Homeಜಿಲ್ಲೆಏ. 9 ರಂದು ತೃಪ್ತಿ ಹೆಲ್ತ್‌ಕೇರ್ ನಿಂದ ಉಚಿತ ಆರೋಗ್ಯ ತಪಾಸಣೆ

ಏ. 9 ರಂದು ತೃಪ್ತಿ ಹೆಲ್ತ್‌ಕೇರ್ ನಿಂದ ಉಚಿತ ಆರೋಗ್ಯ ತಪಾಸಣೆ

Spread the love

ಶಿವಮೊಗ್ಗ ,ಏ.7 : ತೃಪ್ತಿ ಹೆಲ್ತ್‌ಕೇರ್, ಜಿಲ್ಲಾ ಅಖಿಲ ಕರ್ನಾಟಕ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟದ ವತಿಯಿಂದ ಕಾರ್ಮಿಕರಿಗೆ ಹಾಗೂ ಕುಟುಂಬದವರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ದುರ್ಗಿಗುಡಿ ಮುಖ್ಯ ರಸ್ತೆಯ ಶನೇಶ್ವರ ದೇವಸ್ಥಾನದ ಹತ್ತಿರವಿರುವ ವೈಎಂಎಸ್ ಆರ್ಕೆಡ್‌ನಒಂದನೇ ಮಹಡಿ(ಲಿಫ್ಟ್ ಸೌಲಭ್ಯವಿದೆ)ಯಲ್ಲಿ .9 ರಂದು ಬೆಳಿಗ್ಗೆ 9 ಗಂಟೆಗೆ ಆಯೋಜಿಸಲಾಗಿದೆ ಎಂದುಆಸ್ಪತ್ರೆಯ ಕಿಡ್ನಿ ಮತ್ತು ಮೂತ್ರಕೋಶ ರೋಗಗಳ ತಜ್ಞ ಡಾ.ಎಸ್.ಚಂದ್ರಶೇಖರ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆರೋಗ್ಯ ಇಂದು ಬಹಳ ಮುಖ್ಯವಾಗಿದೆ. ಕಾರ್ಮಿಕರು ಸೇರಿದಂತೆ ಅನೇಕ ಬಡವರು ತಮ್ಮ ಆರೋಗ್ಯದ ಬಗ್ಗೆ ಅತ್ಯಂತ ನಿರ್ಲಕ್ಷ್ಯ ವಹಿಸುತ್ತಾರೆ. ಇದರಿಂದ ತುಂಬಾ ತೊಂದರೆಯಾಗುತ್ತದೆ. ಹಿನ್ನಲೆಯಲ್ಲಿ ಬಡವರಿಗೆ ಮತ್ತು ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು .9 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಆಯೋಜಿಸಲಾಗಿದೆ ಎಂದರು.

ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಎಸ್.ಚಂದ್ರಶೇಖರ್ ವಹಿಸಲಿದ್ದು, ಇದೇ ಸಂದರ್ಭದಲ್ಲಿ ಕಾರ್ಮಿಕರ ಕಾರ್ಡ್‌ನ್ನು ವಿತರಿಸಲಾಗುವುದು. ವಿವಿಧ ವಿಭಾಗದ  ನುರಿತ ತಜ್ಞರುಗಳು ತಪಾಸಣಾ ಶಿಬಿರದಲ್ಲಿ ಭಾಗವಹಿಸುವರು ಎಂದರು.

ಇಸಿಜಿ, ಮಧುಮೇಹ ಪರೀಕ್ಷೆ, ಬಿಪಿ, ಸ್ಕ್ಯಾನಿಂಗ್, ಆಲ್ಟ್ರಾಸೌಂಡ್ ಸ್ಕ್ಯಾನಿಂಗ್, ಮೂತ್ರಪಿಂಡದ ಕಲ್ಲಿನಸ್ಕ್ಯಾನ್, ಯುರಾಲಜಿ ಸೇರಿದಂತೆ ಹಲವು ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು. ಹಾಗೂ ಕಾರ್ಯಕ್ರಮದಲ್ಲಿ ಶ್ರಮ ಕಾರ್ಡ್, ಅಸಂಘಟಿತ ಕಾರ್ಮಿಕರ ಕಾರ್ಡ್, ಸೆಂಟ್ರಲ್ ಬ್ಯಾಂಕ್, ಜಿರೋಬ್ಯಾಲೆನ್ಸ್ ಅಕೌಂಟ್ ಮಾಡಿಸಿಕೊಡಲಾಗುತ್ತದೆ. ಇದಕ್ಕಾಗಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಹಾಗೂ ಎರಡು ಪಾಸ್‌ಪೋರ್ಟ್ ಸೈಜ್ ಫೋಟೋಗಳನ್ನು ತರಬೇಕಾಗುತ್ತದೆ ಎಂದರು.

ನಮ್ಮ ತೃಪ್ತಿ ಹೆಲ್ತ್‌ಕೇರ್‌ನಲ್ಲಿ ಗುರುವಾರ ಕಟ್ಟಡ ಕಾರ್ಮಿಕರಿಗೆ, ಅಸಂಘಟಿತ ಕಾರ್ಮಿಕರಿಗೆ ಹಾಗೂ ಅವರ ಕುಟುಂಬದವರಿಗೆ ಉಚಿತ ಆರೋಗ್ಯ ತಪಾಸಣೆ ಇರುತ್ತದೆ. ಹೆಚ್ಚಿನ ಪರೀಕ್ಷೆಗಳಿಗೆ ಮತ್ತು ಚಿಕಿತ್ಸೆಗೆ ಶೇ.10 ರಷ್ಟು ರಿಯಾಯಿತಿ ಕೂಡ ದೊರೆಯುತ್ತದೆ.

ಕಿಡ್ನಿ ಮತ್ತು ಮೂತ್ರಕೋಶ ರೋಗಗಳ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಎಸ್.ಚಂದ್ರಶೇಖರ್ ಅವರು ಲಭ್ಯವಿರುತ್ತಾರೆ. ಮತ್ತು ಯಶಸ್ವಿನಿ, ಧರ್ಮಸ್ಥಳ ಸಂಪೂರ್ಣ ಸುರಕ್ಷಾ ಯೋಜನೆ, ಆಯುಷ್ಮಾನ್ ಭಾರತ್, ಇಎಸ್‌ಐ, ಜ್ಯೋತಿ ಸಂಜೀವಿನಿ, ಕೆಎಸ್‌ಆರ್‌ಟಿಸಿ ಹಾಗೂ ಪೊಲೀಸ್ ಇಲಾಖೆಯ ಆರೋಗ್ಯಭಾಗ್ಯ ಯೋಜನೆ ಹಾಗೂ ಇತರೆ ಎಲ್ಲಾ ಕಂಪನಿ ಕಾರ್ಪೋರೇಟರ್‌ಗಳ ಹೆಲ್ತ್ ಇನ್ಸುರೆನ್ಸ್‌ಗಳ ಸೌಲಭ್ಯಗಳನ್ನು ನಮ್ಮಲ್ಲಿ ಪರಿಗಣಿಸಲಾಗುತ್ತದೆ ಎಂದರು.

ಹೆಚ್ಚಿನ ವಿವರಗಳಿಗೆ 84534-75775, 94814-40239, 95138-78265 ಗೆ ಸಂಪರ್ಕಿಸಬಹುದುಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಮಿಕ ಒಕ್ಕೂಟದ ಪ್ರಮುಖರಾದ ಸಂಜಯ್‌ಕುಮಾರ್, ಕುಮರೇಶ್, ಸತೀಶ್, ಮಂಜುನಾಥ್, ಸ್ವಾಮಿ, ವೇಲು, ರಜಿನಿ, ಶಾಂತಾ ರವಿಕುಮಾರ್ ಸೇರಿದಂತೆ ಹಲವರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments