Homeಜಿಲ್ಲೆಜಿಲ್ಲೆಯ ವಿವಿಧ ಇಲಾಖೆಗಳ ಮೇಲೆ ಲೋಕಾಯುಕ್ತ ದಾಳಿ

ಜಿಲ್ಲೆಯ ವಿವಿಧ ಇಲಾಖೆಗಳ ಮೇಲೆ ಲೋಕಾಯುಕ್ತ ದಾಳಿ

Spread the love

ಶಿವಮೊಗ್ಗ,ಏ.7: ಶಿವಮೊಗ್ಗದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕಛೇರಿ ಮತ್ತುವ್ಯವಸ್ಥಾಪಕರ ಕಛೇರಿ ಹಾಗೂ ಇಬ್ಬರು ಅಧಿಕಾರಿಗಳಿಗೆ ಸೇರಿದಂತೆ ಹಲವೆಡೆ ಬೆಳಿಗ್ಗೆಯಿಂದಲೇಲೋಕಾಯುಕ್ತ ಅಧಿಕಾರಿಗಳ ಐದು ತಂಡ ಏಕ ಕಾಲದಲ್ಲಿ ದಾಳಿಮಾಡಿ ಪರಿಶೀಲನೆ ನಡೆಸುತ್ತಿದೆ.

ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ಆರ್.ಶೋಭಾರವರ ಮನೆ ಹಾಗೂ ಅವರಿಗೆ ಸೇರಿದ ಶಿಕಾರಿಪುರಮತ್ತು ಸಾಗರದಲ್ಲೂ ದಾಳಿ ನಡೆದಿದೆ. ಶಿಕಾರಿಪುರ ಪಟ್ಟಣದ ಚನ್ನಕೇಶವ ನಗರದಲ್ಲಿನ ಮನೆ ಮತ್ತುತರಲಘಟ್ಟ ಬಳಿಯ 4 ಎಕರೆ ತೋಟ ಹಾಗೂ ಫಾರ್ಮ್‌ಹೌಸ್ ಮತ್ತು ಅವರ ಒಡೆತನದ ಸಾಗರತಾಲ್ಲೂಕಿನ ಆಚಾಪುರದ ಬಳಿಯ ಶಾಲೆ, ನವುಲೆ ಬಳಿಯ ಮನೆಯಲ್ಲೂ ಹಾಗೂ ಕೆಇಬಿ ವೃತ್ತದಲ್ಲಿರುವಬಿಸಿಎಂ ಜಿಲ್ಲಾ ಕಛೇರಿಯ ಮೇಲೂ ದಾಳಿ ಮಾಡಿ ಆದಾಯ ಮೀರಿದ ಆಸ್ತಿಯ ಬಗ್ಗೆ ಕಡತ ಪರಿಶೀಲನೆಮಾಡುತ್ತಿದ್ದಾರೆ.

ಬಿಸಿಎಂ ಇಲಾಖೆಯ ವ್ಯವಸ್ಥಾಪಕ ರಾಘವೇಂದ್ರ ಅವರ ಚಾಲುಕ್ಯ ನಗರದಲ್ಲಿರುವ ಮನೆಯ ಮೇಲೆ ಕೂಡದಾಳಿಮಾಡಿ ದಾಖಲೆ ಪರಿಶೀಲಿಸಲಾಗುತ್ತಿದೆ.

ದಾವಣಗೆರೆಯ ಲೋಕಾಯುಕ್ತ ಎಸ್‌ಪಿ ಎಂ.ಎಸ್. ಕೌಲಾಪುರೆ ನೇತೃತ್ವದಲ್ಲಿ ದಾಳಿ ನಡೆದಿದ್ದು, ಶಿವಮೊಗ್ಗ, ಹಾವೇರಿ, ದಾವಣಗೆರೆ ಲೋಕಾಯುಕ್ತ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments