ಶಿವಮೊಗ್ಗ, ಏ.4: ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಎಂಕಾಂ ವಿಭಾಗದಿಂದ ಕಾಲೇಜಿನ ಆವರಣದಲ್ಲಿ ಏ.8ರಂದು ಬೆಳಿಗ್ಗೆ 10.30ಕ್ಕೆ ಎ.ಐ. ವಿಭಾಗದಲ್ಲಿ ಉದಯೋನ್ಮುಖ ತಂತ್ರಜ್ಞಾನ ಮತ್ತು ವಾಣಿಜ್ಯ ಕುರಿತು ಒಂದು ದಿನದ ರಾಷ್ಟ್ರಮಟ್ಟದ ಸಮ್ಮೇಳನ ಆಯೋಜಿಸಲಾಗಿದೆ.
ಕಾರ್ಯಾಗಾರವನ್ನು ಕುವೆಂಪು ವಿವಿ ಕುಲಸಚಿವ (ಮೌಲ್ಯಮಾಪನ) ಡಾ.ತಿಮ್ಮರಾಯಪ್ಪ ಉದ್ಘಾಟಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ಕುವೆಂಪು ವಿ.ವಿ ಹಿರಿಯ ಪ್ರಾಧ್ಯಾಪಕ ಹಾಗೂ ಹಣಕಾಸು ಅಧಿಕಾರಿ ಪ್ರೊ.ಹೆಚ್.ಎನ್.ರಮೇಶ್, ಬೆಳಗಾವಿ ರಾಣಿ ಚನ್ನಮ್ಮ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಪ್ರೊ.ಆಕಾಶ್.ಎಸ್.ಬಿ.. ಕುವೆಂಪು ವಿವಿ ನಿರ್ವಹಣಾ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ.ಆರ್. ಹಿರೇಮಣಿ ನಾಯಕ್ ಭಾಗವಹಿಸುವರು. ಅಧ್ಯಕ್ಷತೆಯನ್ನು ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಪ್ರೊ.ಅವಿನಾಶ್ ಟಿ. ವಹಿಸುವರು. ಮಧ್ಯಾಹ್ನ 3.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕುವೆಂಪು ವಿವಿ ವಾಣಿಜ್ಯ ಕಾಲೇಜಿನ ಪ್ರಾಧ್ಯಾಪಕ ಪ್ರೊ.ವೆಂಕಟೇಶ್ ಎಸ್.. ಪ್ರೊ.ಮಂಜುನಾಥ್ ಕೆ.ಆರ್.. ಕಾಲೇಜಿನ ಪ್ರಾಧ್ಯಾಪಕರುಗಳಾದ ಪ್ರೊ.ಮಮತಾ.ಎಸ್.ಎಂ., ಪ್ರೊ.ಗಿರಿಧರ್ ಕೆ.ವಿ., ಡಾ.ವೀರಶೆಟ್ಟಿ ಜಿ. ರಾಥೋಡ್. ಬಾಲಸ್ವಾಮಿ ಡಾ.ಶಶಿರಾಜ್ ಯು, ಸಹಸಂಚಾಲಕಿ ಸರಳಾ ಕೆ.ಎಸ್. ಸೇರಿದಂತೆ ಬೋಧಕ ಮತ್ತು ಬೋಧಕೇತರ ವರ್ಗದವರು ಭಾಗವಹಿಸಲಿದ್ದಾರೆ.
ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ಪ್ರಬಂಧ ಮಂಡಿಸಲು ಅವಕಾಶವಿದೆ. ಹೆಚ್ಚಿನ ವಿವರಕ್ಕೆ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಎಂಕಾಂ ವಿಭಾಗವನ್ನು ಸಂಪರ್ಕಿಸುವಂತೆ ಸಂಚಾಲಕ ಡಾ.ಕುಂದನ್ ಬಸವರಾಜ್ ಕೋರಿದ್ದಾರೆ.
