Homeಜಿಲ್ಲೆಕೊಲೆ ಬೆದರಿಕೆ, ಅರೋಪಿಗೆ ಕಾರಾವಾಸ

ಕೊಲೆ ಬೆದರಿಕೆ, ಅರೋಪಿಗೆ ಕಾರಾವಾಸ

Spread the love

ಶಿವಮೊಗ್ಗ,ಏ.6: ಮನೆಗೆ ಅಕ್ರಮ ಪ್ರವೇಶ ಮಾಡಿ, ಅವರಿಗೆ ಹಲ್ಲೆ ಮಾಡಿ, ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿದ ವ್ಯಕ್ತಿಗೆ 01  ವರ್ಷಸಾದಾ ಕಾರಾವಾಸ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ.

ದಿನಾಂಕ:03-10-2021 ರಂದು  ಅಹ್ಮದ್ ಷರೀಫ್ 34 ವರ್ಷ ನೇತಾಜಿ ರಸ್ತೆ 1 ನೇ ಕ್ರಾಸ್ ಹಳೆನಗರಭದ್ರಾವತಿ ಈತನು ಎದುರು ಮನೆಯ ವಾಸಿ ಮಹಮ್ಮದ್‌ ಸಾಬ್‌ ರವರ ಮನೆಗೆ ಅಕ್ರಮ ಪ್ರವೇಶ ಮಾಡಿ, ಅವರಿಗೆ ಹಲ್ಲೆ ಮಾಡಿ, ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದು, ಬಗ್ಗೆ ಹಳೇನಗರ ಠಾಣಾಗುನ್ನೆ ಸಂಖ್ಯೆ: 0117/2021 ಕಲಂ: 506, 504, 323, 307, 448 ಅಡಿಯಲ್ಲಿ ಪ್ರಕರಣವು ದಾಖಲಾಗಿರುತ್ತದೆ.

 ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಪಿಎಸ್ಐ ಈರೇಶ್‌ ರವರು ಪ್ರಕರಣದ ತನಿಖೆ ಪೂರೈಸಿ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ. ಸರ್ಕಾರಿ ಅಭಿಯೋಜಕರವರು ರತ್ನಮ್ಮ ಪಿ. ವಾದಮಂಡಿಸಿದ್ದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಭದ್ರಾವತಿಯ  ಘನ 4ನೇಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ರವರು ಆರೋಪಿಗೆ 01  ವರ್ಷ ಸಾದಾ ಕಾರಾವಾಸ ಶಿಕ್ಷೆ ಮತ್ತು ರೂ. 2,000/- ದಂಡ ವಿಧಿಸಿ ಆದೇಶಿಸಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments