ಶಿವಮೊಗ್ಗ, ಏ.06;ಕುಂಸಿ ಉಪವಿಭಾಗದ ಹಾರ್ನಳ್ಳಿ ಶಾಖಾ ವ್ಯಾಪಿಯಲ್ಲಿ ಎಲ್.ಟಿ ರೀ–ಕಂಡರಿಂಗ್ ತುರ್ತುಕಾಮಗಾರಿಯನ್ನು ನಿರ್ವಹಿಸುವುದರಿಂದ ಕುಂಸಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಹಳ್ಳಿಗಳಾದ ಹಾರ್ನಳ್ಳಿ, ರಾಮನಗರ, ಮುದುವಾಲ, ಯಡವಾಲ, ದೇವಬಾಳು, ತ್ಯಾಜವಳ್ಳಿ, ಕೊನಗವಳ್ಳಿ, ಹಿಟ್ಟೂರು, ನಾರಾಯಣಪುರ, ಮಲ್ಲಾಪುರ, ರಟ್ಟೆಹಳ್ಳಿ, ವಿಠಗೊಂಡನಕೊಪ್ಪ, ವೀರಣ್ಣನಬೇನವಳ್ಳಿ, ಕೆಸುವಿನ ಕಟ್ಟೆ, ಸೇವಲಾಲ್ ನಗರ, ಯರೆಕೊಪ್ಪ ಚಾಮೇನಹಳ್ಳಿ, ನಾಗರಭಾವಿ ಹಾಗೂ ಸುತ್ತಮುತ್ತಗ್ರಾಮಗಳ ವ್ಯಾಪ್ತಿಯಲ್ಲಿ ಏ. 8 ರಂದು ಬೆಳಗ್ಗೆ 10:00 ರಿಂದ ಸಂಜೆ 6:00 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
