Homeಜಿಲ್ಲೆಕುವೆಂಪು ವಿವಿ ಯ ಪ್ರಭಾರ ಕುಲಸಚಿವರಾಗಿ ಹೇಮಂತ್‌ ನೇಮಕ

ಕುವೆಂಪು ವಿವಿ ಯ ಪ್ರಭಾರ ಕುಲಸಚಿವರಾಗಿ ಹೇಮಂತ್‌ ನೇಮಕ

Spread the love

ಶಿವಮೊಗ್ಗ, ಏ.1 : ಕುವೆಂಪು ವಿಶ್ವವಿದ್ಯಾಲಯದ ನೂತನ ಪ್ರಭಾರ ಕುಲಸಚಿವರಾಗಿ ಐಎಎಸ್ ಅಧಿಕಾರಿ ಎನ್ .ಹೇಮಂತ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಈ ಹಿಂದೆ ಇದ್ದ ಕುಲಸಚಿವ ಎ. ಎಲ್ ಮಂಜುನಾಥ್ ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ, ಭ್ರಷ್ಟಾಚಾರದ ಆಪಾದನೆ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡುವಂತೆ ಸ್ವತಃ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಅವರೇ ಸರಕಾರಕ್ಕೆ ಪತ್ರ ಬರೆದಿದ್ದರು. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸದೇ ಇದ್ದು, ಬಗ್ಗೆ ಪತ್ರಿಕೆಯಲ್ಲಿ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಅದಕ್ಕೆ ಸರಕಾರ ಸ್ಪಂದಿಸಿ ವರ್ಗಾವಣೆ ಆದೇಶ ಹೊರಡಿಸಿದೆ. ಈ ಸಂಬಂಧ ಕೂಡಲೇ ಕರ್ತವ್ಯದಿಂದ ಬಿಡುಗಡೆಗೊಂಡು ಮುಂದಿನ ಸ್ಥಳ ನಿಯುಕ್ತಿಗಾಗಿ ಸಿಬ್ಬಂದಿ ಮತ್ತುಆಡಳಿತ ಸುಧಾರಣೆ ಇಲಾಖೆಯಲ್ಲಿ ವರದಿ ಮಾಡಿಕೊಳ್ಳುವಂತೆ ಸರ್ಕಾರ ಸೂಚಿಸಿದ್ದು, ಈ ಸ್ಥಳಕ್ಕೆ ಹೇಮಂತ್ ಅವರನ್ನು ನೇಮಕ ಸರ್ಕಾರ ಆದೇಶ ಮಾಡಲಾಗಿದೆ.

ಪ್ರಸ್ತುತ ಹೇಮಂತ್ ಅವರು ಶಿವಮೊಗ್ಗ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments