತಂದಿದೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ವಿವಿಧ ವಿಭಾಗಗಳಲ್ಲಿ ಆಹ್ವಾನಿತ ವರದಿಗಳಲ್ಲಿ ಆಯ್ಕೆಗೊಂಡ ಅತ್ಯುತಮ ವರದಿಗಳಿಗಾಗಿ  ಕೊಡ ಮಾಡುವ 2024 ನೇ ಸಾಲಿನ  ವಾರ್ಷಿಕ ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದು, ಆರ್ಥಿಕ ದುರ್ಬಲ ವರ್ಗದವರ ಕುರಿತ ಅತ್ಯುತ್ತಮ  ವರದಿಗಾಗಿ ನೀಡುವ *”ಬಿ.ಜಿ.ತಿಮ್ಮಪ್ಪಯ್ಯ  ಪ್ರಶಸ್ತಿ“* ಗೆ ಶಿವಮೊಗ್ಗದ ಉದಯವಾಣಿ ಪತ್ರಿಕೆ ಹಿರಿಯ ವರದಿಗಾರರಾದ  ಶರತ್ ಕುಮಾರ್.ಎಸ್ ಅವರು ಆಯ್ಕೆಯಾಗಿದ್ದಾರೆ.

ಶರತ್‌ಕುಮಾರ್ ಎಸ್  ಉದಯವಾಣಿ ಪತ್ರಿಕೆಯಲ್ಲಿಅರಣ್ಯ ಇಲಾಖೆಯಿಂದ ವಕ್ಫ್ ಬೋರ್ಡು ಮಾದರಿ ಕಾರ್ಯಾಚರಣೆಶೀರ್ಷಿಕೆಯಡಿ ತುಂಗಾ ಜಲಾಶಯ ಮುಳುಗಡೆ ಸಂತ್ರಸ್ತರ ಕುರಿತು ಬರೆದ  ಸರಣಿ ವರದಿಗೆ ಪ್ರಶಸ್ತಿ ಸಂದಿದೆ.

ಭದ್ರಾವತಿಯ ಸಿದ್ದಲಿಂಗಪ್ಪ ಮತ್ತು ಶ್ರೀಮತಿ ಗಿರಿಜಮ್ಮ  ಅವರ ಪುತ್ರರಾದ ಶರತ್ ಕುಮಾರ್ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಜನಶ್ರೀ ನ್ಯೂಸ್ ಚಾನಲ್, ಪ್ರಜಾವಾಣಿ, ವಿಜಯಕರ್ನಾಟಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಸಿದ್ದಾರೆ . ಪ್ರಸ್ತುತ ಉದಯವಾಣಿ ಪತ್ರಿಕೆಯ ಶಿವಮೊಗ್ಗ ಮುಖ್ಯ ವರದಿಗಾರರಾಗಿದ್ದಾರೆ.

ಎರಡು ದಶಕಗಳಿಂದ ಪತ್ರಿಕೋದ್ಯಮದಲ್ಲಿ ವೃತ್ತಿ ನೈಫುಣ್ಯತೆ ಮತ್ತು ವೃತ್ತಿಪರತೆಯನ್ನು ಕಾಯ್ದುಕೊಂಡಿರುವ ಸಂವೇದನಾಶೀಲ ಗುಣದ ಶರತ್‌ಕುಮಾರ್ ಅವರ ಮಾನವೀಯ ವರದಿಗಳು ಓದುಗರ, ಸರ್ಕಾರದ ಗಮನಸೆಳೆದಿವೆ.

ಮಹೇಶ್ ಹೆಗಡೆ

ಶಿವಮೊಗ್ಗ ಜಿಲ್ಲೆಯ ಸಾಗರದ ಸಂಯುಕ್ತ ಕರ್ನಾಟಕ ಪತ್ರಿಕೆಯ ವರಿದಿಗಾರ ಮಹೇಶ್ ಹೆಗಡೆ  ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ  (ಕೆಯುಡಬ್ಲ್ಯೂಜೆ ) ನೀಡುವ  ಸಮಗ್ರ ವಿಭಾಗದಲ್ಲಿ  *”ಅಭಿಮಾನಿ ಪ್ರಕಾಶನ ಪ್ರಶಸ್ತಿ“* ಗೆ ಭಾಜನರಾಗಿದ್ದಾರೆ.

ಸಾಗರ ತಾಲ್ಲೂಕಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂ ಕಬಳಿಕೆ  ಕುರಿತು ಸಂಯುಕ್ತ ಕರ್ನಾಟಕದಲ್ಲಿ ಸರಣೀ ವರದಿ ಮಾಡಿದ್ದು, ಅದರ ಪರಿಣಾಮ ಲೋಕಾಯುಕ್ತ ತನಿಖೆ ಕೂಡ  ನಡೆದು ಸರ್ಕಾರದ ಗಮನಸೆಳೆದಿತ್ತು. ವರದಿಯನ್ನು ಅತ್ಯುತ್ತಮ  ವರದಿಯನ್ನಾಗಿ ಪರಿಗಣಿಸಿ  2024 ನೇ ಸಾಲಿನ *”ಅಭಿಮಾನಿ ಪ್ರಕಾಶನ  ಪ್ರಶಸ್ತಿಗೆ“* ಅಯ್ಕೆ ಮಾಡಲಾಗಿದೆ.

ಸಾಗರದ ಗಣೇಶ್ ಹೆಗಡೆ ಮತ್ತು ಶ್ರೀಮತಿ ಪಾರ್ವತಿ  ಅವರ ಪುತ್ರರಾಗಿರುವ ಮಹೇಶ್ ಹೆಗಡೆ ಕಳೆದ 27 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ವೃತ್ತಿಪರವಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದು,  ಪ್ರಸ್ತುತ ಸಂಯುಕ್ತ ಕರ್ನಾಟಕಪತ್ರಿಕೆಯ  ಸಾಗರ ವರದಿಗಾರರಾಗಿದ್ದಾರೆ.

ತನಿಖಾ ವರದಿಗಳನ್ನು ಬರೆಯುವಲ್ಲಿ ಸಿದ್ದ ಹಸ್ತರಾಗಿರುವ ಮಹೇಶ್ ಹೆಗಡೆ ಅವರು ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಬರೆದ ತನಿಖಾ ವರದಿಗಳು ತೀರ್ಪುಗಾರರ ಮೆಚ್ಚುಗೆ ಗಳಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು  ಸಮಗ್ರ ವಿಭಾಗದಲ್ಲಿ ಅತ್ಯುತ್ತಮ  ವರದಿಗೆ ನೀಡುವ 2024 ನೇ ಸಾಲಿನ  ಅಭಿಮಾನಿಪ್ರಕಾಶನ  ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಅವರ ವೃತ್ತಿ ಬದ್ದತೆ ಮತ್ತು ಕೌಶಲ್ಯಕ್ಕೆ ಸಂದ ಗೌರವವಾಗಿದೆ. ಪ್ರಶಸ್ತಿ ಪ್ರದಾನ ಏಪ್ರಿಲ್ 11 ಮತ್ತು 12 ರಂದು ಬೀದರ್ ನಲ್ಲಿ ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನದಲ್ಲಿ ಮುಖ್ಯಮಂತ್ರಿ, ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್  ಸಮ್ಮುಖದಲ್ಲಿ  ಪ್ರಶಸ್ತಿಗೆ ಭಾಜನರಾದ ಶರತ್‌ಕುಮಾರ್ ಎಸ್. ಮತ್ತು ಮಹೇಶ್ ‌ಹೆಗಡೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿ ಲೋಕೇಶ್ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments