Homeಜಿಲ್ಲೆಜ್ಯೋತಿಷಿ ಕಮಲಾಕರ್ ಭಟ್ ಕೊರ್ಟ್ ಗೆ ಹಾಜರು

ಜ್ಯೋತಿಷಿ ಕಮಲಾಕರ್ ಭಟ್ ಕೊರ್ಟ್ ಗೆ ಹಾಜರು

Spread the love

ಶಿವಮೊಗ್ಗ, ಏ.7: ಕೊಲೆ ಆರೋಪಿ, ಜ್ಯೋತಿಷಿ ಕಮಲಾಕರ್ ಭಟ್ ಇಂದು ಶಿವಮೊಗ್ಗ ಕೋರ್ಟ್ ಗೆಹಾಜರಾಗಿದ್ದು ಅವರನ್ನ ಎರಡು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಲಾಗಿದೆ. ಶಿವಮೊಗ್ಗದ ಪೋಕ್ಸೋ ಕೋರ್ಟ್ ಗೆ ಹಾಜರು ಪಡಿಸಿದ ಪೊಲೀಸರು 2 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಲಾಗಿದೆ

ಕಮಲಾಕರ ಭಟ್ಟರನ್ನ ವಿಚಾರಣೆಗಾಗಿ ಪೊಲೀಸರ ವಶಕ್ಕೆ ನೀಡುತ್ತಿದ್ದಂತೆ ವಶಕ್ಕೆ ಪಡೆದು, ಮೆಗ್ಗಾನ್ಆಸ್ಪತ್ರೆಗೆ ಮೆಡಿಕಲ್ ಟೆಸ್ಟ್ ಗೆ ಕರೆದೊಯ್ಯಲಾಗಿದೆ. ಮೆಡಿಕಲ್ ಟೆಸ್ಟ್ ಬಳಿಕ ವಿಚಾರಣೆ ಹಾಗೂ ಸ್ಥಳಮಹಜರು ಮಾಡಲಾಗಿದೆ. ನಾಳೆ ಸಂಜೆ ಮತ್ತೇ ತುಂಗಾನಗರ ಠಾಣೆ ಪೊಲೀಸರು ಹಾಜರು ಪಡಿಸಲಿದ್ದಾರೆ

ವಸಂತ್ ನಾಯ್ಕ್ ಕೊಲೆ ಪ್ರಕರಣದ ವಿಚಾರದಲ್ಲಿಯೇ ಭಟ್ಟರ ಮೇಲೆ ಮತ್ತೊಂದು ಪೋಕ್ಸೋ ಕಾಯ್ದೆ ಅಡಿದೂರು ದಾಖಲಾಗಿತ್ತು. ಇಂದು ವಿಚಾರವಾಗಿ ಭಟ್ಟರನ್ನ ಶಿವಮೊಗ್ಗ ಪೋಕ್ಸೋ ಕೋರ್ಟ್ ಗೆ ಹಾಜರಿಪಡಿಸಲಾಗಿದೆ

ಉತ್ತರ ಕನ್ನಡದ ಸಿದ್ದಾಪುರ ಠಾಣೆಯಲ್ಲಿ ಭಟ್ಡರ ವಿರುದ್ಧ ಪೋಕ್ಸೋ ಕೇಸ್  ದಾಖಲಾಗಿತ್ತು. ಘಟನಾ ಸ್ಥಳದ ಆಧಾರದಲ್ಲಿ ಸಿದ್ದಾಪುರ ಪೊಲೀಸರು ತುಂಗ ನಗರ ಪೊಲೀಸ್ ಠಾಣೆಗೆ ಕೇಸ್ ವರ್ಗಾಯಿಸಿದ್ದರು

ಸಿದ್ದಾಪುರದ ಅವರಗುಪ್ಪ ಗ್ರಾಮದ ವಸಂತ್ ನಾಯ್ಕ್ ಕೊಲೆ ಪ್ರಕರಣದಲ್ಲಿ ಕಮಲಾಕರ್ ಭಟ್  ಮೂರನೇ ಆರೋಪಿಯಾಗಿದ್ದರು. ಕಳೆದ ಫೆಬ್ರವರಿಯಲ್ಲಿ  ವಸಂತ್ ನಾಯ್ಕ್ ಕೊಲೆನಡೆದಿತ್ತು. ಕಾರವಾರ ಜೈಲಿನಿಂದ ಶಿವಮೊಗ್ಗ ಪೊಕ್ಸೋ ಕೋರ್ಟ್ ಗೆ  ಪೊಲೀಸರು ಕರೆತಂದಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments