ಶಿವಮೊಗ್ಗ, ಏ.7: ಆರ್‌ಟಿಓ ಕಚೇರಿಯ ಪಕ್ಕದ ಸಾರ್ವಜನಿಕ ಶೌಚಾಲಯ ಬೀಗ ಮುದ್ರೆ ಬಿದ್ದು ಬಹಳಕಾಲವಾಗಿದೆ. ಇಲ್ಲಿ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಇಲ್ಲ ನೀರಿನ ಟ್ಯಾಂಕ್ ಕೆಳಗಡೆಯೇ ಈ ಶೌಚಾಲಯಇದ್ದು ನೀರು ಸರಬರಾಜು ಇರುವುದಿಲ್ಲ. ಶೌಚಾಲಯ ಇದ್ದರೂ ಕೂಡ ಸಾರ್ವಜನಿಕರಿಗೆ ಲಭ್ಯವಾಗದೇಇರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಮಾಹಿತಿ ಪ್ರಕಾರ ಗುತ್ತಿಗೆದಾರ ಈ ಶೌಚಾಲಯದ ಬಿಲ್ಲನ್ನು ಮಾಡಿಕೊಳ್ಳುತ್ತಿದ್ದಾರೆ. ಆದರೆ ಸೌಲಭ್ಯ ನೀಡುತ್ತಿಲ್ಲ ಎಂಬುದು ಸ್ಥಳೀಯರ ಆರೋಪ. ಸಾವಿರಾರು ಜನರಿಗೆ ಇದರಿಂದ ತೊಂದರೆಯಾಗಿದೆ. ಪ್ರತಿನಿತ್ಯ ಆರ್‌ಟಿಓ ಕಚೇರಿಗೆ ಮತ್ತು ಜಿಲ್ಲಾಧಿಕಾರಿಗಳ ಕಛೇರಿ, ಅಕ್ಕಪಕ್ಕದ ಇನ್ನಿತರ ಸರ್ಕಾರಿ ಕಛೇರಿಗೆಕೆಲಸ ಕಾರ್ಯಗಳಿಗೆ ಬರುವ ಮತ್ತು ಕೋರ್ಟಿಗೆ ಬರುವ ಸಾರ್ವಜನಿಕರಿಗೆ ಶೌಚಾಲಯ ಇಲ್ಲದೆ ಸಮಸ್ಯೆಯಾಗಿದ್ದು ಕೂಡಲೇ ಪಾಲಿಕೆ ಆಯುಕ್ತರು ಈ ಬಗ್ಗೆ ಗಮನಹರಿಸಿ ಸಾರ್ವಜನಿಕರ ಉಪಯೋಗಕ್ಕೆ ಈ ಶೌಚಾಲಯ ದೊರೆಯುವಂತೆ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
