ಶಿವಮೊಗ್ಗ, ಮಾ.3: ವೆಂಕಟೇಶ ನಗರದ 2 ನೇ ತಿರುವಿನಲ್ಲಿರುವ ಶ್ರೀ ಸರ್ವಸಿದ್ದಿ ವಿನಾಯಕ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಏ. 3 ಮತ್ತು 4 ರಂದು ಶ್ರೀ ಸರ್ವಸಿದ್ದಿ ವಿನಾಯಕ ಹಾಗೂ ನಾಗದೇವರ ಪುನರ್ ಪ್ರತಿಷ್ಠಾಪನೆಯ 6 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಕಾರ್ಯದರ್ಶಿ ನಾಗರಾಜ್ ಕಂಕಾರಿ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏ. 3ರ ಇಂದು ಸಂಜೆ 6 ಗಂಟೆಗೆ ಶ್ರೀ ಗಣಪತಿ ಪೂಜೆ, ಧಾರ್ಮಿಕ ಕಾರ್ಯಕ್ರಮ, 8 ಗಂಟೆಗೆ ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ ಎಂದರು.
ಏ.4 ರಂದು ಬೆಳಿಗ್ಗೆ 9 ಗಂಟೆಗೆ ಗಣಪತಿ ಹೋಮ, ನಾಗ ಮತ್ತು ಗಣಪತಿಗೆ ಕಲಾ ಹೋಮ, ಕುಂಬಾಭೀಷೆಕ, ಆಶ್ಲೇಷ ಬಲಿ, ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ಹಾಗೂ 1 ಗಂಟೆಗೆ ಸಾರ್ವಜನಿಕ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದರು.
ಏ.6 ರಂದು ಸಂಜೆ 6.30 ಕ್ಕೆ ವೆಂಕಟೇಶ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಲಾಸಂಗಮ ಕಲಾವಿದರಿಂದ ವಿಜಯ್ ಕುಮಾರ್ ಕೊಡಿಯಲ್ ಬೈಲ್ ನಿರ್ದೇಶನದ ಶಿವದೂತ ಗುಳಿಗ ಪೌರಾಣಿಕ ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು
ಪತ್ರಿಕಾಗೋಷ್ಟಿಯಲ್ಲಿ ಟ್ರಸ್ಟ್ನ ಅಧ್ಯಕ್ಷ ಎಂ.ರವಿ, ಖಜಾಂಚಿ ಎ.ಶಿವಕುಮಾರ್, ಟ್ರಸ್ಟಿಗಳಾದ ಎ.ವೆಂಕಟೇಶ್, ಭವಾನಿರಾವ್, ಎಂ.ರಾಮು ಇತರರು ಇದ್ದರು.
